ಚಿರತೆಗೆ ಸಹೋದರಿಯಾಗಿ ರಕ್ಷೆ ಕಟ್ಟಿದ ಮಹಿಳೆ!!
ಕೆಲವೊಂದಷ್ಟು ಜನ ಪ್ರಾಣಿ ಪ್ರಿಯರಾಗಿರುತ್ತಾರೆ. ಯಾವ ಮಟ್ಟಿಗೆ ಎಂದರೆ ತನ್ನ ಜೀವದ ಭಯ ತೊರೆದು ಅವುಗಳಿಗೆ ರಕ್ಷಣೆ ನೀಡುವ ಮಟ್ಟಿಗೆ. ಇದೀಗ ಅಂತಹುದೇ ಒಂದು ಘಟನೆ ವರದಿಯಾಗಿದೆ. ಸಹೋದರನಿಗೆ ರಕ್ಷೆ ಕಟ್ಟಲೆಂದು ಹೋಗುತ್ತಿದ್ದ ಮಹಿಳೆಗೆ ಗಾಯಗೊಂಡ ಚಿರತೆ ಎದುರಾಗಿದ್ದು, ಬಳಿಕ ಆ ಮಹಿಳೆ ಮಾಡಿದ್ದು ಕೆಲಸ ಮಾತ್ರ ಎಂತವರನ್ನೂ ಬೆಚ್ಚಿಬೀಳಿಸುವಂತಿದೆ.
ಈ ಘಟನೆ ರಾಜಸ್ಥಾನದ ರಾಜ್‌ಸಮಂದ್ ಜಿಲ್ಲೆಯಲ್ಲಿ ನಡೆದಿದ್ದು, ಮಹಿಳೆ ತನ್ನ ಕುಟುಂಬದೊಂದಿಗೆ ತನ್ನ ಸಹೋದರನಿಗೆ ರಾಖಿ ಕಟ್ಟಲು ಹೊರಟಿದ್ದಳು. ಇದೇ ವೇಳೆ ಮಾರ್ಗಮಧ್ಯೆ ದಿಯೋಗರ್ ಉಪವಿಭಾಗದ ನರನಾ ಪಾಣಿ ರಸ್ತೆಯಲ್ಲಿ ಚಿರತೆ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ವೇಳೆ ಪಾಣಾಡಿ ಗ್ರಾಮದ ತಾಯಿ ಶಕ್ತಿ ಕಾಂಚನ್ ಕನ್ವರ್ ಅವರು, ಚಿರತೆಗೆ ರಕ್ಷಾಸೂತ್ರ ಕಟ್ಟಿ ಶೀಘ್ರ ಗುಣಮುಖವಾಗಲಿ ಎಂದು ಹಾರೈಸಿ ತನ್ನ ಕುಟುಂಬ ಸದಸ್ಯರ ಸಹಾಯದಿಂದ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಮಹಿಳೆಯೊಬ್ಬರು ರಕ್ಷಾಬಂಧನ ಹಬ್ಬದಂದು ತೆಗೆದುಕೊಂಡ ನಡೆ ಭಾರೀ ಚರ್ಚೆಯಲ್ಲಿದ್ದು, ಚಿರತೆಗೆ ಸಹೋದರಿಯಾಗಿ ರಾಖಿ ಕಟ್ಟಿ ರಕ್ಷಣೆಯ ಸಂದೇಶ ನೀಡಿದ್ದಲ್ಲದೆ, ದೀರ್ಘಾಯುಷ್ಯಕ್ಕಾಗಿ ಹಾರೈಸಿರುವುದು ಗ್ರಾಮಸ್ಥರನ್ನು ಅಚ್ಚರಿಗೊಳಿಸಿದೆ.