ಮಾಜಿ ಸಿಎಂ ಸಿದ್ದರಾಮಯ್ಯ ಸಹೋದರ ರಾಮೇಗೌಡ ಇನ್ನಿಲ್ಲ…..!!!

ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಸಹೋದರ ರಾಮೇಗೌಡ ನಿಧನರಾಗಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಾಮೇಗೌಡ (64) ಅವರು ಇಂದು(ಆಗಸ್ಟ್.26) ರಾತ್ರಿ 11:30 ಸಮಯದಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಮೇಗೌಡ ಅವರು ಸಿದ್ದರಾಮಯ್ಯನವರ ಕೊನೆಯ ತಮ್ಮನಾಗಿದ್ದರು.
ಸಿದ್ದರಾಮೋತ್ಸವಕ್ಕೆ ನೀವು ಹೋಗುವುದಿಲ್ವಾ ಎಂದು ರಾಮೇಗೌಡ ಅವರನ್ನು ಮಾಧ್ಯಮಗಳು ಪ್ರಶ್ನಿಸಿದ್ದವು. ಆಗ ನನಗೆ ಹುಷಾರಿಲ್ಲ. ಸಕ್ಕರೆ ಕಾಯಿಲೆಯಿಂದ ಕಾಲು ಗಾಯವಾಗಿದೆ ಎಂದು ಹೇಳಿದ್ದರು.
ತಮ್ಮ ಸ್ವಂತ ಅಣ್ಣ ಅಂದ್ರೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ಸಹ ಸಹೋದರ ರಾಮೇಗೌಡ ಅವರು ಸಿದ್ದರಾಮನಹುಂಡಿಯಲ್ಲಿ ಒಕ್ಕಲತನ ಮಾಡಿಕೊಂಡಿದ್ದರು. ಇನ್ನು ಸಿದ್ದರಾಮಯ್ಯನವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದರೂ ಸಹ ತಮ್ಮ ಕುಟುಂಬವನ್ನು ರಾಜಕೀಯಕ್ಕೆ ಕರೆತಂದಿಲ್ಲ. ಅಲ್ಲದೇ ರಾಜ್ಯಕ್ಕೆ ಯಾವತ್ತೂ ಪರಿಚಯ ಮಾಡಿಕೊಟ್ಟಿಲ್ಲ. ತಮ್ಮ ಹೆಂಡತಿಯನ್ನು ಸಹ ಯಾವ ಕಾರ್ಯಕ್ರಮಕ್ಕೂ ಕರೆದುಕೊಡು ಬಂದವರಲ್ಲ.
ಪುತ್ರರಾದ ಯತೀಂದ್ರ ಹಾಗೂ ದಿವಂಗತ ರಾಕೇಶ್ ಬಿಟ್ಟರೆ ಸಿದ್ದರಾಮಯ್ಯನವರ ಕುಟುಂಬಸ್ಥರು ಬಹಿರಂಗವಾಗಿ ಎಲ್ಲಿ ಕಾಣಿಸಿಕೊಂಡಿಲ್ಲ. ಯಾವುದಕ್ಕೂ ಸುದ್ದಿಯಾಗಿಲ್ಲ. ಹೀಗಾಗಿ ಸಿದ್ದರಾಮಯ್ಯನವರ ಕುಟುಂಬ ಅಷ್ಟಾಗಿ ಯಾರಿಗೂ ಪರಿಚಯ ಇಲ್ಲ.