ಕರೆಂಟ್ ಹೋದ ನಂತರವೂ ಗಂಟೆಗಟ್ಟಲೆ ಉರಿಯುತ್ತೆ ಈ ಬಲ್ಬ್ ; ಕಡಿಮೆ ಬೆಲೆಗೆ ಲಭ್ಯವಾಗುವ ಇದರ ವಿಶೇಷತೆ ಇಲ್ಲಿದೆ ನೋಡಿ..
ಸಾಮಾನ್ಯವಾಗಿ ಭಾರತದ ಬಹುತೇಕ ಮನೆಗಳಲ್ಲಿ ಎಲ್ ಇಡಿ ಬಲ್ಬ್ ಗಳನ್ನು ಬಳಸಲಾಗುತ್ತದೆ. ಕರೆಂಟ್ ಹೋದಾಗ ಕತ್ತಲಲ್ಲಿ ದಿನ ಮೇಣದಬತ್ತಿ ಇಲ್ಲವೇ ಚಿಮಿಣಿ ದೀಪವನ್ನು ಆಶ್ರಯಿಸುತ್ತಿದ್ದ ಕಾಲವೊಂದಿತ್ತು. ಆದರೀಗ ಕರೆಂಟ್ ಹೋದ ಮೇಲೂ ಗಂಟೆಗಟ್ಟಲೆ ಉರಿಯುವ ಬಲ್ಬ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟು, ಸಾಕಷ್ಟು ಟ್ರೆಂಡ್ ಕೂಡ ಆಗಿಬಿಟ್ಟಿದೆ. ಇವು ಪುನರ್ ಭರ್ತಿ ಮಾಡಬಹುದಾದ ಎಲ್ಇಡಿ ಬಲ್ಬಾಗಿದ್ದು, ಇದನ್ನು ಇನ್ವರ್ಟರ್ ಬಲ್ಬ್ ಎಂದು ಕೂಡ ಕರೆಯಲಾಗುತ್ತದೆ .
ಇನ್ನು ಇದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕಾದರೆ, ಇದರ ಹೆಸರು ಹ್ಯಾಲೊನಿಕ್ಸ್ ಪ್ರೈಮ್ 12 W B22 ಇನ್ವರ್ಟರ್ ರೀಚಾರ್ಜ್ ಬೇಲ್ ಎಮರ್ಜೆನ್ಸಿ ಲೆಡ್ ಬಲ್ಬ್.
ಈ ತುರ್ತು LED ಬಲ್ಬ್ ನ ಬೆಲೆ ಕೇವಲ 595 ರೂ.ಆಗಿದ್ದು ಇ – ಕಾಮರ್ಸ್ ಸೈಟ್ ಅಮೆಜಾನ್ ನಲ್ಲಿ ಈ ಬಲ್ಬ್ ಗ್ರಾಹಕರಿಗೆ ಲಭ್ಯ ವಿದೆ. ಸಾಮಾನ್ಯ ಎಲ್ ಇ ಡಿ ಬಲ್ಬ್ ಗೆ ಹೋಲಿಸಿದರೆ. ಹ್ಯಾಲೊನಿಕ್ಸ್ ಬಲ್ಬ್ ಉತ್ತಮವಾಗಿರುವುದರಿಂದ, ಸಾಮಾನ್ಯ ಬಲ್ಬ್ ಗಿಂತ ಇದರ ಬೆಲೆ ಕೂಡ ದುಪ್ಪಟ್ಟಾಗಿದೆ.
ಇದರ ವಿಶೇಷತೆ ಏನೆಂದರೆ ವಿದ್ಯುತ್ ಹೋದ ನಂತರವೂ 4 ಗಂಟೆಗಳ ಕಾಲ ಆನ್ ಆಗಿರುತ್ತದೆ. ಇದನ್ನು ಪ್ರತ್ಯೇಕವಾಗಿ ಚಾರ್ಜ್ ಮಾಡುವ ಅವಶ್ಯಕತೆ ಇಲ್ಲ. ಈ ಬಲ್ಬ್ ಶಕ್ತಿಯುತವಾದ ಲಿಥಿಯಂ – ಐಯಾನ್ ಬ್ಯಾಟರಿಯನ್ನು ಹೊಂದಿದೆ. ಇದು ಚಾರ್ಜ್ ಮಾಡಲು 8 – 10 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದ್ದಲ್ಲದೆ ತುರ್ತು ಎಲ್ ಇಡಿ ಬಲ್ಬ್ ಆನ್ ಮಾಡಿದಾಗ ಈ 12 W ಇನ್ವರ್ಟರ್ ಸ್ವಯಂಚಾಲಿತ ವಾಗಿ ಚಾರ್ಜ್ ಆಗುತ್ತದೆ.
ವಿದ್ಯುತ್ ಕಡಿತದ ಸಮಯದಲ್ಲಿ 4 ಗಂಟೆಗಳ ಬೆಳಕಿನ ನಿರಂತರ ಬ್ಯಾಕ್ ಅಪ್ ನೀಡುವ ಸಾಮರ್ಥ್ಯ ಈ ಬಲ್ಬ್ ಹೊಂದಿದೆ. ಇದನ್ನು ಮನೆ,ಚಿಲ್ಲರೆ ಮಳಿಗೆಗಳು, ಆಸ್ಪತ್ರೆ, ಡ್ರಾ ಯಿಂಗ್ ರೂಂ,ಬಾತ್ರೂಂ ಗಳಲ್ಲಿ ಕೂಡ ಬಳಸಬಹುದು. ಇದರೊಂದಿಗೆ 6 ತಿಂಗಳ ವ್ಯಾರಂಟಿ ಕೂಡ ಲಭ್ಯವಿದೆ.