ಮಗುವಿನ ಅಳುವಿನಲ್ಲೇ ತಿಳಿಯುತ್ತೆಯಂತೆ ತಂದೆಯ ವಯಸ್ಸು! ; ಅಧ್ಯಯನದಲ್ಲಿ ಹೊರಬಿದ್ದ ಮಾಹಿತಿ ಏನು ಗೊತ್ತಾ?

‘ಮಗು’ ಎಂಬುದು ಏನೂ ಅರಿಯದ ನಿಷ್ಕಲ್ಮಶ ಮನಸ್ಸಿನ ಮುಗ್ಧ ಕೂಸು. ಇಂತಹ ಮಗುವಿನ ನಗುವಿನಲ್ಲಿ ಹೆತ್ತವರು ಖುಷಿ ಕಾಣುತ್ತಾರೆ. ಇಂತಹ ಪುಟ್ಟ ಎಳೆ ಕೂಸಿನ ಒಂದೊಂದು ವರ್ತನೆಗೂ ಇದು ಯಾರ ಹೋಲಿಕೆ ಎಂದು ಗಮನಿಸುವವ್ರೆ ಹೆಚ್ಚು. ಮಗು ನೋಡಿದ ತಕ್ಷಣ ಓ ಇದು ಅಮ್ಮನ ತರ, ಅಪ್ಪನ ತರ ಅನ್ನುತ್ತಾರೆ.

ಅಷ್ಟೇ ಅಲ್ಲದೆ, ಮಗು ನಗುವಾಗ ಇದು ಸೇಮ್ ಅಮ್ಮನ ತರನೇ ನಗುತ್ತೆ. ಅತ್ತರೆ ಅಯ್ಯೋ ನಿನ್ನ ಅಪ್ಪ ಕೂಡ ಚಿಕ್ಕವನಾಗಿರುವಾಗ ಹೀಗೆ ಇದ್ದ ಎಂದು ತಮಾಷೆ ಮಾಡುತ್ತಾರೆ. ಆದ್ರೆ ನಿಮಗೆ ಯಾರಿಗಾದ್ರು ಮಗುವಿನ ಅಳುವಿನಲ್ಲೇ ತಂದೆಯ ವಯಸ್ಸು ತಿಳಿಯುತ್ತೇ ಅನ್ನೋದು ಗೊತ್ತಿದೆಯಾ?

ಹೌದು. ಮಗುವಿನ ಅಳುವಿನಲ್ಲೇ ತಂದೆಯ ವಯಸ್ಸು ಗೊತ್ತಾಗುತ್ತೆ ಎಂದು ಅಧ್ಯಯನವೊಂದು ಹೇಳಿದ್ದು, ಆಶ್ಚರ್ಯ ಮೂಡಿಸಿದೆ. ಅಧ್ಯಯನವು ತಂದೆಯ ವಯಸ್ಸು ಹಾಗೂ ಮಗುವಿನ ಅಳು ಒಂದಕ್ಕೊಂದು ಸಂಬಂಧವನ್ನು ಹೊಂದಿದೆ ಎಂದು ವಿವರಿಸಿದೆ. ಮಗುವಿನ ಧ್ವನಿಯು ದೇಹದ ತೂಕ, ಬೆಳವಣಿಗೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯಲು ಅಧ್ಯಯನ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ವಯಸ್ಸಾದ ಮೇಲೆ ಮದುವೆ ಹಾಗೂ ಮಗುವಿಗೆ ಜನ್ಮ ನೀಡುತ್ತಿದ್ದು, ಇದು ಶಿಶುಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನ ಹೇಳಿದೆ.

ಶಿಶುಗಳ ಅಳು ಮಗುವಿನ ಬೆಳವಣಿಗೆಯ ಸೂಚಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧನೆ ಸೂಚಿಸುತ್ತದೆ. ಮಗುವಿನ ಬದಲಾದ ಅಳುವುದು ಸ್ವಲೀನತೆ ಸ್ಪೆಕ್ಟ್ರಮ್ ಅಸ್ವಸ್ಥತೆ ಅಥವಾ ಇತರ ನರಗಳ ಬೆಳವಣಿಗೆಯ ಅಸ್ವಸ್ಥತೆಗಳ ಅಪಾಯವನ್ನು ಸೂಚಿಸುತ್ತದೆ. ಮಗು ಬೇರೆ ಸ್ವರದಲ್ಲಿ ಅತ್ತರೆ ಮಗುವಿಗೆ ಆಟಿಸಮ್ ಸ್ಪೆಕ್ಟ್ರಮ್ ಡಿಸಾರ್ಡರ್ ಇರಬಹುದು ಎಂದು ಅಧ್ಯಯನ ಹೇಳಿದೆ. ಅಷ್ಟೇ ಅಲ್ಲದೆ ನರ ದೌರ್ಬಲ್ಯವೂ ಇರಬಹುದು ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೆ ಮಗುವಿನ ತೂಕ ಕೂಡ ಕಡಿಮೆ ಇರುತ್ತದೆ.

ಈ ಕುರಿತು ಪ್ರೊಫೆಸರ್ ನೊರಿಕೊ ಒಸುಮಿ ನೇತೃತ್ವದ ಸಂಶೋಧನಾ ತಂಡ, ಟೊಹೊಕು ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಮೆಡಿಸಿನ್ ಅಧ್ಯಯನ ನಡೆಸಿದೆ. ವಯಸ್ಸಾದ ತಂದೆಗೆ ಜನಿಸಿದ ಶಿಶುವಿನ ಸ್ವರವು ಇಲಿಗಳ ಸ್ವರದಂತೆಯೇ ಇರುತ್ತದೆ. ಹಾಗೆಯೇ ಕಡಿಮೆ ವಯಸ್ಸಿನ ವ್ಯಕ್ತಿಗೆ ಜನಿಸಿದ ಮಗುವಿನ ಸ್ವರ ಎರಡರ ವ್ಯತ್ಯಾಸವನ್ನೂ ನೋಡಲಾಯಿತು. ಒಂದೊಮ್ಮೆ ನಾಯಿಯಿಂದ ಅದರ ಮರಿಯನ್ನು ಬೇರ್ಪಡಿಸಿದಾಗ ಮರಿಗಳು ಒಂದು ರೀತಿಯಲ್ಲಿ ಕೂಗುತ್ತವೆ. ತಾಯಿ ಈ ಶಬ್ದಗಳನ್ನು ಆಲಿಸಿದಾಗ ಮರಿಯ ಬಳಿ ಓಡೋಡಿ ಬರುತ್ತದೆ. ಇಲಿಗಳಲ್ಲಿನ ನಡವಳಿಕೆಯು ಮಾನವರಂತೆಯೇ ಇರುತ್ತದೆ.

Leave A Reply

Your email address will not be published.