ಬಿಜೆಪಿ ಮುಖಂಡನ ಮನೆಗೆ ಪಿಸ್ತೂಲ್ ಹಿಡಿದು ಬಂದ ದುಷ್ಕರ್ಮಿಗಳು…!

Share the Article

ಹಾಡಹಗಲೇ ಬಿಜೆಪಿ ಮುಖಂಡನ ಮನೆಗೆ ದುಷ್ಕರ್ಮಿಗಳು ಪಿಸ್ತೂಲ್​ ಹಿಡಿದು ಬಂದಿರುವ ಘಟನೆ ಹಾಸನ ನಗರದ ಕೆ.ಆರ್.ಪುರಂದಲ್ಲಿ ನಡೆದಿದೆ.

ನಿನ್ನೆ ಮಧ್ಯಾಹ್ನ ಪಿಸ್ತೂಲ್ ಹಿಡಿದು ಬಿಜೆಪಿ ನಾಯಕ ಡಿ.ಟಿ.ಪ್ರಕಾಶ್ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಮನೆಯಲ್ಲಿದ್ದ ಮಹಿಳೆಯ ಸರ ಕಳ್ಳತನ ಮಾಡಲು ಯತ್ನಿಸಿದ್ದಾರೆ. ಆರೋಪಿಗಳು ಮಹಿಳೆಯ ಹಣೆಗೆ ಪಿಸ್ತೂಲ್ ಇಟ್ಟಿದ್ದು, ಗಾಬರಿಗೊಂಡ ಮಹಿಳೆ ಕಿರುಚಾಡಿದ್ದಾರೆ. ಕೂಡಲೇ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ.ಶಸ್ತ್ರಧಾರಿ ಯುವಕರ ಸಂಚಾರ ಹಾಸನದಲ್ಲಿ ಆತಂಕ ಮೂಡಿಸಿದ್ದು, ಹಾಸನ ಬಡಾವಣೆ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

Leave A Reply