Shocking News | ದಲಿತ ವಿದ್ಯಾರ್ಥಿಯ ಎತ್ತಿ ಗೋಡೆಗೆ ಹೊಡೆದ ಶಿಕ್ಷಕ  –ಕಾಂಗ್ರೆಸ್ಸ್ ಆಡಳಿತದ ರಾಜ್ಯದಲ್ಲಿ ಮತ್ತೊಂದು ದಲಿತ ದೌರ್ಜನ್ಯ ಪ್ರಕರಣ !

ದಲಿತ ಬಾಲಕನಿಗೆ ಥಳಿಸಿರುವ ಘಟನೆ ಮತ್ತೊಮ್ಮೆ ವರದಿಯಾಗಿದೆ. ರಾಜಸ್ಥಾನದ ಬಾರ್ಮರ್‌ನಲ್ಲಿ ಶಿಕ್ಷಕನೊಬ್ಬ ದಲಿತ ಬಾಲಕನಿಗೆ ಥಳಿಸಿದ್ದು, ಆತನ ತಲೆಗೆ ಗಾಯವಾಗಿರುವ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.


Ad Widget

Ad Widget

Ad Widget

Ad Widget
Ad Widget

Ad Widget

7ನೇ ತರಗತಿಯ ದಲಿತ ವಿದ್ಯಾರ್ಥಿ ಪರೀಕ್ಷೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸದೇ ಹಾಗೆಯೇ ಬಿಟ್ಟಿದ್ದ. ಇದಕ್ಕೆ ಶಿಕ್ಷಕ ಆತನನ್ನು ಗೋಡೆಗೆ ಹೊಡೆದಿರುವುದಾಗಿ ಥಳಿತ ವಿದ್ಯಾರ್ಥಿಯ ಸಹೋದರ, ಅದೇ ಶಾಲೆಯ 7ನೇ ತರಗತಿ ವಿದ್ಯಾರ್ಥಿ ತಿಳಿಸಿದ್ದಾನೆ. ತಲೆಗೆ ಗಾಯವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ಮನೆಗೆ ಕರೆದೊಯ್ಯಲಾಯಿತು. ಬಳಿಕ ಪೋಷಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ. 


Ad Widget

ಘಟನೆ ಕುರಿತು ಮಾಹಿತಿ ಪಡೆದ ತಕ್ಷಣ ಪೊಲೀಸರು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ದಲಿತ ಬಾಲಕನಿಗೆ ಥಳಿಸಿದ ಆರೋಪದ ಮೇಲೆ ಶಿಕ್ಷಕ ಅಶೋಕ್ ಮಾಳಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ.
ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ದಲಿತ ಬಾಲಕನೊಬ್ಬನಿಗೆ ಶಿಕ್ಷಕ ಹೊಡೆದಿದ್ದರಿಂದ ಆತ ಸಾವನ್ನಪ್ಪಿದ್ದ. ಇದು ದೇಶಾದ್ಯಂತ ಅಶಾಂತಿಗೆ ಕಾರಣವಾಗಿತ್ತು.

error: Content is protected !!
Scroll to Top
%d bloggers like this: