ಗರ್ಭಿಣಿ ಹಸುವನ್ನು ಕಡಿದು ಮಾಂಸ ಮಾಡಿದ ಹಂತಕರು!! ಕಾಡಿನಲ್ಲಿ ಪತ್ತೆಯಾಯಿತು ಇನ್ನೂ ಕಣ್ಣು ಬಿಡದ ಕರುವಿನ ಮೃತದೇಹ-ರುಂಡ
ಬಾಳೆಹೊನ್ನೂರು: ಅಕ್ರಮ ಕಸಾಯಿಖಾನೆ ನಡೆಸಿದಲ್ಲದೇ, ಕದ್ದು ತಂದ ಗರ್ಭಿಣಿ ಗೋ ವನ್ನು ಕಡಿದು ಇನ್ನೂ ಭೂಮಿಗೆ ಬಾರದ ಅದರ ಕರುವನ್ನು ಕಾಡಿನಲ್ಲಿ ಎಸೆದ ಹಿಂಸಾತ್ಮಕ ಕೃತ್ಯವೊಂದು ಮಲೆನಾಡಿನಲ್ಲಿ ಬೆಳಕಿಗೆ ಬಂದಿದ್ದು, ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ವ್ಯಾಪ್ತಿಯ ಹಳೆ ಕಡಬಗೆರೆ ನಿವಾಸಿ ರವೀಂದ್ರ ಎಂಬವರಿಗೆ ಸೇರಿದ ಗರ್ಭಿಣಿ ದನ ಇದಾಗಿದ್ದು,ಕಳೆದ ರಾತ್ರಿ ಗೋ ಕಳ್ಳರ ಪಾಲಾಗಿತ್ತು.ಬಳಿಕ ಹಂತಕರು ಎಲೆಕಲ್ ಎಂಬಲ್ಲಿ ಹಸುವಿನ ತಲೆ ಕಡಿದು ಮಾಂಸ ಮಾಡಿದ್ದಲ್ಲದೇ, ಅದರ ಹೊಟ್ಟೆಯೊಳಗಿದ್ದ ಕರುವನ್ನ ಕಾಡಿನಲ್ಲಿ ಎಸೆದಿದ್ದರು.
ಮುಂಜಾನೆ ವೇಳೆ ಗೋ ಕಳ್ಳತನವಾದ ಬಗ್ಗೆ ಗಮನಕ್ಕೆ ಬಂದಿದ್ದು, ಮಾಲೀಕ ಎಲ್ಲೆಡೆ ಹುಡುಕಾಡಿದಾಗ ಹಸುವಿನ ರುಂಡ ಪತ್ತೆಯಾಗಿತ್ತು.ಇದಾಗಿ ಸ್ವಲ್ಪ ದೂರದಲ್ಲೇ ಹಸುವಿನ ಕರುವಿನ ಮೃತದೇಹವೂ ಪತ್ತೆಯಾಗಿದೆ.
ಈ ಬಗ್ಗೆ ಹಸುವಿನ ಮಾಲೀಕ ಪೊಲೀಸರಿಗೆ ದೂರು ನೀಡಿದ್ದು, ಶೀಘ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.