ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಆಂಬ್ಯುಲೆನ್ಸ್ ಓಡಿಸಿ 4 ವಾಹನಗಳಿಗೆ ಡಿಕ್ಕಿ ಹೊಡೆದ ಚಾಲಕ | ಕೈಗೆ ಸಿಕ್ಕ ಈತನನ್ನು ಜನ ಏನು ಮಾಡಿದರು ಗೊತ್ತೇ?

Share the Article

ಜನರ ಜೀವ ಉಳಿಸಲೆಂದೇ ಇರುವುದು ಆ್ಯಂಬುಲೆನ್ಸ್ ( Ambulance) ಎಂಬ ವಾಹನ. ಇದರ ಚಾಲಕರು ( Driver) ಕೂಡಾ ಅಷ್ಟೇ ಜಾಗೃತೆಯಿಂದ ಜನರ ಜೀವ ಉಳಿಸಲು ಶತಪ್ರಯತ್ನ ಮಾಡುತ್ತಾರೆ. ಆದರೆ ಇಂತಿಪ್ಪ ಡ್ರೈವರ್ ಗಳೇ ಜನರ ಜೀವದ ಜೊತೆ ಚೆಲ್ಲಾಟವಾಡಿದರೆ ಏನು ಗತಿ ? ಅಂತದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕುಡಿದು ಗಾಡಿ ಚಲಾಯಿಸಿದ ಡ್ರೈವರ್

ಕುಡಿದ ಮತ್ತಿನಲ್ಲಿದ್ದ ಆ್ಯಂಬುಲೆನ್ಸ್‌ ಚಾಲಕನೊಬ್ಬ ಅಡ್ಡಾದಿಡ್ಡಿ ಆ್ಯಂಬುಲೆನ್ಸ್ ಚಾಲನೆ ಮಾಡಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್ ನಲ್ಲಿ ನಡೆದಿದೆ.

ಕುಡಿದ ಮತ್ತಿನಲ್ಲಿ ಈ ಆ್ಯಂಬುಲೆನ್ಸ್ ಚಾಲಕ ಸಂಜೀವ್ ಎಂಬಾತ 4 ವಾಹನಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೂಡಲೇ ಸಾರ್ವಜನಿಕರು ಆ್ಯಂಬುಲೆನ್ಸ್ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರಿನ ವಿಲ್ಸನ್ ಗಾರ್ಡನ್ 10 ನೇ ಕ್ರಾಸ್ ನಲ್ಲಿ ಘಟನೆ ನಡೆದಿದೆ. ಘಟನೆ ಸಂಬಂಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply