Part Time Job : ವಿವಿಧ ಅವಕಾಶಗಳು, ಹೆಚ್ಚಿನ ಮಾಹಿತಿ ಇಲ್ಲಿದೆ

ಅನೇಕ ಮಂದಿ ಮನೆಯಲ್ಲೇ ಮಾಡುವಂತಹ ಕೆಲಸ ಹುಡುಕುತ್ತಾರೆ. ಹಾಗೂ ದಿನಗಳೆದಂತೆ ಈ ಉದ್ಯೋಗಕ್ಕೆ‌ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ಹಾಗಾಗಿ ಆನ್‌ಲೈನ್ ಮೂಲಕ ದುಡಿಯುಲು ಆರಂಭಿಸಿದವರು ವಿವಿಧ ಕೌಶಲಗಳನ್ನು ಕಲಿಯುವುದರೊಂದಿಗೆ ಮನೆಯಲ್ಲಿಯೇ ಕೆಲಸ ಮಾಡುವವರು ಇದ್ದಾರೆ. ಈ ಹುದ್ದೆಗಳಲ್ಲಿ ಆಸಕ್ತರಾದವರಿಗೆ ವೇತನ, ಉದ್ಯೋಗಗಳು ಯಾವ್ಯಾವು ಎಂಬಿತ್ಯಾದಿ ಮಾಹಿತಿಗಳನ್ನು ನೀಡಲಾಗಿದೆ.

ಆನ್‌ಲೈನ್ ಮೂಲಕ ದುಡಿಯುವವರಿಗಾಗಿ ಅನೇಕ ಉದ್ಯೋಗ ಅವಕಾಶಗಳಿವೆ. ಇದರ ಒಂದು ಲಾಭವೇನೆಂದರೆ ಎಲ್ಲಿ ಉದ್ಯೋಗಿಗಳು ಇರುತ್ತಾರೋ ಅಲ್ಲೇ ದುಡಿಯುವ ಅವಕಾಶ. ಆದರೆ ಆನ್‌ಲೈನ್‌ನಲ್ಲಿ ಉದ್ಯೋಗ ಎಂದರೆ ಅದಕ್ಕಾಗಿ ಹಲವು ಕೌಶಲಗಳು, ಕಾರ್ಯವೈಖರಿ, ಪ್ರಸ್ತುತದ ಸನ್ನಿವೇಶಗಳು ಹಾಗೂ ತಂತ್ರಜ್ಞಾನಗಳ ಕುರಿತು ತಿಳಿಯಲೇಬೇಕಿದೆ.

ಆನ್‌ಲೈನ್ ಟ್ಯೂಟರ್/ ಟ್ಯೂಷನ್: ಆನ್‌ಲೈನ್ ಟ್ಯೂಷನ್ ಕೊಡುವ ಉದ್ಯೋಗಗಳನ್ನು ಮನೆಯಲ್ಲೇ ಮಾಡಬಹುದು. ಈ ಉದ್ಯೋಗಕ್ಕೆ ಉತ್ತಮ ಬೋಧನಾ ಕೌಶಲ್ಯ ಅತ್ಯಗತ್ಯ. ಆಗ ಮಾತ್ರ ಹೆಚ್ಚು ಹಣ ಸಂಪಾದನೆ ಮಾಡಲು ಸಾಧ್ಯ. ಅಲ್ಲದೇ ಈ ಪಾರ್ಟ್ ಟೈಮ್ ಉದ್ಯೋಗವು ಅತ್ಯಂತ ಹೆಚ್ಚಿನ ಬೇಡಿಕೆಯನ್ನೂ ಹೊಂದಿದೆ.

ಜಾಹಿರಾತು / ಹ್ಯವಾಸಿ ಬರವಣಿಗೆ: ಮನೆಯಿಂದಲೇ ಕೆಲಸ ನಿರ್ವಹಿಸಿ ಸಂಪಾದನೆ ಮಾಡಲು ಈ ಉದ್ಯೋಗಗಳು ಉತ್ತಮ ಅವಕಾಶ. ಫುಲ್ ಟೈಂ ಮತ್ತು ಪಾರ್ಟ್‌ಟೈಮ್ ಎರಡು ಉದ್ಯೋಗಗಳು ಇವೆ. ಎಲ್ಲರೂ ಉದ್ಯೋಗವನ್ನು ಮಾಡಬಹುದು. ಇಂಟರ್ನೆಚ್ ಸಂಪರ್ಕ ಹೊಂದಿದ್ದಲ್ಲಿ, ಯಾವುದೇ ಸ್ಥಳ ಊರುಗಳಿಂದಲೇ ಉದ್ಯೋಗ ನಿರ್ವಹಿಸಬಹುದು.

ಎಚ್ಆರ್ ಎಕ್ಸಿಕ್ಯೂಟಿವ್ / ಫ್ರೀಲ್ಯಾನ್ಸರ್: ಈ ಉದ್ಯೋಗಕ್ಕಾಗಿ ವಿಶೇಷವಾಗಿ ಉತ್ತಮ ಬರವಣಿಗೆ ಮತ್ತು ಸಂವಹನ ಕೌಶಲ್ಯ ಇದ್ದರೆ ಚಂದ. ಹೊಸ ಅಭ್ಯರ್ಥಿಗಳಿಗೂ ಅವಕಾಶವಿದ್ದು, ಎಚ್ಆರ್ ವಿಭಾಗದ ಮ್ಯಾನೇಜೆಂಟ್ ಟ್ರೈನಿಗಳು ಸಹ ಉದ್ಯೋಗ ಪಡೆಯಬಹುದು.

ಸರ್ಚ್ ಇಂಜಿನ್/ಮಾರ್ಕೆಟಿಂಗ್: ಈ ವಿಭಾಗಗಳಲ್ಲಿ ಡೇ
ಶಿಫ್ಟ್ ಕೆಲಸ ಇರುತ್ತದೆ. ಯಾವುದೇ ನಿರ್ದಿಷ್ಟಗುರಿಗಳು ಅಥವಾ ಕರೆಯೂ ಇರುವುದಿಲ್ಲ. ವರ್ಕ್ ಪ್ರಂ ಹೋಂ
ಉದ್ಯೋಗ ನಿರ್ವಹಣೆಯೊಂದಿಗೆ ಪ್ರತಿ ತಿಂಗಳು ರೂ.40,000 ವರೆಗೆ ದುಡಿಯಬಹುದು. ಈಗಾಗಲೇ ಈ ವೃತ್ತಿ ಮಾಡುವವರು, ಬೇರೆ ಉದ್ಯೋಗಗಳಲ್ಲಿ ತೊಡಗಿಸಿಕೊಂಡವರನ್ನು ನೋಡಬಹುದು. ಪಾರ್ಟ್‌ಟೈಮ್ ಮತ್ತು ಫುಲ್ ಟೈಂ ಎರಡೂ ಉದ್ಯೋಗಗಳು ಲಭ್ಯ. ಯಾವುದೇ ಸ್ಥಳದಲ್ಲಿ ಇದ್ದುಕೊಂಡು ಉದ್ಯೋಗ ಮಾಡಬಹುದು.

ಪ್ರವಾಸೋದ್ಯಮ ಮಾಹಿತಿ: ಇಂದು ಬಹುಬೇಡಿಕೆಯ
ಪಾರ್ಚ್‌ಟೈಮ್ ಜಾಬ್ಗಳಲ್ಲಿ ಪ್ರವಾಸೋದ್ಯಮದ ಮಾಹಿತಿ ಪ್ರಚಾರ ಮಾಡುವಿಕೆಯನ್ನು ಹೊಂದಿದೆ. ಇಲ್ಲಿ ದುಡಿಯುವಿಕೆಯೂ ಕೂಡ ಕಡಿಮೆ ಅವಧಿಯದ್ದಾಗಿದ್ದು, ಆದಾಯ ಮಾತ್ರ ಹೆಚ್ಚಾಗಿರುತ್ತದೆ. ಉದ್ಯೋಗವು ಸಂಪೂರ್ಣ ಇಂಟರ್‌ನೆಟ್ ಆಧಾರಿತವಾಗಿದ್ದು, ದಿನದಲ್ಲಿ ಕೇವಲ 3ರಿಂದ 4 ತಾಸುಗಳು ನಿರ್ವಹಿಸಿದರೆ ಸಾಕು.

ಪಾರ್ಟ್‌ಟೈಮ್ ಡಿಜಿಟಲ್ ಮಾರ್ಕೆಟಿಂಗ್: ಇಲ್ಲಿ ಯಾವುದಾದರೊಂದು ಕಂಪನಿ ತನ್ನ ಉತ್ಪನ್ನಗಳನ್ನು ಪ್ರಮೋಟ್ ಮಾಡಿಕೊಳ್ಳಲು, ಫ್ರೀಲ್ಯಾನ್ಸ್ ಉದ್ಯೋಗಿಗಳಿಗೆ ಹುಡುಕುತ್ತಿರುತ್ತದೆ. ಇಂಟರ್ನೆಟ್ ಸಂಪರ್ಕದೊಂದಿಗೆ ವಿವಿಧ ಆನ್‌ಲೈನ್ ವೇದಿಕೆಗಳಲ್ಲಿ ಕಂಪನಿಯನ್ನು ಪ್ರಮೋಟ್ ಮಾಡಬೇಕಾಗುತ್ತದೆ. ಇದು ಪಾರ್ಟ್‌ಟೈಮ್. ವರ್ಕ್ ಪ್ರಮ್ ಹೋಮ್ ಜಾಬ್ ಆಗಿದೆ. ಇಲ್ಲಿ ನೇಮಕವಾದ ಮೇಲೆ ಅಗತ್ಯ ತರಬೇತಿಗಳನ್ನು ನೀಡಲಾಗುತ್ತದೆ. ತಿಂಗಳಿಗೆ ರೂ.15,000 ದಿಂದ 40,000 ವರೆಗೆ ಸಂಪಾದನೆ ಮಾಡಬಹುದು.

Leave A Reply

Your email address will not be published.