ಅಂಧ ಪದವೀಧರ ಇದೀಗ ₹47 ಲಕ್ಷ ವೇತನ ಪಡೆಯುತ್ತಿರುವ ಉದ್ಯೋಗಿ!

ಕೆಲವೊಬ್ಬರ ಪರಿಸ್ಥಿತಿ ಯಾವ ಮಟ್ಟಿಗೆ ಇರುತ್ತದೆ ಅಂದ್ರೆ ನೂರಾರು ಕನಸು ಇದ್ದರು ಈಡೇರಿಸಿಕೊಳ್ಳಲಾಗದ ಮಟ್ಟಿಗೆ. ಆದ್ರೆ ಅದೃಷ್ಟ ಎಂಬುದು ಇದ್ರೆ ಯಾವುದನ್ನೂ ಮೆಟ್ಟಿ ನಿಲ್ಲಬಹುದೆಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹೌದು. ಉದ್ಯೋಗ ಮಾಡಲು ಅಸಾಧ್ಯ ಅಂದು ಕೊಂಡಿದ್ದ ಅಂಧ ವ್ಯಕ್ತಿಯೋರ್ವ ಇದೀಗ ವಾರ್ಷಿಕ ₹47 ಲಕ್ಷ ವೇತನ ಪಡೆಯುತ್ತಿರುವ ಉದ್ಯೋಗಿ.

ಮಧ್ಯಪ್ರದೇಶದ 25 ವರ್ಷ ವಯಸ್ಸಿನ ಅಂಧ ಸಾಫ್ಟ್‌ವೇರ್‌ ಎಂಜಿನಿಯರ್‌ ಯಶ್‌ ಸೊನಾಕಿಯಾ ಎಂಬುವವರು ಮೈಕ್ರೋಸಾಫ್ಟ್‌ ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಅವರಿಗೆ ವಾರ್ಷಿಕ ₹47 ಲಕ್ಷ ವೇತನ ನೀಡಲು ಸಂಸ್ಥೆ ಮುಂದಾಗಿದೆ.

ಯಶ್‌ ಈ ಕಾಲೇಜಿ ನಿಂದ 2021ರಲ್ಲಿ ಬಿ.ಟೆಕ್‌ ಪದವಿ ಪಡೆದಿದ್ದಾರೆ. ಗ್ಲುಕೊಮಾದಿಂದ 8ನೇ ವಯಸ್ಸಿಗೆ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ ಯಶ್‌, ‘ಸ್ಕ್ರೀನ್‌ ರೀಡರ್‌’ ತಂತ್ರಾಂಶದ ಸಹಾಯದಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದರು.

‘ಮೈಕ್ರೋಸಾಫ್ಟ್‌ನ ಉದ್ಯೋಗ ಪ್ರಸ್ತಾವವನ್ನು ಸ್ವೀಕರಿಸಿದ್ದು, ಸದ್ಯದಲ್ಲೇ ಉದ್ಯೋಗಕ್ಕಾಗಿ ಸಂಸ್ಥೆಯ ಬೆಂಗಳೂರಿನ ಕಚೇರಿಗೆ ಹಾಜರಾಗಲಿದ್ದೇನೆ. ಸದ್ಯಕ್ಕೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಲಾಗಿದೆ’ ಎಂದು ಯಶ್‌ ವ್ಯಾಸಂಗ ಮಾಡಿದ ಇಂದೋರ್‌ನ ಶ್ರೀ ಗೋವಿಂದ್‌ರಾಮ್‌ ಸೆಕ್ಸರಿಯಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಸೈನ್ಸ್‌ (ಎಸ್‌ಜಿಎಸ್‌ಐಟಿಎಸ್‌) ಕಾಲೇಜಿನ ಅಧಿಕಾರಿಯೊಬ್ಬರು ಈ ಕುರಿತು ಮಾಹಿತಿ ನೀಡಿದ್ದಾರೆ.

‘ಹುಟ್ಟಿನಿಂದಲೇ ಗ್ಲುಕೊಮಾ ಕಾಯಿಲೆ ಹೊಂದಿದ್ದ ನನ್ನ ಮಗ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗುವ ಆಕಾಂಕ್ಷೆ ಹೊಂದಿದ್ದ. ಆತ ಸಂಪೂರ್ಣವಾಗಿ ದೃಷ್ಟಿ ಕಳೆದುಕೊಂಡ ಬಳಿಕವೂ ನಾವು ಅವನ ಆಸೆಗೆ ಬೆಂಬಲವಾಗಿ ನಿಂತಿದ್ದೆವು. ಅವನು 5ನೇ ತರಗತಿಯವರೆಗೆ ವಿಶೇಷ ಮಕ್ಕಳ ಶಾಲೆಯಲ್ಲಿ ವ್ಯಾಸಂಗ ಮಾಡಿದ. ಬಳಿಕ ಸಾಮಾನ್ಯ ಶಾಲೆಗೆ ಸೇರಿಸಿದೆವು. ಆತನ ಸಹೋದರಿಯೊಬ್ಬಳು ಆತನಿಗೆ ಓದಿಗೆ ನೆರವಾದಳು. ವಿಶೇಷವಾಗಿ ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಆಕೆ ಸಹಕಾರ ನೀಡಿದಳು’ ಎಂದು ಇಂದೋರ್‌ನಲ್ಲಿ ಕ್ಯಾಂಟೀನ್‌ ನಡೆಸುತ್ತಿರುವ ಯಶ್‌ ತಂದೆ ಯಶ್‌ಪಾಲ್‌ ಹೇಳಿದರು.

Leave A Reply

Your email address will not be published.