‘ಜಗತ್ತಿನ ಸರ್ವನಾಶ ಸನಿಹದಲ್ಲಿದೆ’ ಎಂದ ಎಲನ್ ಮಸ್ಕ್ | ಪ್ರಪಂಚದ ನಾಶಕ್ಕೆ ಮುನ್ಸೂಚನೆಯಾಗಲಿದೆಯಾ ಈ ವಾದ?

ಆರ್ಡಿನರಿ ಮನುಷ್ಯರಿಗೆ ಎಲಾನ್ ಮಸ್ಕ್ ಒಬ್ಬ ಹುಚ್ಚನಂತೆಯೇ ಕಾಣಿಸುತ್ತಾರೆ. ಏಕೆಂದರೆ ಅವರ ಕನಸುಗಳು, ಕೆಲಸಗಳು ಆ ರೀತಿಯಿವೆ. ಜಗತ್ತು ಅಸಾಧ್ಯವೆಂದು ನಂಬಿದ್ದ ಹಲವು ಸಂಗತಿಗಳನ್ನು ಅವರು ಸಾಧ್ಯವಾಗಿಸಿದ್ದಾರೆ. ಅವರು ಯಾವುದೇ ಹೇಳಿಕೆ ನೀಡಿದರೂ ಅದು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿಲ್ಲ. ಆದರೆ, ಈ ಬಾರಿ ಇವರ ಮಾತು ಸ್ವಲ್ಪ ಗಂಭೀರವಾಗಿದೆ.


Ad Widget

ಹೌದು. ಈ ಬಾರಿ ಎಲನ್ ಮಸ್ಕ್ (Elon Musk) ಹೊಸ ಥಿಯರಿಯೊಂದನ್ನು ಬಿಬಿಸಿಗೆ ಬರೆದ ಲೇಖನದಲ್ಲಿ ಈ ವಿಚಾರವನ್ನು ಮಂಡಿಸಿದ್ದಾರೆ. ತಮ್ಮ ಲೇಖನದಲ್ಲಿ ಕೆಲ ವೈಜ್ಞಾನಿಕ ವಿಚಾರಗಳನ್ನು ಮಸ್ಕ್ ಉಲ್ಲೇಖಿಸಿದ್ದಾರೆ. ಈ ಹಿಂದೆ ಡೈನೋಸಾರ್, ಜುರಾಸಿಕ್ ಅಂತ್ಯವಾಯಿತು. ಈ ಪ್ರಭೇದ ಪ್ರಾಣಿಗಳ ಜೊತೆಗೆ ಅದೆಷ್ಟೆ ವನ್ಯ ಜೀವಿಗಳು ಅಂತ್ಯಗೊಂಡಿದೆ. ಇದೀಗ ಸಣ್ಣ ಸಣ್ಣ ಪಕ್ಷಿಗಳು, ಪ್ರಾಣಿಗಳು(Wild Life) ಅಳಿವಿನ ಅಂಚಿನಲ್ಲಿದೆ(endangered species). ಹಲವು ಪ್ರಬೇಧಗಳು ನಶಿಸಿ ಹೋಗಿದೆ. ಕೆವಲ ಮಾನವನ ಸಂಖ್ಯೆ ಮಾತ್ರ ಹೆಚ್ಚಾಗುತ್ತಿದೆ. ಈ ಭೂಮಿಯಲ್ಲಿ(Earth) ಕೇವಲ ಮಾನವ ಮಾತ್ರ ಬದುಕಲು ಸಾಧ್ಯವಿಲ್ಲ(mankind will end). ಇದು ಅಸಮತೋಲನೆಯನ್ನು ಸೃಷ್ಟಿಸುವುದು ಮಾತ್ರವಲ್ಲ, ಜಗತ್ತಿನ ಸರ್ವನಾಶಕ್ಕೆ(apocalypse) ನಾಂದಿ ಹಾಡಲಿದೆ ಎಂದು ಎಲಾನ್ ಮಸ್ಕ್ ಹೊಸ ವಾದ ಮಂಡಿಸಿದ್ದಾರೆ.

ಸುಲಭವಾಗಿ ಹೇಳಬೇಕೆಂದರೆ, ಡೈನೋಸಾರ್‌ ಅಂತ್ಯಗೊಂಡಂತೆ ಮಾನವಕುಲದ ಅಂತ್ಯವೂ ಆಗಲಿದೆ. ಯಾಕೆಂದರೆ ಜಗತ್ತಿನ ಸರ್ವನಾಶ ಸನಿಹದಲ್ಲಿದೆ ಎಂದು ಮಸ್ಕ್ ಹೇಳಿದ್ದಾರೆ. ಎಲನ್ ಮಸ್ಕ್ ವಾದವನ್ನು ಹಲವರು ಒಪ್ಪಿಕೊಂಡಿದ್ದಾರೆ. ಒಂದಷ್ಟು ಜನ ಇದು ಮಸ್ಕ್‌ನ ಹೊಸ ಬಾಂಬ್. ಕೆಲ ದಿನಗಳ ಬಳಿಕ ಮಸ್ಕ್ ಈ ಕುರಿತು ಸ್ಪಪ್ಟನೆ ನೀಡಿ ನಾನು ಜಗತ್ತು ಅಂತ್ಯವಾದರೆ ಮಾನವ ಕುಲದ ಅಂತ್ಯವಾಗಲಿದೆ ಎಂದಿದ್ದೇನೆ ಅಂದರೂ ಅಚ್ಚರಿ ಇಲ್ಲ ಎಂದಿದ್ದಾರೆ.


Ad Widget

ಇದೆಲ್ಲವೂ ಮಸ್ಕ್ ಸೂಚಿಸಿದ ಜಗತ್ತಿನ ಸರ್ವನಾಶದ ಮುನ್ಸೂಚನೆಯಾಗಿದೆಯಾ ಅನ್ನೋ ಚರ್ಚೆ ಇದೀಗ ಆರಂಭಗೊಂಡಿದೆ. 30 ರಿಂದ 100 ಮಿಲಿಯನ್ ವರ್ಷಗಳಿಗೊಮ್ಮೆ ಎಲ್ಲವೂ ಬುಡಮೇಲಾಗಿದೆ. ಜಗತ್ತು ಸರ್ವನಾಶವಾಗಿದೆ. ಇದೀಗ ಮಾನವನ ಅತಿ ಆಸೆಯಿಂದ ಈ ಬಾರಿ ಬೇಗನೆ ಸಂಭವಿಸಿದರೂ ಅಚ್ಚರಿಯಿಲ್ಲ ಎಂದು ಮಸ್ಕ್ ಬೆಂಬಲಿಗರು ಹೇಳಿದ್ದಾರೆ.


Ad Widget

ಎಲಾನ್ ಮಸ್ಕ ಜಗತ್ತಿನ ಅತ್ಯಂತ ಪ್ರಭಾವಿಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ 21 ಸ್ಥಾನವನ್ನು ಅಲಂಕರಿಸಿದ್ದಾರೆ. ಜೊತೆಗೆ ಜಗತ್ತಿನ ಆಗರ್ಭ ಶ್ರೀಮಂತರ ಪಟ್ಟಿಯಲ್ಲಿ 54ನೇ ಸ್ಥಾನವನ್ನು ಸಂಪಾದಿಸಿದ್ದಾರೆ. ಎಲಾನ್ ಮಸ್ಕ್ ಅಸಾಧ್ಯ ಸಂಗತಿಗಳ ಸಾಧಕ ಎಂಬುದರಲ್ಲಿ ಎರಡು ಮಾತಿಲ್ಲ.

error: Content is protected !!
Scroll to Top
%d bloggers like this: