ಬ್ಯಾಗೇಜ್ ಕನ್ವೇಯರ್ ಯಂತ್ರಕ್ಕೆ ಕೂದಲು ಸಿಲುಕಿ ಯುವತಿ ಸಾವು

ಬ್ಯಾಗೇಜ್ ಕನ್ವೇಯರ್ ಯಂತ್ರಕ್ಕೆ ಕೂದಲು ಸಿಲುಕಿ ಹಾಕಿಕೊಂಡು ಗಂಭೀರ ಗಾಯಗೊಂಡ ಯುವತಿಯೊಬ್ಬಳು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಮೃತ ಪಟ್ಟಿರುವಾಕೆ 26 ವರ್ಷದ ಜೆರ್ಮಾನಿ.

ನ್ಯೂ ಓರ್ಲಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಈಕೆ ಅದೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಲೋಡ್ ಮತ್ತು ಅಪ್ಲೋಡ್ ಮಾಡುವ ಕೆಲಸ ಮಾಡುತ್ತಿದ್ದಳು. ಥಾಂಪ್ಸನ್ ವಿಮಾನಕ್ಕೆ ಬ್ಯಾಗ್ ತುಂಬಿಸಲು ಹೋದಾಗ ಈ ಘಟನೆ ನಡೆದಿದೆ.

ಥಾಂಪ್ಸನ್ ವಿಮಾನಕ್ಕೆ ಬ್ಯಾಗ್ ತುಂಬಿಸಲು ಮುಂದಾದಾಗ ಬ್ಯಾಗ್ಲೋಡ್ ಮಾಡಲು ಬಳಸುವ ಬೆಲ್ಟ್ ಲೋಡರ್ ನ ಯಂತ್ರಕ್ಕೆ ಯುವತಿಯ ತಲೆ ಕೂದಲು ಸಿಕ್ಕಿ ಹಾಕಿಕೊಂಡಿದೆ. ಈ ವೇಳೆ ಆಕೆ ತೀವ್ರವಾಗಿ ಗಾಯಗೊಂಡಿರುತ್ತಾಳೆ.

ಬಳಿಕ ಯವತಿಯನ್ನು ಕೂಡಲೇ ಆಸ್ಪತ್ರೆಗೆ ರವಾನಿಸಿದರೂ, ಆಕೆ ದಾರಿ ಮದ್ಯದಲ್ಲೇ ಕೊನೆಯುಸಿರೆಳೆದಿದ್ದಾಳೆ. ಜೆರ್ಮಾನಿ ಬಾಸ್ಕೆಟ್‌ಬಾಲ್‌ನ ಪ್ರೇಮಿಯಾಗಿದ್ದು, ಮಿಸ್ಸಿಸ್ಸಿಪ್ಪಿಯ ಜಾಕ್ಸನ್‌ನಲ್ಲಿರುವ ಟೌಗಲೂ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

Leave A Reply