ಯಶಸ್ವಿ ಶಿಕ್ಷಕರಾಗೋದು ಹೇಗೆ? ಕೋರ್ಸ್, ಅರ್ಹತೆ ಹಾಗೂ ವೇತನದ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ

ಶಿಕ್ಷಣವನ್ನು ಕಲಿಸುವುದರ ಜೊತೆಗೆ ಒಬ್ಬರ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಯುತ ಭೋದನಾ ವೃತ್ತಿಯು ಪ್ರಪಂಚದಾದ್ಯಂತದ ಅತಿದೊಡ್ಡ ವೃತ್ತಿಯಾಗಿದೆ. ವಿಶೇಷ ಶಿಕ್ಷಣ ಶಿಕ್ಷಕರಿಂದ ಹಿಡಿದು ಕಲಿಕೆಯ ತೊಂದರೆ, ಮಾನಸಿಕ, ಭಾವನಾತ್ಮಕ ಮತ್ತು ಇತರ ದೈಹಿಕ ನ್ಯೂನತೆಗಳನ್ನು ಹೊಂದಿರುವ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುವ ಶಿಕ್ಷಕರ ಪಾತ್ರ ಮಹತ್ವದಾಗಿದೆ. ತೀವ್ರ ವಿಕಲಾಂಗ ವಿದ್ಯಾರ್ಥಿಗಳಿಗೆ ಭೋದಿಸಲು ವಿಶೇಷ ತರಬೇತಿಯನ್ನು ಪಡೆದು, ಸಾಕ್ಷರತೆ ಮತ್ತು ಸಂವಹನ ತಂತ್ರಗಳಂತಹ ಮೂಲಭೂತ ಕೌಶಲ್ಯಗಳನ್ನು ಕಲಿಸುವುದರ ಜೊತೆಗೆ ಅಕ್ಷರ ದಾಸೋಹದ ಪವಿತ್ರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಕ್ಕಳ ಏಳಿಗೆಗೆ ಶ್ರಮಿಸುತ್ತಿದ್ದಾರೆ.

ಶಿಕ್ಷಕರು ಪೋಷಕರಿಗಿಂತ ಹೆಚ್ಚಾಗಿ ಶೈಕ್ಷಣಿಕವಾಗಿ ಮಾರ್ಗದರ್ಶನ ಮಾಡುವುದಲ್ಲದೆ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಹೆಚ್ಚಿನ ಗಮನ ವಹಿಸುತ್ತಾರೆ. ಶಿಕ್ಷಣ ಕ್ಷೇತ್ರದಲ್ಲಿ ಪರಿಣಾಮಕಾರಿ ಬದಲಾವಣೆ ತರುವ ಪ್ರಕ್ರಿಯೆಯ ಭಾಗವಾಗಿ ಶಿಕ್ಷಕರ ಅರ್ಹತೆ ಮತ್ತು ಬೋಧನಾ ಸಾಮರ್ಥ್ಯ‌ವನ್ನು ಖಚಿತಪಡಿಸುವ ಉದ್ದೇಶದಿಂದ ರಾಷ್ಟ್ರದಾದ್ಯಂತ ‘ಶಿಕ್ಷಕರ ಅರ್ಹತಾ ಪರೀಕ್ಷೆ ‘ (ಟಿಇಟಿ)ಯನ್ನು ಜಾರಿಗೆ ತರಲಾಗಿದೆ. ಶಿಕ್ಷಣದ ರಾಷ್ಟ್ರೀಯ ಮಾದರಿಯನ್ನು ಅಳವಡಿಸಿಕೊಳ್ಳುತ್ತಿರುವ ರಾಜ್ಯ ಸರಕಾರ ಕಳೆದ ಎರಡು ವರ್ಷಗಳಿಂಧ ಶಿಕ್ಷಕರ ನೇಮಕಾತಿಗೆ ಈ ಅರ್ಹತಾ ಪರೀಕ್ಷೆಯನ್ನೇ ಪ್ರಮುಖ ಮಾನದಂಡವಾಗಿ ಪರಿಗಣಿಸಿದ್ದು, ಪ್ರತೀ ವರ್ಷ ಶಿಕ್ಷಕರ ಅರ್ಹತಾ ಪರೀಕ್ಷೆ ನಡೆಸುತ್ತಿದೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ ನಡೆಸುವ ‘ನೆಟ್‌’, ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ (ಕೆ-ಸೆಟ್‌) ಮಾದರಿಯಲ್ಲಿಯೇ ಟಿಇಟಿ ಕೂಡ ನಡೆಯುತ್ತಿದೆ.

ಶಿಕ್ಷಕರಾಗಲು ಅರ್ಹತೆಗಳು ಮತ್ತು ಕೋರ್ಸ್ : ಭಾರತದಲ್ಲಿ ಶಿಕ್ಷಕರಾಗಲು, ಅಭ್ಯರ್ಥಿಗಳು ಶಿಕ್ಷಣದಲ್ಲಿ ಪದವಿ (B.Ed) ಹೊಂದಿರುವುದು ಬಹಳ ಮುಖ್ಯ. ಈ ಅರ್ಹತೆಗೆ ಒಳಪಡಲು ಅದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ (M.Ed) ಸಹ ಪಡೆಯಬಹುದು. ಇದರ ಹೊರತಾಗಿ ಅಭ್ಯರ್ಥಿಗಳು ಒಬ್ಬರ ಆಸಕ್ತಿಯನ್ನು ಅವಲಂಬಿಸಿ ಮೂಲಭೂತ ತರಬೇತಿ ಪ್ರಮಾಣಪತ್ರ (BTC) ಅಥವಾಶಿಕ್ಷಣದಲ್ಲಿ ಡಿಪ್ಲೊಮಾ (D.Ed) ಅಥವಾ ಬೋಧನಾ ತರಬೇತಿ ಪ್ರಮಾಣಪತ್ರವನ್ನು ಸಹ ಆಯ್ಕೆ ಮಾಡಬಹುದು. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಮೂಲಕ ಸರ್ಕಾರಿ ಉದ್ಯೋಗಗಳಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ (CTET) ಗೆ ಸಹ ಹಾಜರಾಗಬಹುದು.

1 ರಿಂದ 8 ನೇ ತರಗತಿಗಳಿಗೆ ಶಿಕ್ಷಕರ ನೇಮಕಾತಿಗಾಗಿ ಈ ಪರೀಕ್ಷೆಯನ್ನು CBSE ನಡೆಸುತ್ತದೆ. ಒಬ್ಬ ಅಭ್ಯರ್ಥಿಯು ಶಿಕ್ಷಕರಾಗಲು ಕನಿಷ್ಠ 55% ಅಂಕಗಳೊಂದಿಗೆ B.Ed ಪದವಿ (ಸ್ನಾತಕ ಶಿಕ್ಷಣ) ಹೊಂದಿರಬೇಕು. ಒಬ್ಬರ ಶೈಕ್ಷಣಿಕ ಅರ್ಹತೆ ಮತ್ತು ಆಸಕ್ತಿಗೆ ಅನುಗುಣವಾಗಿ ಭಾರತದಲ್ಲಿ ಸಾಕಷ್ಟು ಸಂಖ್ಯೆಯ ಶಿಕ್ಷಕರ ಉದ್ಯೋಗ ಪ್ರೊಫೈಲ್‌ಗಳಿವೆ.

ಎಲಿಮೆಂಟರಿ ಶಾಲಾ ಶಿಕ್ಷಕರು- ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅವರ ಕೆಲಸದ ಜವಾಬ್ದಾರಿಯು ತರಗತಿಯಲ್ಲಿ ವಸ್ತುಗಳನ್ನು ಸಿದ್ದಪಡಿಸುವುದು ಮತ್ತು ಯುವ ಮನಸ್ಸುಗಳಿಗೆ ಮೋಜಿನ ಚಟುವಟಿಕೆಗಳನ್ನು ಯೋಜಿಸುವುದು. ಶಿಕ್ಷಕರು ಈ ಎಲ್ಲ ಚಟುವಟಿಕೆಗಳ ಜೊತೆಗೆ ಮಕ್ಕಳನ್ನು ಕ್ರಿಯಾಶೀಲ ರನ್ನಾಗಿಸಿ ಅವರ ಪ್ರತಿಭೆಗಳನ್ನು ಹೊರತರುವ ಪ್ರಯತ್ನ ಮಾಡುತ್ತಾರೆ.

ಪ್ರೌಢಶಾಲೆ/ಮಾಧ್ಯಮಿಕ ಶಾಲಾ ಶಿಕ್ಷಕರು- ಪ್ರೌಢಶಾಲಾ ಶಿಕ್ಷಕರು ಗ್ರೇಡ್ 9 ರಿಂದ 12 ನೇ ತರಗತಿ ವರೆಗೆ ಕಲಿಸುತ್ತಾರೆ ಮತ್ತು ಅವರು ಗಣಿತ ಅಥವಾ ಜೀವಶಾಸ್ತ್ರದಂತಹ ನಿರ್ದಿಷ್ಟ ವಿಷಯದಲ್ಲಿ ಪರಿಣತಿ ಹೊಂದಿರುತ್ತಾರೆ.

ಪ್ರೌಢಶಾಲಾ ಶಿಕ್ಷಕರು ಸಾಮಾನ್ಯವಾಗಿ ಆಯಾ ವಿಷಯವನ್ನು ಕಲಿಸಲು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು. ವಿದ್ಯಾರ್ಥಿಗಳ ಜೀವನದ ಮೇಲೆ ಪ್ರಭಾವ ಬೀರುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ .
ವಿಶೇಷ ಶಿಕ್ಷಕರು ದೈಹಿಕ, ಮಾನಸಿಕ ಅಥವಾ ಭಾವನಾತ್ಮ ಕ ಅಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುತ್ತಾರೆ. ಇದಲ್ಲದೆ, ಅವರು ತೀವ್ರ ಅಂಗವೈಕಲ್ಯ ಹೊಂದಿರುವ ವಿದ್ಯಾರ್ಥಿಗಳಿಗೆ ಮೂಲಭೂತ ಕೌಶಲ್ಯಗಳನ್ನು ಕಲಿಸುತ್ತಾರೆ.

ಶಿಕ್ಷಕರನ್ನು ನೇಮಕಗೊಳಿಸುವ ಸಂಸ್ಥೆಗಳು:
ಸರ್ಕಾರಿ ಶಾಲೆಗಳು, ಖಾಸಗಿ ಶಾಲೆಗಳು, ಕೆಲವು ಪ್ರತಿಷ್ಠಿತ ಕಂಪನಿಗಳು , ಕಾಲೇಜುಗಳು ಅಲ್ಲದೆ ವಿಶ್ವವಿದ್ಯಾನಿಲಯಗಳು ಕೂಡ ಶಿಕ್ಷಕರನ್ನು ನೇಮಕ ಮಾಡುತ್ತದೆ. ಅಷ್ಟೇ ಅಲ್ಲದೆ ಕೇಂದ್ರೀಯ ವಿದ್ಯಾಲಯ ICSE, IB ಇತ್ಯಾದಿಗಳ ಅಡಿಯಲ್ಲಿ ನಿಮ್ಮ ಪ್ರದೇಶದಲ್ಲಿ ಸಾರ್ವಜನಿಕ ಮತು ಖಾಸಗಿ ಶಾಲೆಗಳು. AICTE (ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ) ಅನುಮೋದಿಸಿದ ತಾಂತ್ರಿಕ ವಿಶ್ವವಿದ್ಯಾಲಯಗಳು ,ಎಪಿಎಸ್, ಏರ್ ಫೋರ್ಸ್ ಸ್ಕೂಲ್ ನಂತಹ ರಕ್ಷಣಾ ಶಾಲೆಗಳು
G.D. ಗೋಯೆಂಕಾ ಶಾಲೆ, ಟ್ಯಾಗೋರ್ ಇಂಟರ್ನ್ಯಾಷನಲ್ ಸ್ಕೂಲ್ ಮುಂತಾದ ಖಾಸಗಿ ಶಾಲೆಗಳು ಶಿಕ್ಷಕ ವೃತ್ತಿಗೆ ಅರ್ಹ ಭೋಧಕರನ್ನು ನೇಮಕ ಮಾಡುತ್ತದೆ.

ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಹೋಲಿಸಿದರೆ ಭಾರತದಲ್ಲಿ ಶಿಕ್ಷಕರ ವೇತನವು ಸರ್ಕಾರಿ ಶಾಲೆಗಳಲ್ಲಿ ಹೆಚ್ಚು. ಕೇಂದ್ರೀಯ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ವೇತನ ಪ್ಯಾಕೇಜ್ ರೂ. 3,50,000 ರಿಂದ 4,00,000 ರೂ. ಇದರ ಹೊರತಾಗಿ ಸರ್ಕಾರಿ/ಕೇಂದ್ರ ಶಾಲೆಗಳು ವೈದ್ಯಕೀಯ ಭತ್ಯೆಗಳು, ಕ್ವಾಟರ್ಸ್ ಗಳು, ಇತರೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತದೆ ಆದರೆ ಖಾಸಗಿ ಶಾಲೆಗಳಲ್ಲಿ ಶಿಕ್ಷಕರ ಆರಂಭಿಕ ವೇತನ 2,00,000/- 3,00,000/-. ಹೆಸರಾಂತ ಖಾಸಗಿ/ಅಂತರರಾಷ್ಟ್ರೀಯ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು ಹೆಚ್ಚಿನ ಪ್ಯಾಕೇಜುಗಳನ್ನು ಹೊಂದಿರುತ್ತಾರೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಪ್ಯಾಕೇಜ್ ಗಳು ಶಿಕ್ಷಕರ ಶೈಕ್ಷಣಿಕ ಮತ್ತು ವೃತ್ತಿಪರ ಅನುಭವವನ್ನು ಅವಲಂಬಿಸಿರುತ್ತದೆ.

ಶಿಕ್ಷಕರಾಗಲು ಅಗತ್ಯ ಅಭ್ಯಾಸ ಪುಸಕ್ತಗಳು :
ಅರಿಹಂಟ್ ರವರ ಗುರು ಗೋವಿಂದ್ ಸಿಂಗ್, ಬಿ.ಎಡ್ ಪ್ರವೇಶ ಪರೀಕ್ಷೆಯ ಮಾಹಿತಿ ಇದ್ದು, IGNOU B.Ed ಪ್ರವೇಶ ಪರೀಕ್ಷೆ ಮಾರ್ಗದರ್ಶಿ ಮತ್ತು ಹಿಂದಿನ ಪೇಪರ್ (ಪರಿಹಾರ) ಆರ್. ಗುಪ್ತಾ ಅವರಿಂದ , ಭಾರತಿ ಶರ್ಮಾ ಅವರಿಂದ B.Ed ಮಾರ್ಗದರ್ಶಿ ಇಷ್ಟೇ ಅಲ್ಲದೆ, RPH ಸಂಪಾದಕೀಯ ಮಂಡಳಿಯಿಂದ ಪ್ರವೇಶ ಪರೀಕ್ಷೆಯ ಮಾರ್ಗದರ್ಶಿ 01 ಆವೃತ್ತಿ (ಪೇಪರ್‌ಬ್ಯಾಕ್) ಬಿಎಡ್ ಪ್ರವೇಶ ಪರೀಕ್ಷೆಗಳ ತಯಾರಿಗಾಗಿ ಮಾರುಕಟ್ಟೆಯಲ್ಲಿ ವಿವಿಧ ಪ್ರಕಾಶನ ಸಂಸ್ಥೆಗಳ ಇನ್ನೂ ಹೆಚ್ಚು ಮಾದರಿ ಪತ್ರಿಕೆಗಳು ಲಭ್ಯವಿದೆ.

ಮಕ್ಕಳ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದಾಗಿ ಶಿಕ್ಷಕರ ವೃತ್ತಿಯು ಹೆಚ್ಚು ತೃಪ್ತಿಕರವಾಗಿದೆ. ಬೋಧನೆಯು ಅತ್ಯಂತ ಗೌರವಾನ್ವಿತ ಕೆಲಸವಾಗಿದ್ದು ಉತ್ತಮ ಚಿಂತನೆಗಳನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸಿ ಕ್ರಿಯಾಶೀಲ ಚಟುವಟಿಕೆಗಳಿಗಳಿಂದ ಪ್ರತಿಭೆಯನ್ನು ಅನಾವರಣಗೊಳಿಸಿ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಲ್ಲಿ ಕಾರ್ಯ ನಿರ್ವಹಿಸುತ್ತಾರೆ.

ಶಿಕ್ಷಕರು ನೈತಿಕ ಜವಾಬ್ದಾರಿಯೊಂದಿಗೆ ಉತ್ತಮ ನಾಗರಿಕರನ್ನು ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಆದರೆ ಕೇವಲ ಸರ್ಕಾರಿ/ ಕೇಂದ್ರೀಯ ಶಾಲೆಗಳನ್ನು ಗುರಿಯಾಗಿಸಿಕೊಂಡಿದ್ದರೆ , CTET ಪರೀಕ್ಷೆಯನ್ನು ತೇರ್ಗಡೆಗೊಳಿಸಬೇಕಾದ ಸವಾಲು ಶಿಕ್ಷಕರಿಗೆ ಇದೆ.

ಶಿಕ್ಷಕ ವೃತ್ತಿಯು ಮಕ್ಕಳ ಬೆಳವಣಿಗೆ ಪೂರಕವಾದ ವಾತಾವರಣ ಸೃಷ್ಟಿಸಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಮುಖ್ಯ ಪಾತ್ರವಹಿಸುವುದಲ್ಲದೆ ಸಮಾಜಕ್ಕೆ ಪ್ರೇರಣೆಯಾಗುವ ಸಂಗತಿಗಳನ್ನು ಮಕ್ಕಳಿಗೆ ಧಾರೆ ಎರೆಯುವ ಮೂಲಕ ಮಕ್ಕಳ ಪ್ರಗತಿಗೆ ಕಾರಣಕರ್ತರಾಗಿದ್ದಾರೆ.

Leave A Reply

Your email address will not be published.