ಪರೇಶ್ ಮೇಸ್ತಾ ಕೊಲೆ ಆರೋಪಿಗೆ ಜಿಲ್ಲಾ ವಕ್ಫ್ ಉಪಾಧ್ಯಕ್ಷ ಹುದ್ದೆ | ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದೇನು ಗೊತ್ತಾ?

ಕಾರವಾರ : ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಹತ್ಯೆ ಪ್ರಕರಣದ ಆರೋಪಿಗೆ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷ ಹುದ್ದೆ ನೀಡಿದ್ದ ಕುರಿತು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್ ಮಂಡಳಿಗೆ ನಮ್ಮ ಕಡೆಯಿಂದ 50% ಜನ, ವಿರೋಧ ಪಕ್ಷದಿಂದ 50% ಜನ ಕೊಡಬೇಕು ಎಂಬ ತೀರ್ಮಾನ ಆಗಿತ್ತು. ನಾವು ಕೊಟ್ಟಿರುವ ಪಟ್ಟಿ ಸರಿ ಇದೆ. ವಿರೋಧ ಪಕ್ಷದವರು ಕೊಟ್ಟ ಪಟ್ಟಿಯಲ್ಲಿ ಅಣ್ಣಿಗೇರಿ ಇದ್ದರು. ಇದು ಸರಿಯಲ್ಲ ಎಂದು ನಾನು ಹೇಳಿದಾಗ ಈ ಪಟ್ಟಿಯನ್ನು ರದ್ದು ಮಾಡಿದ್ದಾರೆ.

ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಹತ್ಯೆ ಆರೋಪಿಗೆ ಜಿಲ್ಲಾ ವಕ್ಫ್, ಮಂಡಳಿಯ ಉಪಾಧ್ಯಕ್ಷನಾಗಿ ಆಯ್ಕೆ ಮಾಡಿರುವ ಹಿನ್ನಲೆ ಆಕ್ರೋಶಕ್ಕೆ ಮಣಿದು ರಾಜ್ಯ ವಕ್ಫ್ ಮಂಡಳಿ ಆದೇಶ ತಡೆಹಿಡಿದಿದೆ.

Leave A Reply

Your email address will not be published.