ವಾಟ್ಸಪ್ ನಿರ್ಬಂಧಿಸಿದೆ ಈ ಫೀಚರ್ ; ಹೊಸತಾಗಿ ಪರಿಚಯಿಸಿದೆ ಪ್ರೊಫೈಲ್ ಫೋಟೋದಲ್ಲಿ ‘ಅವತಾರ್’ ಎಂಬ ಆಯ್ಕೆ

ವಾಟ್ಸಪ್ ತನ್ನ ಗ್ರಾಹಕರನ್ನು ಹೆಚ್ಚಿಸುವ ಸಲುವಾಗಿ ಹೊಸ ಹೊಸ ಫೀಚರ್ ಗಳನ್ನು ಅಪ್ಡೇಟ್ ಮಾಡುತ್ತಲೇ ಬಂದಿದ್ದು, ಈ ಮೂಲಕ ಬಳಕೆದಾರರನ್ನು ತನ್ನತ್ತ ಸೆಳೆಯುತ್ತಿದೆ. ಬಳಕೆದಾರನ ಹಿತದೃಷ್ಟಿಯಿಂದಲೂ ವಾಟ್ಸಪ್ ಕೆಲವೊಂದು ಪ್ರೈವಸಿ ಫೀಚರ್ ಗಳನ್ನು ಅಪ್ಡೇಟ್ ಮಾಡಿದೆ. ಇದೀಗ ಬಳಕೆದಾರರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸ್ಕ್ರೀನ್ ಶಾಟ್ ಆಯ್ಕೆಯನ್ನು ನಿರ್ಬಂಧಿಸಿದೆ.

ಹೌದು. ಮೆಟಾ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಶಾಕಿಂಗ್ ನ್ಯೂಸ್ ನೀಡಿದ್ದು, ವಾಟ್ಸ್​ಆಪ್​ನಲ್ಲಿ ನಿಮಗೆ ಸ್ಕ್ರೀನ್ ಶಾಟ್ ತೆಗೆಯಲು ಸಾಧ್ಯವಿಲ್ಲ. ಸದ್ಯದಲ್ಲೇ ಈ ಆಯ್ಕೆಯನ್ನು ನಿರ್ಬಂಧಿಸಲಿದೆ. ವಿನೂತನ ಅಪ್ಡೇಟ್​ಗಳನ್ನು ನೀಡಿ ಬಳಕೆದಾರರನ್ನು ಮತ್ತಷ್ಟು ಖುಷಿ ಪಡಿಸುವುದರ ಜೊತೆ ಬಳಕೆದಾರರ ಪ್ರೈವಸಿ ಮೇಲೂ ವಾಟ್ಸ್​ಆಪ್ ಕಣ್ಣಿಟ್ಟಿದೆ.

ವರ್ಷದ ಆರಂಭದಲ್ಲಿ ವಾಟ್ಸ್​ಆಪ್ ವೀವ್ ಒನ್ಸ್ ಎಂಬ ಫೀಚರ್ ಪರಿಚಿಸಿತ್ತು. ಇದರ ಮೂಲಕ ಫೋಟೋ ಅಥವಾ ವಿಡಿಯೋವನ್ನು ಓಪನ್ ಮಾಡಿ ನೋಡಿದ ತಕ್ಷಣ ಅದು ಮಾಯವಾಗುವುದು ಮಾತ್ರವಲ್ಲದೆ, ಇವು ಫೋನ್ ಮೆಮೊರಿಯಲ್ಲಿ ಎಲ್ಲಿಯೂ ಸ್ಟೋರ್ ಕೂಡ ಆಗುತ್ತಿರಲಿಲ್ಲ. ಹಂಚಿಕೊಳ್ಳಲು, ಫಾರ್ವರ್ಡ್ ಮಾಡಲು, ನಕಲಿಸಲು, ಉಳಿಸಲು ಸಾಧ್ಯವಿಲ್ಲ. ಆದರೆ, ಇದನ್ನು ಸ್ಕ್ರೀನ್ ಶಾಟ್ ತೆಗೆಯುವಂತಹ ಆಯ್ಕೆ ಇತ್ತು. ಇದೊಂದು ಕಾರಣದಿಂದ ಅನೇಕರು ಈ ಆಯ್ಕೆಯಿಂದ ಬೇಸರಗೊಂಡಿದ್ದರು. ಇದೀಗ ವಾಟ್ಸ್​ಆಪ್ ತನ್ನ ವೀವ್ ಒನ್ಸ್ ಫೀಚರ್​ನಲ್ಲಿ ಸ್ಕ್ರೀನ್ ಶಾಟ್ ತೆಗೆಯುವ ಆಯ್ಕೆಯನ್ನು ಬ್ಲಾಕ್ ಮಾಡಲು ಮುಂದಾಗಿದೆ.

WABetaInfo ಈ ಕುರಿತು ಟ್ವೀಟ್ ಮಾಡಿದ್ದು, ‘ವಾಟ್ಸ್​ಆಪ್ ಆಂಡ್ರಾಯ್ಡ್ ಬೀಟಾದಲ್ಲಿ ಸ್ಕ್ರೀನ್‌ಶಾಟ್ ನಿರ್ಬಂಧಿಸುವ ಕಾರ್ಯ ಪ್ರಗತಿಯಲ್ಲಿದೆ. ಆಂಡ್ರಾಯ್ಡ್​ಗಾಗಿ ವಾಟ್ಸ್​ಆಪ್ ಬೀಟಾದ ಭವಿಷ್ಯದ ನವೀಕರಣಕ್ಕೆ ಧನ್ಯವಾದಗಳು,’ ಎಂದು ಬರೆದುಕೊಂಡಿದೆ. ಅಲ್ಲದೆ, ವಾಟ್ಸ್​ಆಯಪ್​ನಲ್ಲಿ ನೀವು ಡಿಲೀಟ್ ಮಾಡಿದ ಮೆಸೇಜ್ ಅನ್ನು ರಿಕವರಿ ಮಾಡಬಹುದೆಂದು ವರದಿ ಮಾಡಿದ್ದು, ಆಂಡ್ರಾಯ್ಡ್ ಬೇಟಾ ವರ್ಷನ್​ನಲ್ಲಿ ಇದನ್ನು ಪರೀಕ್ಷಿಸಲಾಗುತ್ತಿದೆ.

ಯಾರಿಗಾದರು ಮೆಸೇಜ್ ಕಳುಹಿಸಿದ್ದನ್ನು ತಪ್ಪಿ ಡಿಲೀಟ್ ಮಾಡಿದ್ದರೆ ಆ ಮೆಸೇಜ್ ಅನ್ನು ಮರಳಿ ಪಡೆಯುವ ಆಯ್ಕೆ ಇದಾಗಿದೆ. ಆದರೆ, ಇದು ಎಷ್ಟು ಸಮಯದ ಒಳಗೆ ರಿಕವರಿ ಮಾಡಬಹುದು ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಸದ್ಯದಲ್ಲೇ ಈ ಆಯ್ಕೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಸಿಗಲಿದೆಯಂತೆ.

ಇನ್ನು ಪ್ರೊಫೈಲ್ ಫೋಟೋದಲ್ಲಿ ಅವತಾರ್ ಎಂಬ ಆಯ್ಕೆಯನ್ನು ವಾಟ್ಸ್​ಆಪ್ ಅಭಿವೃದ್ದಿ ಪಡಿಸುತ್ತಿರುವ ಬಗ್ಗೆ ವಾಟ್ಸ್​ಆಪ್ ಬೇಟಾಇನ್​ಫೋ ವರದಿ ಮಾಡಿದೆ. ಈ ಅವತಾರ್ ಫೀಚರ್ ಅನ್ನು ಬಳಸಿ ನಿಮ್ಮ ಪ್ರೊಫೈಲ್ ಫೋಟೋವನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಬಹುದು. ಅಂದರೆ, ಇಲ್ಲಿ ನಿಮಗೆ ಬ್ಯಾಕ್​ಗ್ರೌಂಡ್ ಕಲರ್ ಆಯ್ಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಸದ್ಯಕ್ಕೆ ಪರೀಕ್ಷಾ ಹಂತದಲ್ಲಿರುವ ಈ ಫೀಚರ್ ಕೆಲವೇ ದಿನಗಳಲ್ಲಿ ಆಂಡ್ರಾಯ್ಡ್, ಐಒಎಸ್ ಹಾಗೂ ಡೆಸ್ಕ್ ಟಾಪ್ ಬಳಕೆದಾರರಿಗೆ ಸಿಗಲಿದೆ.

Leave A Reply

Your email address will not be published.