ಹುಡುಗಿ ನೀ ಕಾಟ ಕೊಡುತೀ…ಅಂತ ಈತ ಮಾಡಿದ್ದು ನೋಡಿದರೆ ನೀವು ಹೌಹಾರುವುದು ಖಂಡಿತ!!!

ಸಮಾಜದಲ್ಲಿ ಹಿಂದಿನಿಂದಲೂ ಗಂಡು-ಹೆಣ್ಣು ಮದುವೆಯಾಗೋದು ರೂಢಿಯಲ್ಲಿದೆ. ಆದ್ರೆ ಇತ್ತೀಚಿಗೆ ಜನ್ರು ರೋಬೋಟ್‌, ಕನಸಿನಲ್ಲಿ ಬರುವ ಹುಡುಗಿ, ವಿಮಾನದ ಜೊತೆ ಹೀಗೆ ಚಿತ್ರ-ವಿಚಿತ್ರವಾಗಿ ಮದ್ವೆಯಾಗ್ತಾರೆ. ಇಲ್ಲಾಗಿದ್ದು ಇದೇ. ಇಲ್ಲೊಬ್ಬಾತ ಎಲ್ಲಾ ಬಿಟ್ಟು ಗೊಂಬೆಯನ್ನೇ ಮದ್ವೆಯಾಗಲು ಪ್ಲಾನ್ ಮಾಡ್ತಿದ್ದಾನೆ. ಕಾಲ ಬದಲಾಗುತ್ತಿದೆ. ಬದಲಾವಣೆ ಜಗದ ನಿಯಮ. ಕಾಲ ಬದಲಾದಂತೆ ಜೀವನ ಕ್ರಮ, ಶೈಲಿ  ಬದಲಾಗುವುದು ಸಾಮಾನ್ಯ.ಈಗಿನ ಟ್ರೆಂಡ್ ಹೇಗೆ ಬದಲಾಗಿದೆ ಎಂಬುದಕ್ಕೆ 2 ವರ್ಷದ ಮಗು ಇನ್ಸ್ಟಾಗ್ರಾಮ್ ರೀಲ್ಸ್ ಮಾಡಿ ಪಾಪ್ಯುಲರ್ ಆಗುವುದೋ ಇಲ್ಲವೇ ಯೂಟ್ಯೂಬ್ ನಲ್ಲಿ ವಿಡಿಯೋ ಮಾಡುವಷ್ಟು ಚಾಣಾಕ್ಷತನ ಬಂದಿದೆ.

ಇದಿಷ್ಟೇ ಸಾಕೇ ಮದುವೆ ಎಂಬ ವಿಷಯಕ್ಕೆ ಬಂದರೆ ನೆನ್ನೆ ಎಂಗೇ ಜ್ಮೆಂಟ್ ಆಗಿ ಇವತ್ತು ಮದುವೆ ಆಗಿ ನಾಳೆಗೆ ಡೈವೋರ್ಸ್ ಆಗಿ ಚಾಪ್ಟರ್ ಅಲ್ಲಿಗೆ ಕ್ಲೋಸ್ ಆಗುವ ಮಟ್ಟಿಗೆ ಕಾಲ ಬದಲಾಗಿದೆ. ಇಲ್ಲಿ ಸಂಬಂಧ ಗಳಿಗೆ ಬೆಲೆಯಿಲ್ಲ. ಹಣದ ಹಿಂದೆ ಹೆಜ್ಜೆ ಹಾಕುತ್ತಾ ಲೈಫ್ ಎಂದರೆ ಕೇವಲ ಎಂಜಾಯ್ ಮೆಂಟ್ ಅನ್ನೋ ಹಾಗೆ ಜೀವನ ಸಾಗುತ್ತಿದೆ. ಜೊತೆಗೆ ಸಂಬಂಧದ ಕುರಿತಾಗಿರುವ ಜನರ ಮನೋಭಾವ ಸಹ ವಿಚಿತ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಹಿಂದೆಲ್ಲಾ ಒಬ್ಬ ಗಂಡು, ಒಬ್ಬ ಹೆಣ್ಣು ಮದುವೆಯಾಗುತ್ತಿದ್ದರು. ಪುರುಷ ಹಾಗೂ ಮಹಿಳೆ ಪರಸ್ಪರ ಮದುವೆಯಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡು ಮಕ್ಕಳನ್ನು ಪಡೆದು ಕುಟುಂಬವನ್ನು ಬೆಳೆಸುವುದೇ ಅವರ ಗುರಿ ಆಗಿತ್ತು. ಈಗಿನ ಥರ ಚಿತ್ರ ವಿಚಿತ್ರವಾಗಿ ಮದುವೆಯಾಗಹುದು ಎನ್ನುವ ಕಲ್ಪನೆಯಾಗಲೀ ಅವರಿಗೆ ಇರಲಿಲ್ಲ.

ಹೆಣ್ಣು ಗಂಡು ಮದುವೆಯಾಗುವುದು ಹಾಗಿರಲಿ, ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು, ಗಂಡು ಗಂಡನ್ನೇ ಮದುವೆಯಾಗುವುದು ಜನಸಾಮಾನ್ಯರ ನಡುವೆಯೀಗ ಏನೇನೂ ಅಚ್ಚರಿಯ ವಿಷಯವಾಗಿ ಉಳಿದಿಲ್ಲ. ಈಗ ಮನುಷ್ಯ ಮುಂದೆ ಹೋಗಿ ಬಿಟ್ಟು ರೋಬೋಟ್, ಕಂಪ್ಯೂಟರೈಸ್ಡ್‌ ವರ್ಷನ್ ವ್ಯಕ್ತಿ, ಹೋಲೋಗ್ರಾಮ್ (ವ್ಯಕ್ತಿಯ ಕಾಲ್ಪನಿಕ ರೂಪ)ನ್ನೂ ಮದುವೆಯಾದ ಉದಾಹರಣೆ ಕೂಡಾ ಇದೆ. ಮೊನ್ನೆ ಗುಜರಾತಿನ ವಡೋದರದಲ್ಲಿ ಒಬ್ಬಾಕೆ ತನ್ನನ್ನು ತಾನು ಮದುವೆಯಾಗುವ ಸೋಲೋಗಮಿ ಎಂಬ ವಿವಾಹ ಆಗಿದ್ದಾಳೆ, ಅಲ್ಲದೆ ಗೋವಾಕ್ಕೆ ಹನಿಮೂನ್ ಗೆ ಕೂಡಾ ಹೋಗಿಬಂದಿದ್ದಾಳೆ. ಒಬ್ಬಳೇ ಹನಿಮೂನಿನಲ್ಲಿ ಏನೆಲ್ಲಾ ‘ಸಾಧಿಸಿದಳು ‘ ಅಂತ ಈವರೆಗೆ ಯಾರಿಗೂ ಗೊತ್ತಾಗಿಲ್ಲ.

ಹಾಗೆಯೇ ಇಲ್ಲೊಬ್ಬ ಡಾಲ್ ಅನ್ನು ಪ್ರೀತಿಸಿದ್ದು ಮದುವೆಯಾಗಲು ನಿರ್ಧರಿಸಿ ದ್ದಾನೆ.ಬಹುಶಃ ಸಂಸಾರವೆಂಬ ಜಂಜಾಟ, ಅಮ್ಮನ ಚಿರಿಪಿರಿ, ಹೆಂಡತಿಯ ಗಲಾಟೆ, ಮಕ್ಕಳನ್ನು ಓದಿಸಿ,ಮಲಗಿಸಿ ಎಂದು ಗೋಳು ಹೊಯ್ದು ಕೊಳ್ಳುವ ಮಡದಿ , ಆಫೀಸ್ ಕೆಲಸ ಎಂದು ಮನೆಯ ಕಡೆ ಕಿವಿ ಕೊಡದ ಹುಡುಗ, ಈ ನಡುವೆ ಮತ್ತೊಬ್ಬರ ಮೇಲೆ ಲವ್ ಆಗಿ ಜಗಳ ಪಗಳಗಳು ಹೆಚ್ಚಾಗಿ , ಜೀವನ ನರಕ ಯಾತನೆಯಾಗುವುದು ಬೇಡವೆಂದು ಗೊಂಬೆಯನ್ನು ಮದುವೆ ಯಾಗುತ್ತಿರಬಹುದೇನೋ ?

ಸಿನಿಮಾ, ಪಾರ್ಟಿ ,ಪಾರ್ಕ್ ಎಂದು ತಿರುಗಾಡಿ ಟಾಟಾ  ಬೈ ಬೈ ಹೇಳಿ ಮತ್ತೆ ಯಾರನ್ನೋ ಮದುವೆಯಾಗಿ ,ಬೋರ್ ಎನಿಸಿದಾಗ ಡೈವೋರ್ಸ್ ಕೊಟ್ಟು ಮತ್ತೆ ಇನ್ನೊಬ್ಬರ ಮದುವೆಯಾಗುವ ಬದಲು ರೋಬೋಟ್ , ಗೊಂಬೆಯನ್ನು ಮದುವೆಯಾಗಿ ಜೀವನದ ಪ್ರತಿ ಕ್ಷಣ ಸಂತೋಷದಲ್ಲಿ ಕಳೆಯುವವರು ಕೂಡ ಇದ್ದಾರೆ.

ಟಿಕ್‌ಟಾಕ್‌ನಲ್ಲಿ @montbk5959 ಎಂಬವರು ತಾವು ಚಿಂದಿ ಗೊಂಬೆಯನ್ನು ಮದುವೆಯಾಗಲು ಇಷ್ಟಪಡುತ್ತಿರುವುದಾಗಿ ಹೇಳಿದ್ದಾನೆ. ಈ ವ್ಯಕ್ತಿ ನಟಾಲಿಯಾ ಎಂಬ ತನ್ನ ಸಣ್ಣ ಗೊಂಬೆಯನ್ನು ಒಂದು ವರ್ಷದಿಂದ ಪ್ರೀತಿಸುತ್ತಿದ್ದನು. ಇತ್ತೀಚೆಗಷ್ಟೇ ಇಬ್ಬರೂ ತಮ್ಮ ಪ್ರೀತಿಯ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಈ ಮನುಷ್ಯನು ಗೊಂಬೆಯೊಂದಿಗೆ ನಡೆಯುತ್ತಾ  ಶಾಪಿಂಗ್ ಮಾಡಲು ಕೂಡಾ ಹೋಗುತ್ತಾನೆ. ಅವನು ತನ್ನ ಕುಟುಂಬಕ್ಕೆ ತನ್ನ ಪ್ರೀತಿಯ ಹುಡುಗಿಯನ್ನು (ಗೊಂಬೆಯನ್ನು) ಪರಿಚಯಿಸಿದ್ದಾನೆ ಕೂಡಾ. ಇತ್ತೀಚೆಗೆ, ಅವರು ತಮ್ಮ ಗೊಂಬೆಯನ್ನು ಮದುವೆಯಾಗಲು ಬಯಸುವುದಾಗಿ ತನ್ನ ಟಿಕ್‌ಟಾಕ್ ವೀಕ್ಷಕರಿಗೆ ತಿಳಿಸಿದ್ದಾನೆ.

‘ನನ್ನ ಗೆಳತಿಯೊಂದಿಗೆ ನಾನು  ಜೊತೆಯಲ್ಲೇ ಟಿವಿ ನೋಡುತ್ತೇನೆ. ಎಲ್ಲಾ ವಿಚಾರವನ್ನು ಮುಕ್ತವಾಗಿ ಮಾತನಾಡುತ್ತೇವೆ. ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಎಂದು ಆಕೆಗೆ ತಿಳಿದಿಲ್ಲ, ನಾನು ಈ ವರ್ಷ ಅವಳೊಂದಿಗೆ ಇದ್ದೇನೆ. ನಾನು ಮದುವೆಯಾಗಲು ಇಚ್ಛಿಸುತ್ತೇನೆ’ ಎಂದು ವ್ಯಕ್ತಿ ಟಿಕ್‌ಟಾಕ್‌ನಲ್ಲಿ ಹೇಳಿದ್ದಾರೆ.

ಆದರೆ, ನಟಾಲಿಯಾ ಮಾತ್ರ ಅವರ ಗೊಂಬೆಯಲ್ಲ. ಮತ್ತೊಂದು ಕ್ಲಿಪ್‌ನಲ್ಲಿ, ಆ ವ್ಯಕ್ತಿ ತನ್ನ ಅನುಯಾಯಿಗಳಿಗೆ ತನ್ನ ಗೊಂಬೆ ಮಕ್ಕಳನ್ನು ಪರಿಚಯಿಸಿದನು. ಅವರೊಂದಿಗೆ ವಿಶ್ರಾಂತಿ ಪಡೆಯುವುದು, ಮನೆಕೆಲಸದಲ್ಲಿ ಸಹಾಯ ಮಾಡುವುದು ಮತ್ತು ಅವರಿಗೆ ಬಟ್ಟೆ ತೊಡಿಸುವುದು ಮುಂತಾದ ತಂದೆಯ ಕರ್ತವ್ಯಗಳನ್ನು ತಾನು ನಿರ್ವಹಿಸುತ್ತಿರುವುದಾಗಿ ವ್ಯಕ್ತಿ ಹೇಳಿದ್ದಾನೆ.

ಮನುಷ್ಯನ ಅಸಾಮಾನ್ಯ ಜೀವನಶೈಲಿಯು ಅವನ ಅನೇಕ ಅನುಯಾಯಿಗಳಿಗೆ ವಿಚಿತ್ರವೆನಿಸಿದೆ. ಅಸಹ್ಯವಾದ ಕಾಮೆಂಟ್‌ಗಳನ್ನು ತಡೆಯಲು ಕಾಮೆಂಟ್ ವಿಭಾಗವನ್ನು ನಿಷ್ಕ್ರಿಯಗೊಳಿಸಲು ಸಹ ಜನರು ಆತನನ್ನು ಒತ್ತಾಯಿಸಿದರು. ತನ್ನ ವಿಲಕ್ಷಣ ಕುಟುಂಬದ ಬಗ್ಗೆ ಮಾತನಾಡುತ್ತಾ, ಆ ವ್ಯಕ್ತಿ ‘ಗೊಂಬೆಗಳು ಇಲ್ಲದಿದ್ದರೆ, ನಾನು ಎಲ್ಲರಿಗಿಂತ ಹೆಚ್ಚು ಒಂಟಿಯಾಗಿರುತ್ತೇನೆ’ ಎಂದು ಹೇಳಿದ್ದಾರೆ.

ಈ ಹಿಂದೆ ಬ್ರೆಜಿಲ್‌ನ ಮಹಿಳೆ ಮೀರಿವೊನ್ ರೊಚಾ ಮೊರೇಸ್ ಚಿಂದಿ ಗೊಂಬೆಯನ್ನು ಮದುವೆಯಾಗಿದ್ದರು.
ಬ್ರೆಜಿಲ್‌ನಲ್ಲಿ ಅದ್ಧೂರಿ ಸಮಾರಂಭದಲ್ಲಿ ಗೊಂಬೆಯನ್ನು ಮದ್ವೆಯಾದ ಮಹಿಳೆ ಮೆರಿವೊನ್ ರೋಚಾ ಮೊರೇಸ್ ಅವರು  ಗೊಂಬೆ ಡಾಲ್‌ ಮಾರ್ಸೆಲೊ ಅವರನ್ನು ಭೇಟಿಯಾದಾಗ ಮೊದಲ ನೋಟದಲ್ಲೇ ಪ್ರೀತಿ ಉಂಟಾಗಿತ್ತಂತೆ. ಮೆರಿವೊನ್ ಒಂಟಿಯಾಗಿದ್ದು ಬೇಸರ ಪಟ್ಟುಕೊಳ್ಳುತ್ತಿದ್ದ ಕಾರಣ ಆಕೆಯ ತಾಯಿ ಅವರಿಗೆ ಈ ಡಾಲ್ ಗಿಫ್ಟ್ ಕೊಟ್ಟಿದ್ರಂತೆ. ಆದ್ರೆ ಕ್ರಮೇಣ ಮೆರಿವೊನ್‌ಗೆ ಡಾಲ್‌ ಮೇಲೆ ಪ್ರೀತಿ ಉಂಟಾಗಿ ಅದನ್ನೇ ಮದ್ವೆಯಾಗಲು ನಿರ್ಧರಿಸಿದ್ರಂತೆ. ಮೆರಿವೊನ್ ಮತ್ತು ಮಾರ್ಸೆಲೊ ಅವರು ಭೇಟಿಯಾದ ದಿನದಿಂದಲೂ ಪ್ರಣಯ ಸಂಬಂಧವನ್ನು ಹೊಂದಿದ್ದಾರಂತೆ.250 ಅತಿಥಿಗಳು ಭಾಗವಹಿಸಿದ್ದ ಸುಂದರ ಸಮಾರಂಭದಲ್ಲಿ ದಂಪತಿಗಳು ವಿವಾಹವಾಗಿದ್ದರು.

ಇದು ನನಗೆ ಅದ್ಭುತವಾದ ದಿನ, ಬಹಳ ಮುಖ್ಯ, ತುಂಬಾ ಭಾವನಾತ್ಮಕವಾಗಿದೆ. ಅವನು ನನ್ನ ಜೀವನದಲ್ಲಿ ನಾನು ಯಾವಾಗಲೂ ಬಯಸಿದ ವ್ಯಕ್ತಿ. ಅವನೊಂದಿಗೆ ವೈವಾಹಿಕ ಜೀವನ ಅದ್ಭುತವಾಗಿದೆ. ಅವನು ನನ್ನೊಂದಿಗೆ ಜಗಳವಾಡುವುದಿಲ್ಲ, ವಾದ ಮಾಡುವುದಿಲ್ಲ ಮತ್ತು ನನ್ನ ಎಲ್ಲಾ ಭಾವನೆಯನ್ನು ಅರ್ಥಮಾಡಿಕೊಳ್ಳುತ್ತಾನೆ ಎಂದು ಮೆರಿವೊನ್ ಹೇಳಿದ್ದರು. ದಂಪತಿಗಳು ಮೇ 21 ರಂದು ತಮ್ಮ ಗೊಂಬೆ-ಮಗು ಮಾರ್ಸೆಲಿನ್ಹೋ ಅವರನ್ನು ಸ್ವಾಗತಿಸಿದರು. ಮೈರಿವೊನ್ ಅವರು 200 ಜನರ ಪ್ರೇಕ್ಷಕರಿಗೆ ಲೈವ್-ಸ್ಟ್ರೀಮ್ ಮಾಡುವಾಗ ವೈದ್ಯರು ಮತ್ತು ನರ್ಸ್ ಸಮ್ಮುಖದಲ್ಲಿ ಮನೆಯಲ್ಲಿ ಕೇವಲ 35 ನಿಮಿಷಗಳಲ್ಲಿ ಜನ್ಮ ನೀಡಿದರು ನನ್ನದು ನಿಜವಾದ ಕುಟುಂಬ, ಜನರು ಇದನ್ನು ನಕಲಿ ಎನ್ನುವುದನ್ನು ನಾನು ಇಷ್ಟಪಡುವುದಿಲ್ಲ ಎಂದು ಮೆರಿವೊನ್ ಹೇಳುತ್ತಾರೆ.

Leave A Reply

Your email address will not be published.