ಪ್ಲಾಸ್ಟಿಕ್ ಬಾಟಲಿಯಿಂದ ಸಿದ್ಧಗೊಂಡಿದೆ ಅದ್ಭುತ ಮನೆ | ಭೂಕಂಪಕ್ಕೂ ಬಗ್ಗದ ಈ ಮನೆಯ ವಿಶೇಷತೆ ನೋಡಿ
ಪ್ಲಾಸ್ಟಿಕ್ ಎಂದರೆ ಸ್ವಾಭಾವಿಕವಾಗಿ ಪ್ರಕೃತಿಯಲ್ಲಿ ದೊರೆಯುವ ಅಥವಾ ಕೃತಕವಾಗಿ ತಯಾರಿಸಿರುವ ಮತ್ತು ಶಾಖಪ್ರಯೋಗದಿಂದ ಮೆದುವಾಗಿ ಅಚ್ಚು ಹೊಯ್ಯಲು ಒದಗುವ ಮೆದುಪದಾರ್ಥ. ಇವನ್ನು ರಾಳ, ಮರವಜ್ರ ಎಂದೂ ಕರೆಯವುದುಂಟು. ಕೆಲವು ಸೂಕ್ಷ್ಮಾಣುಗಳು ತಮ್ಮೊಳಗೆ ಸಂಯೋಗಹೊಂದಿ ದೈತ್ಯಾಣುಗಳಾಗುತ್ತವೆ. ಈ ಪ್ರಕ್ರಿಯೆಗೆ ಪಾಲಿಮರೀಕರಣವೆಂದು ಹೆಸರು.
ಪ್ಲಾಸ್ಟಿಕ್ ಪ್ರಕೃತಿಯ ನೈಜ ಸಂಪತ್ತನ್ನು ಹಾಳಗೆಡುವ ವಿಷ. ಸುಂದರತೆಗೆ ರಾಕ್ಷಸನಂತೆ ಪರಿಣಮಿಸುತ್ತದೆ ಪ್ಲಾಸ್ಟಿಕ್.
ಅದೆಷ್ಟು ಅನಾನುಕೂಲಗಳು ಈ ಪ್ಲಾಸ್ಟಿಕ್ ಇಂದ ಇದ್ದರು ಕೂಡ ನಾವು ಅದನ್ನೇ ಬಳಸುತ್ತೇವೆ. ಆದರೆ ಇಲ್ಲೊಂದು ಕಡೆ ಪ್ಲಾಸ್ಟಿಕ್ ಇಂದಲೇ ಕಟ್ಟಿದ ಮನೆಯನ್ನು ನಾವು ಕಾಣಬಹುದು. ಇದೊಂದು ಅದ್ಭುತ ಪ್ರೇಕ್ಷಣೀಯ ಸ್ಥಳ.
ಕಸದಿಂದ ರಸ ಎಂಬಂತೆ ಇಲ್ಲೊಂದು ಪ್ಲಾಸ್ಟಿಕ್ ಇಂದ ಮನೆ ತಯಾರಾಗಿದೆ.
ಬಾಟಲ್ ಬ್ರಿಕ್ ಟೆಕ್ನೋಲಜಿ ಬಳಸಿಕೊಂಡು ಕಟ್ಟಿದ ಮನೆ ಇದು. ಟೆಲ್ ಬ್ರಿಕ್ ಟೆಕ್ನಾಲಜಿ ಬಳಸಿಕೊಂಡು ಕಟ್ಟಿರುವಂತಹ ಈ ಮನೆ ಹಲವು ಪ್ರವಾಸಿಗರನ್ನು ಕಣ್ಮನ ಸೆಳೆಯುತ್ತಿದೆ.
ನೈಜೀರಿಯಾದ ಸರ್ಕಾರದ ಅನೇಕ ಆಫೀಸರ್ ಗಳು ಕೂಡ ಈ ಮನೆಯನ್ನು ಒಮ್ಮೆ ನೋಡಲೇಬೇಕು.
ಪ್ಲಾಸ್ಟಿಕ್ ಬಾಟಲಿ ಆಧಾರವಾಗಿರಿಸಿಕೊಂಡು ಈ ಮನೆಯನ್ನು ಕಟ್ಟಲಾಗಿದೆ. ಮಣ್ಣು ಮತ್ತು ಪ್ಲಾಸ್ಟಿಕ್ ಇಂದ ಕಟ್ಟಲಾಗಿದ್ದು, ಬಾಟಲಿ ತಳ ಭಾಗ ಮನೆಯ ಹೊರಗೆ ಕಾಣುವಂತೆ ಜೋಡಿಸಲಾಗಿದೆ. ಬಾಟಲ್ ಒಳಗೆ ಕೂಡ ಮರಳನ್ನು ತುಂಬಿಸಿ, ನಂತರ ಮಣ್ಣಿಂದ ಕಟ್ಟಲಾಗಿದೆ. ಪ್ಲಾಸ್ಟಿಕ್ ನಿಂದ ಆಗುವ ಮಲಿನವನ್ನು ತಡೆಗಟ್ಟಲು ಇದೊಂದು ಅದ್ಭುತ ಪ್ರಯೋಗ.