ಗೆಳತಿಯ ಭೇಟಿಗಾಗಿ ಬುರ್ಖಾ ಧರಿಸಿ ಹೋದವ ಇದೀಗ ಪೊಲೀಸ್ ಅತಿಥಿ

ಲಕ್ನೋ: ಗೆಳತಿಯನ್ನು ಭೇಟಿಯಾಗುವ ಇರಾದೆಯಿಂದ ಬುರ್ಕಾ ಧರಿಸಿ ಹೋಗುತ್ತಿದ್ದ ವ್ಯಕ್ತಿ ಪೋಲಿಸರ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದ ಮೆಹಮದ್‍ಪುರದಲ್ಲಿ ನಡೆದಿದೆ.

ಸೈಫ್ ಅಲಿ (25) ಎಂಬ ವ್ಯಕ್ತಿ ಬುರ್ಕಾ ಧರಿಸಿ ಪೊಲೀಸರಿಗೆ ಸಿಕ್ಕಿಬಿದ್ದದ್ದಾನೆ. ಈತನಿಗೆ ಬೇರೊಂದು ಸ್ಥಳದಲ್ಲಿ ಕೆಲಸ ಸಿಕ್ಕಿತ್ತು. ಆದ್ದರಿಂದ, ಊರಿನಿಂದ ಕೆಲಸಕ್ಕೆ ಹೋಗುವ ಮೊದಲು ಗೆಳತಿಯನ್ನು ಭೇಟಿಯಾಗಬೇಕೆಂದು ಬಯಸಿದ್ದ.

ಆದರೆ, ದುರಾದೃಷ್ಟವಶಾತ್ ಮೆಹಮದ್‍ಪುರದಲ್ಲಿ ಹೆಚ್ಚು ಜನರು ಆತನಿಗೆ ಪರಿಚಯಸ್ಥರೇ ಆಗಿದ್ದರು‌. ಆದರೂ, ಆತನಿಗೆ ಒಮ್ಮೆ ಗೆಳತಿಯನ್ನು ಭೇಟಿ ಮಾಡಬೇಕೆಂದು ಬಯಕೆಯಾಗಿತ್ತು ‌ ಆದರೆ, ಗೆಳತಿಯ ಜೊತೆ ಇರುವಾಗ ಯಾರಾದರೂ ನೋಡಿ ಏನನ್ನಾದರೂ ಹೇಳುತ್ತಾರೆ ಎನ್ನುವ ಭಯದಿಂದ ತನ್ನ ಗುರುತನ್ನು ಮರೆಮಾಚುವಂತೆ ಬುರ್ಖಾ ಧರಿಸುವ ಖತನಾ೯ಕ್ ಐಡಿಯಾ ಮಾಡಿದ.

ತನ್ನ ಯೋಚನೆಯಂತೆ, ಸೈಫ್ ಅಲಿ ಮಾರನೇ ದಿನ ಗೆಳತಿಯನ್ನು ಭೇಟಿಯಾಗಲು ಬುರ್ಕಾ ಧರಿಸಿ ಹೋಗಿದ್ದ. ಆದರೆ ಅಲ್ಲಿದ್ದ ಸ್ಥಳೀಯರಿಗೆ ಬುರ್ಕಾ ಧರಿಸಿದವನು ಹುಡುಗ ಎಂದು ತಿಳಿಯಿತು. ಈತ ಏನೋ ತೊಂದರೆ ಮಾಡಲು ಬಂದಿದ್ದಾರೆ ಎನ್ನುವ ಅನುಮಾನದಿಂದ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

Leave A Reply

Your email address will not be published.