‘ ಈಗ ಹಿಟ್ಟು ಲೀಟರ್ ಗೆ 40 ರೂಪಾಯಿ ಆಗಿದೆ ‘ ಎಂದ ರಾಹುಲ್ ಗಾಂಧಿ | ‘ ನಿಮಗೆ ಮಂಡೆ ಸರಿ ಉಂಟಾ ‘ ಅಂತ ವ್ಯಾಪಕ ಟ್ರೊಲ್ ಆಗುತ್ತಿರುವ ಖ್ಯಾತ ಕಾಮಿಡಿಯನ್ ರಾಹುಲ್ ಗಾಂಧಿ !
ಮತ್ತೆ ರಾಹುಲ್ ಗಾಂಧಿ ಮಾಸ್ ಎಂಟರ್ಟೈನ್ ಮೆಂಟ್ ಕೊಡಲು ರೆಡಿಯಾಗಿದ್ದಾರೆ. ಬಾಲಿವುಡ್ನ ಸಾಲು ಸಾಲು ಚಿತ್ರಗಳು ನೆಲಕ್ಕುರುಳಿದ ಹಾಗೆ, ಉತ್ತರ ಭಾರತದಲ್ಲಿ ಉಂಟಾದ ಮನರಂಜನೆಯ ವ್ಯಾಕ್ಯೂಮ್ ಅನ್ನು ತುಂಬಲು ರಾಹುಲ್ ಗಾಂಧಿಯವರು ರೆಡಿಯಾದಂತಿದೆ.
ನಿನ್ನೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ದೇಶದಾದ್ಯಂತ ಪ್ರತಿಭಟನೆ ನಡೆಸಲಾಯಿತು.ಇದರ ಅಂಗವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ನಡೆದಿದೆ. ಆ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಯಥಾಪ್ರಕಾರ ತಮ್ಮ’ ಕಲಾ ಪ್ರೌಢಿಮೆ’ ಮೆರೆದಿದ್ದಾರೆ. ಅಲ್ಲಿ ರಾಹುಲ್ ಮಾತಾಡಿದ ವಿಷಯವೊಂದು ದೊಡ್ಡ ಕಾಮಿಡಿ ಸಬ್ಜೆಕ್ಟ್ ಆಗಿದ್ದು, ದೇಶಾದ್ಯಂತ ಅದು ಟ್ರೋಲ್ ಆಗುತ್ತಿದೆ.
ಬಾಯ್ತಪ್ಪಿನ ಮಾತುಗಳಿಗೆ ಈಗಾಗಲೇ ಜಗತ್ ವಿಖ್ಯಾತರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇಲ್ಲಿಯೂ ಮಾತಿನ ಎಡವಟ್ಟು ಮಾಡಿಕೊಂಡಿದ್ದು, ಹಿಟ್ಟನ್ನು ಕೆಜಿ ಲೆಕ್ಕದಲ್ಲಿ ಹೇಳುವ ಬದಲು ಲೀಟರ್ ನಲ್ಲಿ ಅಳೆದು ತಮ್ಮ ಜನರಲ್ ನಾಲೆಜ್ ಎಷ್ಟು ಇದೆ ಎಂದು ದೇಶದ ಜನರ ಮುಂದೆ ತೋರಿಸಿದ್ದಾರೆ.
ಅವರು ಅಲ್ಲಿ ಆಡಿದ ಮಾತುಗಳ ವಿಡಿಯೋ ಶೇರ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ.
“ಹಿಟ್ಟಿನ ಬೆಲೆ ಈ ಮೊದಲು ಪ್ರತಿ ಲೀಟರ್ ಗೆ 22 ರೂಪಾಯಿಗಳಿದ್ದು, ಈಗ ಅದು 40 ರುಪಾಯಿಗಳಾಗಿದೆ ” ಎಂದು ರಾಹುಲ್ ಗಾಂಧಿ ಹೇಳಿದ್ದು, ಇದಕ್ಕೆ ಟ್ರೋಲ್ ಮಾಡುತ್ತಿರುವ ಟ್ರೋಲಿಗರು,”ಹಿಟ್ಟನ್ನು ಲೀಟರ್ ನಲ್ಲಿ ಯಾರಾದರೂ ಮಾರುತ್ತಾರಾ ಮಾರ್ರೆ? ನಿಮಗೆ ಮಂಡೆ ಸಮ ಉಂಟಾ ?” ಈ ಪ್ರಾಥಮಿಕ ಮಾಹಿತಿಯೂ ನಿಮಗೆ ಇಲ್ಲವಲ್ಲ ಸ್ವಾಮಿ ಎಂದು ಲೇವಡಿ ಮಾಡುತ್ತಿದ್ದಾರೆ. ಈ ವಿಷಯದ ಬಗ್ಗೆ ರಾಹುಲ್ ಗಾಂಧಿಯವರು ಹೇಳಿದ ವಿಡಿಯೋವನ್ನು ಇಲ್ಲಿ ನೋಡಿ.