KIOCL ನಿಂದ ವಿವಿಧ ಹುದ್ದೆಗಳಿಗೆ ಅಧಿಸೂಚನೆ ಪ್ರಕಟ | ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಕುದುರೆ ಮುಖ ಕಬ್ಬಿಣದ ಅದಿರು ಕಂಪನಿ ಲಿಮಿಟೆಡ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳನ್ನು ಬೆಂಗಳೂರು ಕಚೇರಿಯಲ್ಲಿ ನೇಮಕ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.

 

ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 02-09-2022
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 24-09-2022
ಅಪ್ಲಿಕೇಶನ್ ಪ್ರಿಂಟ್ ತೆಗೆದುಕೊಳ್ಳಲು ಕೊನೆ ದಿನಾಂಕ:
30-09-2022

ಉದ್ಯೋಗ ಸಂಸ್ಥೆ : ಕುದುರೆ ಮುಖ ಕಬ್ಬಿಣ ಅದಿರು ಲಿಮಿಟೆಡ್ (KIOCL)
ಹುದ್ದೆ ಹೆಸರು: ಗ್ರಾಜುಯೇಟ್ ಇಂಜಿನಿಯರ್ ಟ್ರೈನಿ
ಹುದ್ದೆಗಳ ಸಂಖ್ಯೆ : ಒಟ್ಟು 35

ಮೆಕ್ಯಾನಿಕಲ್ : 11, ಮೆಟಾಲರ್ಜಿ : 3, ಇಲೆಕ್ಟ್ರಿಕಲ್/ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ : 11
ಇನ್‌ಸ್ಟ್ರುಮೆಂಟೇಷನ್ ಮತ್ತು ಕಂಟ್ರೋಲ್ / ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ : 4, ಸಿವಿಲ್ : 2,
ಮೈನಿಂಗ್ : 2, ಕಂಪ್ಯೂಟರ್ ಸೈನ್ಸ್ : 2

ವಯೋಮಿತಿ ಅರ್ಹತೆಗಳು : ದಿನಾಂಕ 31-07-2022 ಕ್ಕೆ ಗರಿಷ್ಠ 27 ವರ್ಷ ಮೀರಿರಬಾರದು. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಹುದ್ದೆಯ ಅವಧಿ 4 ವರ್ಷ. ಈ ಹುದ್ದೆಗಳಿಗೆ ಮೊದಲು 1‌ ವರ್ಷ ತರಬೇತಿ ಇರುತ್ತದೆ. ನಂತರ ಪ್ರೊಬೇಷನ್
ಅವಧಿಗೆ ಪ್ರಮೋಷನ್ ನೀಡಲಾಗುತ್ತದೆ.

ವಿದ್ಯಾರ್ಹತೆ : ಕೇಂದ್ರ ಸರಕಾರಿ ಉದ್ಯೋಗ ಅಭ್ಯರ್ಥಿಗಳು ಹುದ್ದೆಗಳು ಲಭ್ಯ ಇರುವ ವಿಭಾಗಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಬಿಇ ಪಾಸ್ ಮಾಡಿರಬೇಕು. ಅಭ್ಯರ್ಥಿಗಳು 2017 ರಿಂದ 2021 ರ ನಡುವೆ ಬಿಇ ಪಾಸ್ ಮಾಡಿರಬೇಕು. 2021-2022 ರ ಗೇಟ್ ಸ್ಕೋರ್ ಮೂಲಕ ಅರ್ಜಿ ಸಲ್ಲಿಸಬೇಕು.

ಸಂದರ್ಶನ ದಿನಾಂಕ : ಇಮೇಲ್ ಮೂಲಕ ತಿಳಿಸಲಾಗುತ್ತದೆ.

ಆಯ್ಕೆ ವಿಧಾನ : ಗೇಟ್ ಸ್ಕೋರ್ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ  ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ಕ್ಲಿಕ್ ಮಾಡಿ

Leave A Reply

Your email address will not be published.