ಮಾಲ್ ನಲ್ಲಿ ನಮಾಜ್ | ಬಜರಂಗದಳದಿಂದ ಪ್ರತಿಭಟನೆ

ಮಾಲ್ ವೊಂದರಲ್ಲಿ ಅಲ್ಲಿನ ಸಿಬ್ಬಂದಿಗಳು ನಮಾಜ್ ಮಾಡಿರುವ ಘಟನೆಯೊಂದು ನಡೆದಿದೆ. ಇದರ ವಿಷಯ ಗೊತ್ತಾದಂತೆ ಬಜರಂಗದಳ ಕಾರ್ಯಕರ್ತರು ಮಾಲ್ ಗೆ ಬಂದು ಪ್ರತಿಭಟನೆ ಮಾಡಿದ್ದಾರೆ.


Ad Widget

Ad Widget

Ad Widget

Ad Widget
Ad Widget

Ad Widget

ಮಧ್ಯಪ್ರದೇಶದ ಮಾಲ್‌ವೊಂದರಲ್ಲಿ ಈ ಘಟನೆ ನಡೆದಿದೆ‌. ಅಲ್ಲಿನ ಸಿಬ್ಬಂದಿಗಳು ನಮಾಜ್ ಮಾಡಿದ್ದು, ಇದನ್ನು ಖಂಡಿಸಿ ಬಜರಂಗದಳದ ಸಿಬ್ಬಂದಿ ಪ್ರತಿಭಟನೆ ನಡೆಸಿದ್ದಾರೆ. ಭೋಪಾಲ್‌ನ ಡಿಬಿ ಮಾಲ್‌ನಲ್ಲಿ ಈ ಘಟನೆ ನಡೆದಿದೆ. ನಮಾಜ್ ಮಾಡೋ ವೀಡಿಯೋ ವೈರಲ್ ಆಗುತ್ತಿದ್ದಂತೆ, ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಮಾಲ್‌ನಲ್ಲಿ ಅವಕಾಶ ನೀಡದಿರಲು ಮಾಲ್ ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Ad Widget

ಈ ವೀಡಿಯೋದಲ್ಲಿ ಕಾಣಿಸುವಂತೆ ಮಾಲ್‌ನ ಒಂದು ಮೂಲೆಯಲ್ಲಿ ಕೆಲವರು ನಮಾಜ್ ಮಾಡುತ್ತಿದ್ದರು. ಈ ವಿಚಾರ ತಿಳಿದು ಕೂಡಲೇ ಅಲ್ಲಿಗೆ ಬಂದ ಕೆಲ ಬಜರಂಗದಳದ ಸಂಘಟನೆಯ ಕಾರ್ಯಕರ್ತರು ನಮಾಜ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅಲ್ಲೇ ಪ್ರತಿಭಟನೆ ನಡೆಸಲು ಶುರು ಮಾಡಿದ್ದಾರೆ. ಈ ಮಾಲ್ ನಲ್ಲಿ ಈ ನಮಾಜ್ ಕಾರ್ಯ ಇಲ್ಲಿ ಪ್ರತಿದಿನ ನಡೆಯುತ್ತಿದೆ ಎಂದು ನಮಗೆ ಮಾಹಿತಿ ಸಿಕ್ಕಿದೆ ಹಾಗಾಗಿ ಬಂದಿದ್ದೇವೆ ಎಂದು ಬಜರಂಗದಳ ಸದಸ್ಯರು ಆರೋಪಿಸಿದ್ದಾರೆ.

ಅನಂತರ ಅಲ್ಲಿಗೆ ಬಂದ ವ್ಯಕ್ತಿಯೋರ್ವನ ಜೊತೆ, ಬಜರಂಗದಳದ ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಯತ್ನಿಸುತ್ತಾನೆ. ಇದು ಮಾಲ್‌ನ ಮೂಲೆಯಾಗಿದ್ದು, ಇಲ್ಲಿ ಹಿಂದೂ ಸಿಬ್ಬಂದಿಯೂ ಪ್ರಾರ್ಥನೆ ಮಾಡುತ್ತಾರೆ ಎಂದು ಆತ ಹೇಳಿದ್ದಾನೆ.
ಆದರೆ ಬಜರಂಗದಳದ ಕಾರ್ಯಕರ್ತರು ನಮಾಜ್ ಅನ್ನು ರಹಸ್ಯವಾಗಿ ಮಾಡಲಾಗುತ್ತಿದೆ ಎಂದು ಆರೋಪಿಸಿ ನಮಾಜ್ ಮಾಡುತ್ತಿರುವವರ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾರೆ. ಅಲ್ಲದೇ ಮಾಲ್‌ನ ಮಧ್ಯಭಾಗದಲ್ಲಿರುವ ಎಸ್ಕಲೇಟರ್ ಬಳಿಗೆ ಹೋಗಿ ನೆಲದ ಮೇಲೆ ಕುಳಿತು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗಿದ್ದಲ್ಲದೇ ಕೆಲವು ಭಜನೆಗಳನ್ನು ಮಾಡಿದ್ದಾರೆ.

ನಂತರ ಸ್ಥಳೀಯ ಪೊಲೀಸರು ಮಾಲ್‌ಗೆ ತೆರಳಿ ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ಸೌಹಾರ್ದಯುತವಾಗಿ ಪ್ರಕರಣವನ್ನು ಅಂತ್ಯಗೊಳಿಸಿದ್ದಾರೆ. ಬಳಿಕ ಮಾಲ್ ಕೂಡ ಮಾಲ್ ಆವರಣದಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆ ನಡೆಸಲು ಅವಕಾಶವಿಲ್ಲ ಎಂದು ಸೂಚನೆ ನೀಡಿದೆ.

error: Content is protected !!
Scroll to Top
%d bloggers like this: