ಉಡುಪಿ : ಮೀನುಗಾರಿಕೆ ವೇಳೆ ಸಮುದ್ರಕ್ಕೆ ಕುಸಿದು ಬಿದ್ದು ಮೀನುಗಾರ ಸಾವು

ಉಡುಪಿ : ಮೀನುಗಾರಿಕೆ ನಡೆಸುತ್ತಿದ್ದಾಗ ಸಮುದ್ರಕ್ಕೆ ಕುಸಿದು ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಬೈಂದೂರಿನ ಕಿರಿಮಂಜೇಶ್ವರ ಗ್ರಾಮದ ನಾಗೂರು ಹೊಸಹಿತ್ತು ಎಂಬಲ್ಲಿ ನಡೆದಿದೆ.

ಮೃತ ಮೀನುಗಾರ ಹೊಸಹಿತ್ತು ನಿವಾಸಿ ನಾರಾಯಣ(60)ಎಂಬುವವರು ಎಂದು ತಿಳಿದು ಬಂದಿದೆ.

ಮೀನುಗಾರಿಕೆಗೆ ಮೃತರು, ದೋಣಿಯಲ್ಲಿ ಸಮುದ್ರಕ್ಕೆ ಹೋಗಿದ್ದರು. ಈ ವೇಳೆ ಕುಸಿದು ಸಮುದ್ರಕ್ಕೆ ಬಿದ್ದಿದ್ದಾರೆ. ಇತರೆ ಮೀನುಗಾರರು ಮೇಲಕ್ಕೆ ಎತ್ತಿ ತಕ್ಷಣ ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರೂ, ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.