ದಕ್ಷಿಣ ಕನ್ನಡ ಚುನಾವಣಾ ಕಣಕ್ಕೆ ಎಎಪಿ ಪಕ್ಷ!! ಮಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯಲು ಅಭ್ಯರ್ಥಿ ಫಿಕ್ಸ್!?


Ad Widget

Ad Widget

Ad Widget

Ad Widget
Ad Widget

Ad Widget

ಮಂಗಳೂರು: ದಕ ಜಿಲ್ಲೆಯಲ್ಲಿ ಆಮ್ ಆದ್ಮಿ ಪಕ್ಷ ತನ್ನ ಉತ್ತಮ ಕಾರ್ಯಚಟುವಟಿಕೆಗಳಿಂದ ಸಕ್ರಿಯ ಕಾರ್ಯಕರ್ತರ ಸಂಖ್ಯಾಬಲ ಹೆಚ್ಚಿಸಿಕೊಂಡು ಈ ಬಾರಿ ಚುನಾವಣಾ ಕಣಕ್ಕೆ ಇಳಿಯಲು ಸಜ್ಜಾಗಿದೆ.

ದಕ ಜಿಲ್ಲೆಯಲ್ಲಿ ಅಭಿವೃದ್ಧಿಯ ಪಣ ತೊಟ್ಟು ಮುನ್ನಲೆಗೆ ಬಂದಿರುವ ಎಎಪಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ಮಂಗಳೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಮಂಗಳೂರು ದಕ್ಷಿಣ, ಉತ್ತರ ಹೊರತುಪಡಿಸಿ ಜಿಲ್ಲೆಯ ಸುಳ್ಯ, ಕಡಬ, ಬೆಳ್ತಂಗಡಿ, ಬಂಟ್ವಾಳ ಪುತ್ತೂರಿನಲ್ಲೂ ಎಎಪಿ ಕಾರ್ಯಕರ್ತರ ಸಂಖ್ಯೆ ಹೆಚ್ಚಿದ್ದು, ಉತ್ಸಾಹದಿಂದ ಎಲ್ಲಾ ಕೆಲಸ ಕಾರ್ಯಗಳನ್ನು, ಹೊರಿಸಿದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.


Ad Widget

ಅಲ್ಲದೇ ಜಿಲ್ಲೆಯಲ್ಲಿ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಕೋಮು ಗಲಭೆ, ಕೊಲೆಯಂತಹ ಭೀಕರ ಪ್ರಕರಣಗಳ ಬಳಿಕ ವಿದ್ಯಾವಂತ ಯುವ ಮನಸ್ಸುಗಳು ಬದಲಾಗಿದ್ದು, ಉತ್ತಮ ಆಡಳಿತ ಬಯಸಿ ಆಮ್ ಆದ್ಮಿಯತ್ತ ಹೆಜ್ಜೆ ಹಾಕುತ್ತಿದ್ದಾರೆ ಎನ್ನುವ ಮಾಹಿತಿಯೊಂದು ಇತ್ತೀಚೆಗೆ ನಡೆಸಿದ ಸರ್ವೆ ಮೂಲಕ ತಿಳಿದುಬಂದಿತ್ತು.

ನಿಷ್ಠಾವಂತ ಹಿರಿಯ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ರಂತವರು ಆಮ್ ಆದ್ಮಿ ಪಕ್ಷದತ್ತ ಹೆಜ್ಜೆ ಇರಿಸಿದ್ದು , ಎಲ್ಲಾ ರೀತಿಯ ಬದಲಾವಣೆಗಾಗಿ ಎನ್ನುವ ವಿಚಾರವೊಂದು ಜಿಲ್ಲೆಯ ಜನರ ಮನ ಹೊಕ್ಕಿದ್ದು, ಆ ಹಿನ್ನೆಲೆಯಲ್ಲಿಯೂ ಹಲವರು ಆಮ್ ಆದ್ಮಿಗೆ ಸ್ಥಾನಗಿಟ್ಟಿಸಿಕೊಡಬೇಕು ಎಂದು ಗ್ರಾಮಾಂತರ ಮಟ್ಟದಿಂದಲೇ ಶ್ರಮ ವಹಿಸುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ವೇಣುಗೋಪಾಲ ಪುಣ್ಚಪ್ಪಾಡಿ, ಹಲವು ದಶಕಗಳಿಂದ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಕೆಟ್ಟಾಗ ಅಂದಿನ ಸರ್ಕಾರಗಳು ಕೈಗೊಂಡ ಕ್ರಮಗಳು ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಅಲ್ಲದೇ ಈ ಬಾರಿಯ ಎಎಪಿ ಅಭ್ಯರ್ಥಿ ಸಂತೋಷ್ ಕಾಮತ್ ಕಾಲೇಜು ದಿನಗಳಿಂದಲೇ ಹೋರಾಟಗಳಲ್ಲಿ ಪಾಲು ಪಡೆದಿದ್ದು, ಸಾಮಾಜಿಕ ಕಾಳಜಿ ಇರುವ ಇವರು ಲಾಕ್ ಡೌನ್ ಸಮಯದಲ್ಲಿ ವರ್ತಕರ ಪರವಾಗಿ ಧ್ವನಿ ಎತ್ತಿದ್ದರು ಎಂದರು.

error: Content is protected !!
Scroll to Top
%d bloggers like this: