ಬ್ಯಾಂಕ್ ಆಫ್ ಬರೋಡದಿಂದ ‘ಬರೋಡ ತಿರಂಗಾ ಠೇವಣಿ ಯೋಜನೆ’ ; ಹೆಚ್ಚಿನ ಬಡ್ಡಿಯನ್ನು ನೀಡುವ ವಿಶೇಷ ಅವಧಿಯ ಠೇವಣಿಯ ಕುರಿತು ಇಲ್ಲಿದೆ ಮಾಹಿತಿ
ಭಾರತದ ಪ್ರಮುಖ ಮತ್ತು ಅತ್ಯಂತ ವಿಶ್ವಾಸಾರ್ಹ ಬ್ಯಾಂಕ್‌ಗಳಲ್ಲಿ ಒಂದಾದ ಬರೋಡಾ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದು, ಇದರ ಅಡಿಯಲ್ಲಿ ಅವಧಿ ಠೇವಣಿಗಳಿಗೆ ಹೆಚ್ಚಿನ ಬಡ್ಡಿ ಸಿಗಲಿದೆ.
ಹೌದು. ಬ್ಯಾಂಕ್ ಆಫ್ ಬರೋಡ, ‘ಬರೋಡ ತಿರಂಗಾ ಠೇವಣಿ ಯೋಜನೆ’ ಆರಂಭಿಸಿದೆ. ಈ ಯೋಜನೆಗಳಲ್ಲಿ ಹೆಚ್ಚಿನ ಬಡ್ಡಿಯನ್ನು ನೀಡುತ್ತಿದೆ. ಇದು ಹೆಚ್ಚಿನ ಬಡ್ಡಿ ದರಗಳನ್ನು ನೀಡುವ ವಿಶೇಷ ಅವಧಿಯ ಠೇವಣಿ ಯೋಜನೆಯಾಗಿದೆ. ಬರೋಡಾ ತಿರಂಗ ಠೇವಣಿಗಳು ಎರಡು ಅವಧಿಗಳಲ್ಲಿ ಲಭ್ಯವಿದೆ.
444 ದಿನಗಳ ಠೇವಣಿ ಮೇಲೆ ಶೇಕಡ 5.75ರಷ್ಟು, 555 ದಿನಗಳ ಠೇವಣಿಗಳಿಗೆ ಶೇ 6ರಷ್ಟು ಬಡ್ಡಿ ನೀಡಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಡಿಸೆಂಬರ್ 31ರವರೆಗೆ ಈ ಠೇವಣಿಗಳು ಮುಕ್ತವಾಗಿರಲಿವೆ. ₹2 ಕೋಟಿಗಿಂತ ಕಡಿಮೆ ಮೊತ್ತದ ಠೇವಣಿಗಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.
ಹಿರಿಯ ನಾಗರಿಕರಿಗೆ ಠೇವಣಿಗಳ ಮೇಲೆ ಶೇ 0.50ರಷ್ಟು ಹೆಚ್ಚುವರಿ ಬಡ್ಡಿ ಲಭ್ಯವಾಗಲಿದೆ. ಅಲ್ಲದೆ, ಅವಧಿಗೆ ಮೊದಲು ಹಿಂದಕ್ಕೆ ಪಡೆಯದಿರುವ ಆಯ್ಕೆಯಲ್ಲಿ ಶೇ 0.15ರಷ್ಟು ಹೆಚ್ಚುವರಿ ಬಡ್ಡಿ ಇರಲಿದೆ. 2 ಕೋಟಿ ರೂಪಾಯಿಗಿಂತ ಕಡಿಮೆ ಚಿಲ್ಲರೆ ಠೇವಣಿಗಳಿಗೆ ಇದು ಅನ್ವಯಿಸುತ್ತದೆ.
‘ಭಾರತದ ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸಲು ನಾವು ಗ್ರಾಹಕರಿಗೆ ಈ ಸುವರ್ಣ ಅವಕಾಶವನ್ನು ನೀಡುತ್ತಿದ್ದೇವೆ. ಬರೋಡಾ ತಿರಂಗ ಠೇವಣಿ ಯೋಜನೆಯು ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ’ ಎಂದು ಬ್ಯಾಂಕ್ ಆಫ್ ಬರೋಡಾದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಕೆ. ಖುರಾನಾ ತಿಳಿಸಿದ್ದಾರೆ.