BREAKING NEWS |ಭಾರತದ ಬಿಜೆಪಿ ನಾಯಕನನ್ನು ಹತ್ಯೆಗೈಯ್ಯಲು ಸಂಚು ; ಭಾರತಕ್ಕೆ ಬರಲಿದ್ದ ಭಯೋತ್ಪಾದಕನನ್ನು ಹೆಡೆಮುರಿ ಕಟ್ಟಿದ ರಷ್ಯಾ

ಭಾರತ ದೇಶದ ಪ್ರಮುಖ ನಾಯಕನನ್ನು ಹತ್ಯೆಗೈಯ್ಯಲು ಸಂಚು ರೂಪಿಸಿ ಭಾರತಕ್ಕೆ ಬರಲು ತಯಾರಿ ನಡೆಸುತ್ತಿದ್ದ ಐಸಿಸ್ ಭಯೋತ್ಪಾದಕನನ್ನು ರಷ್ಯಾ ಹೆಡೆಮುರಿ ಕಟ್ಟಿದೆ.

 

ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರೊಬ್ಬರನ್ನು ಟಾರ್ಗೆಟ್ ಮಾಡಿ, ಭಾರತದಲ್ಲಿ ಸ್ಫೋಟ ನಡೆಸಲು ಹೊಂಚು ಹಾಕಿದ್ದ ಐಸಿಸ್ ಉಗ್ರನನ್ನು ರಷ್ಯಾದ ಭದ್ರತಾ ಪಡೆಗಳು ಬಂಧಿಸಿವೆ. ಈ ಬಗ್ಗೆ ಸ್ವತಃ ರಷ್ಯಾವೇ ಅಧಿಕೃತವಾಗಿ ಮಾಹಿತಿ ನೀಡಿದ್ದು, ಭಾರತದಲ್ಲಿ ನಡೆಯಬಹುದಾಗಿದ್ದ ದೊಡ್ಡ ಅನಾಹುತವನ್ನು ಭಾರತದ ಸ್ನೇಹಿತ ರಷ್ಯಾ ತಡೆದಂತಾಗಿದೆ.

ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ ಇಂದು ಐಸಿಸ್ ಉಗ್ರನ ಬಗ್ಗೆ ಮಾಹಿತಿಯನ್ನು ನೀಡಿದ್ದು, ಅಝಾಮೌ ಎಂಬ ಉಗ್ರನೇ ಸಂಚು ಹಾಕಿದವನಾಗಿದ್ದು, ಈತ ಮೂಲತಃ ಟರ್ಕಿಯವ. ಅಲ್ಲೇ ಐಸಿಸ್​ ಅನ್ನು ಕೂಡ ಸೇರಿಕೊಂಡಿದ್ದ. ಈತನಿಗೆ ಭಾರತದ ಆಡಳಿತಾರೂಢ ಪಕ್ಷದ ಹಿರಿಯ ಮುಖಂಡರನ್ನು ಟಾರ್ಗೆಟ್ ಮಾಡಲು ಐಸಿಸ್​ ಟಾರ್ಗೆಟ್ ನೀಡಿತ್ತು. ಅದರಂತೆ ಈತ ಭಾರತದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡು, ಅನಾಹುತ ಮಾಡಲು ತಯಾರಿ ನಡೆಸಿದ್ದನಂತೆ.

ಈ ಬಗ್ಗೆ ಗುಪ್ತಚರ ಮಾಹಿತಿ ಪಡೆದುಕೊಂಡು ರಷ್ಯಾ, ಈ ಉಗ್ರನನ್ನು ಬಂಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ರಷ್ಯಾ ಭಾರತದಲ್ಲಿ ನಡೆಯಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದೆ.

Leave A Reply

Your email address will not be published.