ಮರಗಳ ರಕ್ಷಣೆಗಾಗಿ ತಯಾರಾಗಿದೆ ‘ಟ್ರೀ ಆಂಬುಲೆನ್ಸ್’ ; ಇದರ ಉಪಯೋಗದ ಕುರಿತು ಇಲ್ಲಿದೆ ಮಾಹಿತಿ

ಇಂದು ಮನುಷ್ಯ, ಪ್ರಾಣಿ-ಪಕ್ಷಿ ಬೇರೆ ಅಲ್ಲ. ಮಾನವರಿಗೆ ಸಿಗುತ್ತಿರೋ ಸೌಲಭ್ಯ ಅವುಗಳಿಗೂ ನೀಡಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಕ್ಷೀಣಿಸುವುದರಲ್ಲಿ ಸಂಶಯವಿಲ್ಲ. ಅದರಲ್ಲೂ ಮರ-ಗಿಡ ಇಲ್ಲವಾದರೆ ಮಾನವರು ಬದುಕುವುದು ಅಸಾಧ್ಯ. ಹೀಗಾಗಿ, ಮರಗಳ ಸಂರಕ್ಷಣೆಗಾಗಿಯೇ ತಯಾರಾಗಿಯೇ ನಿಂತಿದೆ ‘ಟ್ರೀ ಆಂಬುಲೆನ್ಸ್’.

ಹೌದು. ಸ್ವಚ್ಛತೆಯಲ್ಲಿ ಸತತವಾಗಿ ನಂಬರ್ ಒನ್ ಸ್ಥಾನದಲ್ಲಿರುವ ಕ್ಲೀನ್ ಸಿಟಿ ಇಂದೋರ್ ಇದೀಗ ‘ಟ್ರೀ ಆಂಬುಲೆನ್ಸ್’ ಅನ್ನು ಪರಿಚಯಿಸಿದೆ. ಜೈವಿಕ ವೈವಿಧ್ಯತೆಯನ್ನು ರಕ್ಷಿಸಲು, ನಗರವನ್ನು ಹಸಿರಾಗಿಡಲು, ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್ ತೋಟಗಾರಿಕಾ ಇಲಾಖೆಯ ಸಹಯೋಗದೊಂದಿಗೆ ರಾಜಧಾನಿಯಲ್ಲಿ ಹಸಿರು ಸಂರಕ್ಷಣೆಗಾಗಿ ಅಗತ್ಯವಿರುವ ಎಲ್ಲಾ ಸೌಲಭ್ಯಗಳೊಂದಿಗೆ ಈ ಆಂಬುಲೆನ್ಸ್ ವಾಹನಗಳನ್ನು ಸ್ಥಾಪಿಸಿದೆ.

ಈ ವಾಹನಗಳು ನಗರದ ಸುತ್ತಮುತ್ತಲಿನ ಮರಗಳನ್ನು ಆರೋಗ್ಯವಾಗಿಡಲು ಮತ್ತು ಅವುಗಳ ರಕ್ಷಣೆಗೆ ಕಾರ್ಯನಿರ್ವಹಿಸುತ್ತದೆ. ಅನಾರೋಗ್ಯ, ಹುಳು ಬಾಧಿತ ಮರಗಳು ಮತ್ತು ಗಿಡಗಳಿಗೆ ಚಿಕಿತ್ಸೆ ನೀಡಲಿದೆ. ಅಷ್ಟೇ ಅಲ್ಲದೆ, ಈ ಆಂಬುಲೆನ್ಸ್ ನಲ್ಲಿ ಮರ/ ಗಿಡಗಳಿಗೆ ನೀರು ಸಿಂಪಡಣೆ, ಔಷಧ ಸಿಂಪಡಣೆ, ಕತ್ತರಿಸುವ ಉಪಕರಣಗಳು ಸೇರಿದಂತೆ ಎಲ್ಲಾ ಸೌಲಭ್ಯಗಳು ಇವೆ.

ಮುಂದಿನ ದಿನಗಳಲ್ಲಿ ಉತ್ತಮವಾದ ಪರಿಸರ ಸಂರಕ್ಷಣೆಗೆ ಈ ಆಂಬುಲೆನ್ಸ್ ಮಾದರಿಯಾಗಲಿದೆ. ಅಳಿಸಿ ಹೋಗುತ್ತಿರುವ ಸ್ವಚ್ಛಂದವಾದ ಹಸಿರಾದ ಪರಿಸರವನ್ನು ಮತ್ತೆ ಬೆಳೆಸಿ ಉಳಿಸುವುದೇ ಕರ್ತವ್ಯವಾಗಿದೆ..

Leave A Reply

Your email address will not be published.