ದೇವರ ಸಿನಿಮಾ ಶೂಟಿಂಗ್ ಸಂದರ್ಭ ಅಪಚಾರ | ಶೂ ಧರಿಸಿ ದೇವರ ಭಂಡಾರ ಮುಟ್ಟಿದ ಕೋರಿಯೋಗ್ರಾಫರ್ | ಡ್ಯಾನ್ಸರ್ ಮೈಮೇಲೆ ಬಂದ ದೇವಿ ಹೇಳಿದ್ದಾದರೂ ಏನು?

ಕೊಪ್ಪಳ: ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ದೇವಿಗೆ ಅಪಮಾನ ಆಗಿದೆ ಎಂದು ಡ್ಯಾನ್ಸರ್ ಮೈ ಮೇಲೆ ದೇವಿ ಬಂದಿದ್ದಳು ಎನ್ನಲಾಗಿದ್ದು, ನಂತರ ಚಿತ್ರೀಕರಣ ನಿಂತು ಹೋದ ಘಟನೆಯೊಂದು ಕೊಪ್ಪಳದಲ್ಲಿ ನಡೆದಿದೆ.
ಹೌದು, ಕೊಪ್ಪಳ ತಾಲೂಕಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಹುಲಿಗಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ.


Ad Widget

ನಟಿ ಪ್ರಿಯಾಂಕಾ ಉಪೇಂದ್ರ ವಿಶ್ವರೂಪಿಣಿ ಹುಲಿಗೆಮ್ಮ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸಾಯಿಪ್ರಕಾಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆಗಸ್ಟ್ 9ರಂದು ಹುಲಿಗಿಯ ಹುಲಗೆಮ್ಮ ದೇವಸ್ಥಾನದಲ್ಲಿ ಸಿನಿಮಾ ಸೆಟ್ಟೇರಿದೆ.

ಈ ಸಿನಿಮಾದ ಶೂಟಿಂಗ್ ವೇಳೆ ಡ್ಯಾನ್ಸ್ ಕೊರಿಯೋಗ್ರಾಫರ್ ಮದನ್ ಎಂಬುವವವರು ಶೂ ಹಾಕಿಕೊಂಡು ಭಂಡಾರ ತುಳಿದಿದ್ದು ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ. ಈ ವೇಳೆ ಪೂಜಾ ಮೈಮೇಲೆ ಹುಲಿಗೆಮ್ಮ ದೇವಿ ಬಂದಿದ್ದು, ಶೂ ಕಳಚಿ, ಭಂಡಾರ ತುಳಿಬೇಡಿ ಎಂದು ಕಿರುಚಿದ್ದಾಳೆ.


Ad Widget

ಕೂಡಲೇ ನಿರ್ಮಾಪಕರು ಪೂಜಾಗೆ ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿಸಿದ್ದಾರೆ. ನಂತರ ಹಸಿರು ಬಳೆ ತೊಡಿಸಿ, ಹುಲಿಗೆಮ್ಮನಿಗೆ ಜೋಡುಗಾಯಿ ಒಡೆಸಿ ವಿಶೇಷ ಪೂಜೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಗಿರುವ ತಪ್ಪು ಏನು ಕೇಳಿದಾಗ, ಶೂಟಿಂಗ್‌ ನನ್ನ ವಿರೋಧವಿಲ್ಲ. ಆದರೆ, ನನ್ನ ಭಂಡಾರ ತುಳಿಯಬೇಡಿ ಎಂದಿದ್ದಾಳೆ. ಇದಕ್ಕೆ ಒಪ್ಪಿಕೊಂಡ ನಂತರ ಮತ್ತೆ ಚಿತ್ರೀಕರಣ ಆರಂಭವಾಗಿದೆ.


Ad Widget
error: Content is protected !!
Scroll to Top
%d bloggers like this: