BIG BREAKING । ಕೆಜಿಎಫ್ ನಟ ರಾಕಿ ಭಾಯ್ ಜೊತೆ ನಟಿಸಿದ್ದ, ‘ ಓಂ ಚಿತ್ರದ ಮುತ್ತಪ್ಪ ರೈ’ ಹರೀಶ್ ರೈಗೆ ಕ್ಯಾನ್ಸರ್, ಸ್ಥಿತಿ ಗಂಭೀರ

ಬೆಂಗಳೂರು: ಕನ್ನಡ ಚಿತ್ರರಂಗವಲ್ಲದೇ, ಬಾಲಿವುಡ್, ಹಾಲಿವುಡ್ ನಲ್ಲಿ ಹೊಸ ಕ್ರೇಸ್ ಸೃಷ್ಠಿಸಿದ್ದಂತ ಕೆಜಿಎಫ್ ಚಾಪ್ಟರ್-2 ನಲ್ಲಿ ರಾಕಿ ಭಾಯ್ ಪ್ರೀತಿಯ ಚಾಚನಾಗಿ ನಟಿಸಿದ್ದ ಹರೀಶ್ ರೈ ಅವರೀಗ ಕ್ಯಾನ್ಸರ್ ನಿಂದ ಬಳಲುತ್ತಿರುವ ಆತಂಕಕ್ಕಾರಿ ಸುದ್ದಿ ಬಂದಿದೆ. ಇದೀಗ ಅವರ ಸ್ಥಿತಿ ಗಂಭೀರವಾಗಿರೋದಾಗಿ ತಿಳಿದು ಬಂದಿದೆ.

ಸ್ಯಾಂಡಲ್ ವುಡ್ ನ ಅನೇಕ ಚಿತ್ರಗಳಲ್ಲಿ ನಟಿಸಿದ್ದಂತ ಹರೀಶ್ ರೈ ಅತೀ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟದ್ದು ಅವರು ಹಿಂದೆ ನಟಿಸಿದ ಓಂ ಚಿತ್ರ. ಓಂ ಚಿತ್ರದಲ್ಲಿ ಅವರು ಮುತ್ತಪ್ಪ ರೈ ಪಾತ್ರ ಮಾಡಿ ದೊಡ್ಡ ಸುದ್ದಿ ಮಾಡಿದ್ದರು. ನಂತರ ಈಗ ಅತೀ ಹೆಚ್ಚು ಪ್ರಸಿದ್ಧಿಯನ್ನು ತಂದುಕೊಟ್ಟಿದ್ದು ಕೆಜಿಎಫ್ ಚಿತ್ರವಾಗಿತ್ತು. ಈ ಚಿತ್ರದಲ್ಲಿ ರಾಕಿ ಬಾಯ್ ಪ್ರೀತಿಯ ಚಾಚಾ ಎಂಬುದಾಗಿಯೇ ಹರೀಶ್ ರೈ ಗುರ್ತಿಸಿಕೊಂಡಿದ್ದರು.

ಹೀಗೆ ಕೆಜಿಎಫ್ ಚಿತ್ರದ ಮೂಲಕ ಗುರ್ತಿಸಿಕೊಂಡಿದ್ದಂತ ಹರೀಶ್ ರೈ ಕ್ಯಾನ್ಸರ್ ನಿಂದ ಬಳಲುತ್ತಿರೋದಾಗಿ ತಿಳಿದು ಬಂದಿದೆ. ಅಲ್ಲದೇ ಅವರ ಆರೋಗ್ಯ ಸ್ಥಿತಿ ಈಗ ಗಂಭೀರ ಗೊಂಡಿರೋದಾಗಿ ಹೇಳಲಾಗುತ್ತಿದೆ. ಅವರು ಚಿಕಿತ್ಸೆಗಾಗಿ ಸಹಾಯ ಕೇಳಿದ್ದಾರೆ ಎನ್ನಲಾಗುತ್ತಿದೆ.

Leave A Reply

Your email address will not be published.