‘ಮುಸ್ಲಿಂ ಡೆಲಿವರಿ ಬಾಯ್ ಬೇಡ’ ಎಂದು ಸ್ವಿಗ್ಗಿಗೆ ವಿವಾದಾತ್ಮಕ ಮನವಿ ಮಾಡಿದ ಗ್ರಾಹಕ

ಆಹಾರ ಎಲ್ಲರಿಗೂ ಒಂದೇ. ಅದರಲ್ಲಿ ಬೇಧ ಭಾವ ಇಲ್ಲ. ಹಾಗೆನೇ ಯಾರೆ ಅನ್ನ ಕೊಟ್ಟರೂ, ನೀಡಿದರೂ ಅದನ್ನು ಧನ್ಯತಾ ಭಾವದಿಂದ ಸ್ವೀಕರಿಸಬೇಕು. ಇದು ನಿಜವಾದ ಮಾನವೀಯ ಧರ್ಮ. ಆದರೆ ಇಲ್ಲೊಬ್ಬ ಗ್ರಾಹಕ ಆನ್ಲೈನ್ ನಲ್ಲಿ ಆಹಾರ ಆರ್ಡರ್ ಮಾಡುವಾಗ, ವಿವಾದಾತ್ಮಕ ವಿನಂತಿಯೊಂದನ್ನು ಮಾಡಿದ್ದಾನೆ.

ಸ್ವಿಗ್ಗಿ (Swiggy) ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆ. ಎಲ್ಲರಿಗೂ ತಿಳಿದೇ ಇದೆ. ಇದರಲ್ಲಿ ಹೈದರಾಬಾದ್ ಗ್ರಾಹಕರೊಬ್ಬರು ಮಾಡಿದ ವಿವಾದಾತ್ಮಕ ವಿನಂತಿಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಧರ್ಮಾಂಧತೆಯ ಕುರಿತು ಹಲವರು ತುಂಬಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸ್ವಿಗ್ಗಿ ಮೂಲಕ ಗ್ರಾಹಕರೋರ್ವರು ಫುಡ್ ಆರ್ಡರ್ ಮಾಡುವಾಗ, ತಮಗೆ ‘ಮುಸ್ಲಿಂ’ ಧರ್ಮೀಯ ಡೆಲಿವರಿ ಮಾಡುವ ವ್ಯಕ್ತಿ ಬೇಡ’ ಎಂದು ಹೇಳಿದ್ದು, ಈ ಕುರಿತು ಸ್ಕ್ರೀನ್ ಶಾಟ್ (Viral Screenshot) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸ್ಕ್ರೀನ್ ಶಾಟ್ ಅನ್ನು ( screen shot)
ಗಿಗ್ ಎಕಾನಮಿಯಲ್ಲಿ (Gig Economy) ಉದ್ಯೋಗದಲ್ಲಿರುವ ಕಾರ್ಮಿಕರ ಸಂಘಟನೆಯ ಮುಖ್ಯಸ್ಥ ಶೇಕ್ ಸಲಾವುದ್ದೀನ್ ಹಂಚಿಕೊಂಡಿದ್ದಾರೆ ಮತ್ತು ಅದರ ವಿರುದ್ಧ ನಿಲುವು ಕೈಗೊಳ್ಳುವಂತೆ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ.

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಎಂಬ ಬೇಧವಿಲ್ಲದೇ ಎಲ್ಲರಿಗೂ ಆಹಾರವನ್ನು ತಲುಪಿಸಲಷ್ಟೇ ನಾವಿದ್ದೇವೆ ಎಂಬ ಮಾತನ್ನು ಕೂಡಾ ಹೇಳಿದ್ದಾರೆ.
ಆದರೆ ಈ ವಿವಾದಕ್ಕೆ ಸ್ವಿಗ್ಗಿ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕರ್ನಾಟಕದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ(Karti Chidambaram) ಕೂಡ ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಇಂತಹ ಹಲವಾರು ಘಟನೆಗಳು ವರದಿಯಾಗಿವೆ.

Leave A Reply

Your email address will not be published.