ಸುದೀಪ್ ತನ್ನ ಅಭಿಮಾನಿಗಳಿಗೆ ಕೊಟ್ರು ಗುಡ್ ನ್ಯೂಸ್ | ವಿಕ್ರಾಂತ್ ರೋಣದ ನಂತರ ಮಾಡುವ ಸಿನಿಮಾ ಯಾವ್ದು ಗೊತ್ತಾ?
ಅಭಿನಯ ಚಕ್ರವರ್ತಿ ಸುದೀಪ್ ತನ್ನ ಹುಟ್ಟು ಹಬ್ಬವನ್ನು ಈ ಭಾರಿ ಭರ್ಜರಿಯಾಗಿ ತನ್ನ ಫ್ಯಾನ್ಸ್ ಜೊತೆ ಆಚರಿಸಿಕೊಂಡಿದ್ದಾರೆ. ಏಕೆಂದರೆ ಈ ಎರಡು ವರ್ಷಗಳ ಹಿಂದಿನಿಂದಲೂ ಕೋವಿಡ್ ಕಾರಣದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ.
ಈ ಬಾರಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದರ ಜೊತೆಗೆ ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ.
ವಿಕ್ರಾಂತ್ ರೋಣ ಸಿನಿಮಾದಿಂದ ಬಾರೀ ಗೆಲುವನ್ನು ಕಂಡಿರುವ ಕಿಚ್ಚ ಸುದೀಪ್, ಇದೀಗ ಎಲ್ಲರ ಮುಂದೆ ಒಂದು ಮಾತನ್ನು ನೀಡಿದ್ದಾರೆ.
ಹೌದು, ತನ್ನ ಗೆಲುವಿನ ನಂತರ ಈ ಮಾತನ್ನು ಹೇಳಿದ್ದಾರೆ.
” ಇನ್ನು ಮುಂದೆ ಆರು ಆರು ತಿಂಗಳಿಗೊಮ್ಮೆ ಹೊಸ ಚಿತ್ರಗಳನ್ನು ನಿಮಗೆ ನೀಡುತ್ತೇನೆ, ಈಗಾಗಲೇ ಸಾಕಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ಹಾಗಾಗಿ ನನ್ನ ಅಭಿಮಾನಿಗಳಿಗೆ ಬೇಸರ ಆಗದೆ ಇರುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಕೊಟ್ಟೆ ಕೊಡ್ತೀನಿ ಅಂತ ಹೇಳಿದ್ದಾರೆ”.
ಈ ಮಾತಿಗಾಗಿ ಅಭಿಮಾನಿಗಳು ಬಹಳ ಕಾತುರ ಮತ್ತು ಸಂತೋಷರಾಗಿದ್ದಾರೆ. ಸದ್ಯಕ್ಕೆ ಯಾವ ಸಿನಿಮಾ ತೆರೆಗೆ ಬರಲಿದೆಯೆಂದು ಕಾದುನೋಡಬೇಕಾಗಿದೆ ಅಷ್ಟೇ.