ಸಸ್ಯಾಹಾರಿ ಊಟದಲ್ಲಿ ಚಿಕನ್ ಪೀಸ್ | ಆನ್ಲೈನ್ ನಲ್ಲಿ ಊಟ ಆರ್ಡರ್ ಮಾಡುವ ಮುನ್ನ ಈ ಪೋಸ್ಟ್ ಓದಿ..
ಚೆನ್ನೈ: ವ್ಯಕ್ತಿಯೋರ್ವರು ಆರ್ಡರ್ ಮಾಡಿದ್ದ ಸಸ್ಯಹಾರಿ ಊಟದಲ್ಲಿ ಚಿಕನ್ ಪೀಸ್ಗಳು ಕಂಡು ಬಂದಿದೆ. ಇದರಿಂದ ಆಕ್ರೋಶಗೊಂಡ ಆತ ಫುಡ್ ಡೆಲಿವರಿ ಕಂಪೆನಿ ವಿರುದ್ಧ ದೂರು ದಾಖಲಿಸಿದ್ದಾರೆ.
ಪ್ರತಿಷ್ಠಿತ ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿಯಿಂದ ಊಟ ಆಡ೯ರ್ ಮಾಡಿದ್ದರು. ಪಾಸೆ೯ಲ್ ಓಪನ್ ಮಾಡಿ ಊಟ ಮಾಡುತ್ತಿರುವಾಗ ಚಿಕನ್ ಪೀಸ್ ಗಳು ಕಂಡುಬಂದಿದೆ.
ಕೋ ಶೇಶಾ ಎಂಬ ತಮಿಳು ಗೀತೆ ರಚನಕಾರರು ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿ, ಶೇಷಾ ಅವರು ಸಸ್ಯಹಾರಿಯಾಗಿದ್ದು, ಗೋಬಿ ಮಂಚೂರಿ ವಿತ್ ಕಾರ್ನ್ ಫ್ರೈಡ್ ರೈಸ್ನ್ನು ಆರ್ಡರ್ ಮಾಡಿದ್ದರು. ಆದರೆ ಆ ತಿಂಡಿಯಲ್ಲಿ ಅವರಿಗೆ ಚಿಕನ್ ಪೀಸ್ ಇರುವುದು ತಿಳಿದಿದೆ. ಈ ಹಿನ್ನೆಲೆಯಲ್ಲಿ ಅವರು ಸ್ವಿಗ್ಗಿಯು ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ. ಘಟನೆ ಸಂಬಂಧಿಸಿ ಸ್ವಿಗ್ಗಿ ಅವರು ಕ್ಷಮೆಯಾಚಿಸಿ 70 ರೂ. ಪರಿಹಾರವನ್ನು ಅಷ್ಟೇ ನೀಡಿದೆ ಎಂದು ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪರ ವಿರೋಧಗಳೆರಡೂ ಚರ್ಚೆ ಆಗುತ್ತಿದ್ದು, ಅನೇಕರು ನಾನ್ವೆಜ್ ರೆಸ್ಟೋರೆಂಟ್ನಿಂದ ಏಕೆ ಆರ್ಡರ್ ಮಾಡಿದ್ದು ಎಂದು ಪ್ರಶ್ನಿಸುತ್ತಿದ್ದಾರೆ. ಹಾಗೇಯೇ ಈ ರೀತಿ ದೂರು ನೀಡುವುದರಲ್ಲಿ ಅರ್ಥವಿಲ್ಲ ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗಷ್ಟೇ ಜನಪ್ರಿಯ ರೆಸ್ಟೋರೆಂಟ್ನಲ್ಲಿ ಆರ್ಡರ್ ಮಾಡಿದ್ದ ಊಟದಲ್ಲಿ ಹುಳುಗಳು ಕಂಡು ಬಂದಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದರು.