SBI ಬ್ಯಾಂಕ್ ನಲ್ಲಿ ಖಾತೆ ಹೊಂದಿರುವವರೇ ನಿಮಗೊಂದು ಮುಖ್ಯವಾದ ಮಾಹಿತಿ!!!
ಪ್ರತಿಯೊಬ್ಬರು ತಾವು ಗಳಿಸಿದ ಆದಾಯವನ್ನು ಸುರಕ್ಷಿತವಾಗಿ ಮುಂದಿನ ದಿನಗಳಲ್ಲಿ ವಿನಿಯೋಗ ಮಾಡಲು ನೆರವಾಗುವಂತೆ ಬ್ಯಾಂಕ್,ಇನ್ಸೂರೆನ್ಸ್ , ಪೋಸ್ಟ್ ಆಫೀಸ್ ಇಲ್ಲವೇ ಶೇರ್ ಮಾರ್ಕೆಟ್ ಯೋಜನೆಯ ಅಡಿಯಲ್ಲಿ ಠೇವಣಿ ಮಾಡುವುದು ಸಾಮಾನ್ಯ.
ಬ್ಯಾಂಕಿಂಗ್ ಸೇವೆಗಳ ಮುಖಾಂತರ ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್, ಎಟಿಯಂ ಅಲ್ಲದೆ ಜನರ ಅವಶ್ಯಕತೆಗೆ ಅನುಗುಣವಾಗಿ ಹಣ ಡೆಪಾಸಿಟ್ ಮತ್ತು ಪಡೆದುಕೊಳ್ಳುವ ಸೌಲಭ್ಯ ಕಲ್ಪಿಸಿ ಕೊಟ್ಟಿದೆ.
ಹೀಗೆ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾದ ಗ್ರಾಹಕರಿಗೆ ವಿಶೇಷ ಎಚ್ಚರಿಕೆಯ ಸಂದೇಶವನ್ನು ಬ್ಯಾಂಕ್ ರವಾನಿಸಿದೆ.ನಿಮ್ಮ ಅಕೌಂಟ್ ಬ್ಲಾಕ್ ಆಗಿದೆ ಅದನ್ನು ಸರಿಪಡಿಸಲು ನಿಮ್ಮ ಓಟಿಪಿ ನಂಬರ್ ಇಲ್ಲವೇ ಪಾನ್ ಕಾರ್ಡ್ ನಂಬರ್ ಅಪ್ಡೇಟ್ ಮಾಡಿ ಎಂಬ ಮೆಸೇಜ್ ಇಲ್ಲವೇ ಕರೆ ಬಂದರೆ ಮೋಸ ಹೋಗಬೇಡಿ. ಇದೊಂದು ಜನರ ಹಣ ಲಪಟಾಯಿಸಲು ಆನ್ ಲೈನ್ ವಂಚಕರು ಉಪಯೋಗಿಸುವ ತಂತ್ರವೆಂಬುದನ್ನು ತಿಳಿದುಕೊಳ್ಳಿ ಎಂದು ಎಚ್ಚರಿಸಿದೆ.
ತಂತ್ರಜ್ಞಾನ ಕ್ಷೇತ್ರವು ಬೆಳೆದಂತೆ ಅದರಿಂದ ಏಷ್ಟು ಲಾಭವಾಗುತ್ತಿದೆಯೂ ಅಷ್ಟೇ ಮಾರಕವಾಗುತ್ತಿರುವುದು ವಿಪರ್ಯಾಸ. ಮನೆಯಲ್ಲೇ ಕುಳಿತು ಆನ್ಲೈನ್ ಬ್ಯಾಂಕಿಂಗ್, ಈ – ಪೇಮೆಂಟ್ ಮಾಡಲು ತಂತ್ರಜ್ಞಾನ ನೆರವಾಗುತ್ತಿದೆಯೋ ಹಾಗೆ ಹ್ಯಾಕರ್ ಐಪಿ -ಅಡ್ರೆಸ್ ಇಲ್ಲವೇ ಪಿಷಿಂಗ್ ಮೂಲಕ ಕ್ಷಣ ಮಾತ್ರದಲ್ಲಿ ಮಾಹಿತಿ ಸೋರಿಕೆ ಮಾಡಿ ಕೋಟಿಗಟ್ಟಲೇ ಲೂಟಿ ಮಾಡುತ್ತಾನೆ.
ಆನ್ ಲೈನ್ ವಂಚಕರು ಕರೆ ಮಾಡಿ ಕೆ. ವೈ. ಸಿ ಅಪ್ಡೇಟ್ ಮಾಡಲು ಕೆಳಗಿರುವ ಲಿಂಕ್ ಒತ್ತಿ ಎಂಬ ಮೆಸೇಜ್ ಇಲ್ಲವೇ ಕರೆ ಮೂಲಕ ಜನರನ್ನು ಮೋಸದ ಬಲೆಗೆ ಬೀಳಿಸುವ ರಣತಂತ್ರ ರೂಪಿಸಿದ್ದರೆ, ಅದನ್ನರಿಯದ ಅಮಾಯಕರು ಅವರು ಹೇಳಿದಂತೆ ಮಾಡಿ ಅಕೌಂಟ್ ನ ಹಣವನ್ನು ಕಳೆದುಕೊಂಡವರು ಕೂಡಾ ಇದ್ದಾರೆ.
ಈ ರೀತಿಯ ಫೇಕ್ ಮೆಸೇಜ್ ಗಳಿಗೆ ಯಾವುದೇ ಕಾರಣಕ್ಕೂ ಪ್ರತಿಕ್ರಿಯೆ ನೀಡದಿರಿ ಎಂದು ಸರ್ಕಾರದ ಫ್ಯಾಕ್ಟ್ ಚೆಕರ್ ಪಿಐಬಿ ಫ್ಯಾಕ್ಟ್ ಚೆಕ್ ಟ್ವೀಟ್ ಮಾಡಿದೆ.
ಎಸ್.ಬಿ. ಐ ಯಾವುದೇ ಗ್ರಾಹಕರ ವೈಯಕ್ತಿಕ ವಿವರಗಳನ್ನು ಕಲೆ ಹಾಕುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಇದ್ದಕ್ಕೆ ಸಂಬಂಧ ಪಟ್ಟಂತೆ ಯಾವುದೇ ರೀತಿಯ ಅನುಮಾನಗಳು ಇದ್ದರೂ ಪಿಐಬಿ ವೆಬ್ಸೈಟ್ ಅನ್ನು ಸಂಪರ್ಕಿಸಹುದು.
ಇಲ್ಲವೇ 1930 ಸಹಾಯವಾಣಿಗೆ ಕರೆ ಮಾಡಿ ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು.
ಆರ್.ಬಿ.ಐ ನ ಅಂಕಿ ಅಂಶಗಳ ಪ್ರಕಾರ 2021 – 22 ರಲ್ಲಿ ಗ್ರಾಹಕರು 179 ಕೋಟಿ ಹಣವನ್ನು ಸೈಬರ್ ಕ್ರೈಂ ನಂತಹ ಪ್ರಕರಣಗಳಿಂದ ಕಳೆದು ಕೊಂಡಿದ್ದಾರೆ.ಅದೇ ರೀತಿ 2020 – 21 ನೆ ಸಾಲಿನಲ್ಲಿ ಸುಮಾರು 216 ಕೋಟಿ ವಂಚಕರ ಕೈ ವರ್ಷವಾಗಿದ್ದು ಶೋಚನೀಯ.
ಇಂತಹ ಸೈಬರ್ ಕ್ರೈಂ ನಿಂದ ಪಾರಾಗಲು ಎಸ್. ಬಿ. ಐ ಕೆಲವೊಂದು ನಿರ್ದೇಶನ ಗಳನ್ನು ನೀಡಿದೆ.
ಆನ್ಲೈನ್ ಪೇಮೆಂಟ್ ಮಾಡುವಾಗ ಮಾತ್ರ ಯು.ಪಿ.ಐ ಪಿನ್ ಅನ್ನು ನಮೂದಿಸಬೇಕು.
ಹಣವನ್ನು ವರ್ಗಾಯಿಸುವಾಗ ಮಾತ್ರ ಪಿನ್ ನಂಬರ್ ಬಳಸಿದರೆ ಸಾಕು ಪಡೆದುಕೊಳ್ಳುವ ಸಂದರ್ಭದಲ್ಲಿ ಪಿನ್ ನಂಬರ್ ಬಳಸುವ ಅವಶ್ಯಕತೆ ಇಲ್ಲ.ಜೊತೆಗೆ ಯಾರಿಗೂ ಪಿನ್ ನಂಬರ್ ಅನ್ನು ಶೇರ್ ಮಾಡಬೇಡಿ ಎಂದು ಎಚ್ಚರಿಸಿದೆ.
ಯಾವುದೇ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕ ರಾದರೂ ಕೆ.ವೈ.ಸಿ. ಅಪ್ಡೇಟ್ ಆಗದೇ ಸಿಮ್ ಬ್ಲಾಕ್ ಆಗುವುದನ್ನು ತಡೆಯಲು ಲಿಂಕ್ ಬಳಸಿ ಜೊತೆಗೆ ಒಟಿಪಿ ಕಳಿಸಿ ಎಂಬ ಮೆಸೇಜ್ ಇಲ್ಲವೇ ಕರೆ ಬಂದರೆ ವಂಚರ ಮೋಸಕ್ಕೆ ಬಲಿ ಯಾಗದೆ ,ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸುವುದು ಉತ್ತಮ.