ಮತ್ತೊಮ್ಮೆ ಪಿಟ್ಬುಲ್ ನಾಯಿಯಿಂದ ಮಹಿಳೆ ಮೇಲೆ ದಾಳಿ!

ನವದೆಹಲಿ: ತುಂಬಾ ಡೇಂಜರಸ್ ನಾಯಿಯಲ್ಲಿ ಪಿಟ್ಬುಲ್ ನಾಯಿ ಕೂಡ ಒಂದು. ಈ ನಾಯಿ ಸಾಕಿದ ಮನೆ ಮಾಲಕಿಯನ್ನೇ ಕೊಂದಿದ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಈ ನಾಯಿಯ ಮತ್ತೊಂದು ದಾಳಿ ಸಂಭವಿಸಿದೆ.

 

ಹೌದು. ಗುರುಗ್ರಾಮದ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ಪಿಟ್ಬುಲ್ ನಾಯಿಯು ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದ್ದು, ಮಹಿಳೆಯನ್ನು ಮುನಿ ದೇವಿ ಎಂದು ಗುರುತಿಸಲಾಗಿದೆ.

ಈ ಘಟನೆಯನ್ನು ಹಂಚಿಕೊಂಡ ಮಹಿಳೆ, ಬೆಳಿಗ್ಗೆ 7 ಗಂಟೆಗೆ ಈ ಘಟನೆ ನಡೆದಿದ್ದು, ಕೆಲಸಕ್ಕೆ ಹೋಗುತ್ತಿದ್ದ ಸಮಯದಲ್ಲಿ ನಾಯಿಗಳು ಓಡಿಸಿಕೊಂಡು ಬಂದಾಗ ಮಳೆಯಿಂದಾಗಿ ಜಾರಿ ಬಿದ್ದಿದ್ದರಿಂದ ನಾಯಿ ದಾಳಿ ಮಾಡಿದೆ ಎಂದು ಹೇಳಿದ್ದಾರೆ.

ಗಂಭೀರವಾಗಿ ಗಾಯಗೊಂಡ ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಆದಾಗ್ಯೂ, ಮಹಿಳೆಯನ್ನು ಇನ್ನೂ ಆಸ್ಪತ್ರೆಯಿಂದ ಬಿಡುಗಡೆ ಮಾಡಿಲ್ಲ.ಮಾಹಿತಿಯ ಪ್ರಕಾರ, ಐಪಿಸಿ ಸೆಕ್ಷನ್ 289, 338 ರ ಅಡಿಯಲ್ಲಿ ನಾಯಿಯ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಳೆದ ತಿಂಗಳು, 82 ವರ್ಷದ ಮಹಿಳೆಯೊಬ್ಬರು ಲಕ್ನೋದಲ್ಲಿ ತನ್ನ ಸಾಕು ಪಿಟ್ಬುಲ್ನಿಂದ ಹಲ್ಲೆಗೊಳಗಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು. ಇದೀಗ ಈ ಸಾಲಿಗೆ ಈ ಪ್ರಕರಣವೂ ಸೇರ್ಪಡೆಗೊಂಡಿದೆ.

Leave A Reply

Your email address will not be published.