BREAKING NEWS : ಕರಾವಳಿಯಲ್ಲಿ ಕೊಲೆ ಪ್ರಕರಣ ಹಿನ್ನೆಲೆ ; ಗಣೇಶೋತ್ಸವಕ್ಕೆ ಪೊಲೀಸರಿಂದ ಟಫ್‌ ರೂಲ್ಸ್ ಜಾರಿ!

ಬೆಳ್ಳಾರೆ : ಬೆಳ್ಳಾರೆಯಲ್ಲಿ ಎರಡು ಹತ್ಯಾ ಪ್ರಕರಣದ ನಂತರ ಹಿನ್ನೆಲೆ ಗೌರಿ ಗಣೇಶ ಹಬ್ಬದ ನಿಮಿತ್ತ ಅಹಿತಕರ ಘಟನೆ ನಡೆಯದಂತೆ ಪೊಲೀಸರ ನೇತೃತ್ವದಲ್ಲಿ ಶಾಂತಿಸಭೆ ನಡೆಸಲಾಯಿತು. ಈ ಸಭೆಯಲ್ಲಿ ಪೋಲೀಸರು ಟಫ್‌ ರೂಲ್ಸ್‌ ಎಚ್ಚರಿಕೆಯನ್ನು ನೀಡಿದ್ದಾರೆ. 

ಪ್ರವೀಣ್‌ ಹತ್ಯೆ ನಂತರ ಬೆಳ್ಳಾರೆ ನಗರದಲ್ಲಿ ಪೊಲೀಸರ ಕಣ್ಗಾವಲು ಹೆಚ್ಚಾಗಿದ್ದು, ಹತ್ಯೆ ಬಳಿಕ ಬೆಳ್ಳಾರೆ ಪೇಟೆಯಲ್ಲಿ ಜನರು ಓಡಾಡೋದಕ್ಕೆ ಭಯ ಪಡುವಂತಾಗಿದ್ದಂತೂ ನಿಜ.  ಪ್ರತಿವರ್ಷವೂ ಬೆಳ್ಳಾರೆಯಲ್ಲಿ ಹಬ್ಬದ ಸಂಭ್ರಮ ಜೋರಾಗಿತ್ತು.
ಈ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಮತ್ತೆ ಕೋಮುಗಲಭೆ ನಡೆಯದಂತೆ ಇಂದು ಪೊಲೀಸರು ಶಾಂತಿಸಭೆ ನಡೆಸಿ ಗಣೇಶೋತ್ಸವ ಆಚರಣೆಗೆ ಹೊಸ ಮಾರ್ಗಸೂಚಿಗಳನ್ನು ನೀಡಿದ್ದಾರೆ.

ಪ್ರತಿವರ್ಷದಂತೆ ಈ ವರ್ಷವೂ ಹಬ್ಬವನ್ನು ಶಾಂತಿಯುವಾಗಿ ನಡೆಯಬೇಕು. ಸಂಘಟನೆಗಳು ಸಮಾಜವನ್ನು ಒಟ್ಟುಗೂಡಿಸುವಂತಿರಬೇಕು. ಎಲ್ಲಾ ಜಾತಿ ಧರ್ಮದವರು ಹಬ್ಬವನ್ನು ಇಲಾಖೆಯ ನಿಯಮದ ಪ್ರಕಾರವೇ ಆಚರಿಸಬೇಕು ಸುಳ್ಯ ವೃತ್ತ ನಿರೀಕ್ಷಕರ ನವೀನ್‌ ಚಂದ್ರ ಮಾಹಿತಿ ನೀಡಿದ್ದಾರೆ.

ಡಿವೈಎಸ್ಪಿ ವೀರೈಯ ಹಿರೇಮಠರವರು ಮಾತನಾಡಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಕೊಂಡು ಹಬ್ಬ ಆಚರಿಸಬೇಕು. ಹಬ್ಬದ ಮೆರೆವಣಿಯಲ್ಲಿ ಡಿಜೆಗೆ ಅವಕಾಶ ಇಲ್ಲ, ಪಟಾಕಿ ಸಿಡಿಸಲು ಅವಕಾಶ ಇಲ್ಲ. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಒಳ್ಳೆಯ ರೀತಿಯಲ್ಲಿ ಹಬ್ಬ ಆಚರಿಸುವಂತೆ ಬೆಳ್ಳಾರೆ ಠಾಣೆಯ ಎಸ್‌.ಐ ಸುಹಾಸ್‌  ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ವಿಶ್ವನಾಥ್‌ ರೈ ಕಳಂಜ, ಗಪೂರ್‌ ಕಲ್ಮಡ್ಕ,ಆನಂದ ಬೆಳ್ಳಾರೆ ಶರೀಫ್‌ ಭಾರತ್‌ ಬಾಳಿಲ, ವಸಂತ ಉಲ್ಲಾಸ್‌, ಜಯರಾಮ ಉಮ್ಮಿಕ್ಕಳ, ಪೇಮಚಂದ್ರ ಬೆಳ್ಳಾರೆ, ಸುಬ್ರಾಯ ಗೌಡ ಪಾಲ್ತಾಡಿ ಮತ್ತಿತರರು ಮಾತನಾಡಿದರು.

Leave A Reply

Your email address will not be published.