ಹುಡ್ಗೀರೇ, ನಿಮ್ಗೆ ಅರ್ಜೆಂಟ್ ಆಗಿ ಮದ್ವೆ ಆಗ್ಬೇಕಾ ? ಇಲ್ಲಿದೆ ನೋಡಿ ವರರ ಮಾರ್ಕೆಟ್, ಹೀಗೆ ಹೋಗಿ ಹಾಗೆ ಗಂಟು ಹಾಕ್ಕೊಂಡು ಬರ್ಬೋದು !

ನಾವು ಸಾಮಾನ್ಯವಾಗಿ ಮನೆಗೆ ಬಹು ದಿನಬಳಕೆಯ ಆಹಾರ ಪದಾರ್ಥಗಳನ್ನು, ತರಕಾರಿ ಹಾಗೂ ಇನ್ನಿತರ ವಸ್ತುಗಳ ಖರೀದಿಗಾಗಿ ಮಾರ್ಕೆಟ್ಉಪಯೋಗದ ಗೆ ಹೋಗುತ್ತೇವೆ. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಇಲ್ಲಿಯೇ ಖರೀದಿಸುತ್ತೇವೆ. ಮನೆಯಿಂದ ಸ್ವಲ್ಪ ದೂರ ಇದ್ರೂ ಸರಿ, ಅಲ್ಲೇ ಹೋಗಿ ವಾರಕ್ಕೊಮ್ಮೆ ಬ್ಯಾಗ್ ಫುಲ್ ಮಾಡ್ಕೊಂಡು ಬರ್ತೇವೆ. ಕಾರಣ ಸ್ಪಷ್ಟ: ಮಾಲು ಪಕ್ಕಾ ಮತ್ತು ತುಂಬಾ ಅಗ್ಗ ಎಂದು !
ಈಗ ಅಲ್ಲೊಂದು ಇಂತದ್ದೇ ಮಾರುಕಟ್ಟೆ ಉಂಟು. ಅಲ್ಲಿ ಕೂಡಾ ಜನ ಬಂದು ಹಣ ಸುರಿದು ಭರ್ಜರಿ ವ್ಯಾಪಾರ ಮಾಡ್ಕೊಂಡು ಹೋಗ್ತಾರೆ. ಆದ್ರೆ ಅಲ್ಲಿ ಕೊಂಡ ವಸ್ತುಗಳನ್ನು ಬ್ಯಾಗ್ ನಲ್ಲಿ, ಚೀಲದಲ್ಲಿ ಗಂಟು ಕಟ್ಕೊಂಡು ಹೋಗುವಂತಿಲ್ಲ. ಯಾಕೆಂದರೆ ಅವರು ಮೂರು ಗಂಟು ಕಟ್ಟುವವರು, ಅಂದರೆ ಭಾವೀ ವರರು!!


Ad Widget

ಹೌದು, ಇಲ್ಲಿ ಮದುವೆ ಗಂಡಿನ ಮಾರಾಟ ನಡೆಯುತ್ತಿದೆ. ನಂಬುವ ಅಸಾಧ್ಯವಾಗುತ್ತದೆ ಅಲ್ಲವೇ?? ಆದರೂ ಇದು ಸತ್ಯ ಸಂಗತಿ.

ಬಿಹಾರದ ಮಧುಬನಿ ಜಿಲ್ಲೆಯ ಮಾರುಕಟ್ಟೆಯಲ್ಲಿ ವರರನ್ನು ಮಾರಾಟಕ್ಕಿಡಲಾಗುತ್ತದೆ. 9 ದಿನಗಳ ಕಾಲ ಈ ಮಾರುಕಟ್ಟೆ ನಡೆಯಲಿದ್ದು, ಇಲ್ಲಿ ವಿವಾಹವಾಗದ ಹುಡುಗರೆಲ್ಲಾ, ವಿವಾಹ ಆಗಲು ಮನಸ್ಸಿರುವ ಹುಡುಗರೆಲ್ಲ ಸುಂದರವಾಗಿ ಸಿದ್ಧವಾಗಿ ಬರುತ್ತಾರೆ. ಅದೇ ಸಮಯಕ್ಕೆ ಲಲನೆಯರು ಕೂಡಾ ಲಕಲಕ ಮಿಂಚುತ್ತಾ, ಘಮ ಘಮ ಹರಡುತ್ತಾ, ಸರಬರ ಮಾಡುತ್ತಾ ಸರ ಸರ ನಡೆದು ಬರುತ್ತಾರೆ. ಹಾಗೆ ಬಂದು, ಹುಡುಗಿಯರು ತಮಗೆ ಬೇಕಾದ ವರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.


Ad Widget

ಸಾಮಾನ್ಯವಾಗಿ ಹುಡುಗರು ಮತ್ತು ಹುಡುಗಿಯರು ತಮಗೆ ಬೇಕಾದ ವರವನ್ನು ಮ್ಯಾಟ್ರಿಮೋನಿ ಅಥವಾ ತಿಳಿದಿರುವ ಬ್ರೋಕರ್ ಗಳ ಮೂಲಕ ಆರಿಸಿಕೊಳ್ಳುವುದು ಸಹಜ. ಆದರೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ವರರ ಮಾರುಕಟ್ಟೆ ಮೂಲಕ ಮ್ಯಾಟ್ರಿಮೋನಿ ನಡೆಯುತ್ತದೆ. ಒಂದೇ ದಿನದಲ್ಲಿ ಹುಡುಗಿ ಹುಡುಗನನ್ನು ನೋಡುವ ಶಾಸ್ತ್ರದಿಂದ ಹಿಡಿದು, ಮದುವೆಯಾಗಿ ಹುಡುಗನ ಕೈ ಹಿಡಿದುಕೊಂಡ ಹುಡುಗಿ ಆತನ ಹಿಂದೆ ನಾಚಿಕೊಂಡು ಹೋಗುವ ತನಕ ಎಲ್ಲಾ ಮ್ಯಾಟರ್ ಒಂದೇ ದಿನದಲ್ಲಿ ನಡೆದು ಹೋಗುತ್ತದೆ.


Ad Widget

ಸ್ಥಳೀಯ ಪಿಪ್ಪಲ್ ಮರದ ಕೆಳಗೆ ವರರು ಸುಂದರವಾಗಿ ರೆಡಿಯಾಗಿ ಕುಳಿತುಕೊಳ್ಳುತ್ತಾರೆ. ಅಲ್ಲಿಗೆ ಬರುವ ಸುಂದರ ಹುಡುಗಿಯರು ಹುಡುಗನನ್ನು ಆಯ್ಕೆ ಮಾಡುತ್ತಾರೆ. ವರನನ್ನು ಒಪ್ಪಿಕೊಳ್ಳುವ ಮೊದಲು, ಕುಟುಂಬಗಳು ವರನ ಅರ್ಹತೆ, ಅವರ ಕುಟುಂಬದ ಹಿನ್ನೆಲೆಯನ್ನು ಪರಿಶೀಲಿಸುತ್ತಾರೆ. ಅವರು ಜನನ ಪ್ರಮಾಣಪತ್ರಗಳು, ಶಾಲಾ ಪ್ರಮಾಣಪತ್ರಗಳು ಮುಂತಾದ ಪುರಾವೆಗಳನ್ನು ಸಹ ಕೇಳುತ್ತಾರೆ.

ವಧು ವರನನ್ನು ಆಯ್ಕೆ ಮಾಡಿದ ನಂತರ, ಮುಂದಿನ ಹಂತಗಳಿಗಾಗಿ ಕುಟುಂಬಗಳ ನಡುವೆ ಸಂಭಾಷಣೆಯನ್ನು ಪ್ರಾರಂಭಿಸಲಾಗುತ್ತದೆ. ವರನನ್ನು ಆಯ್ಕೆ ಮಾಡಿದ ತಕ್ಷಣ, ಹುಡುಗಿಯ ಕುಟುಂಬವು ಮದುವೆಯ ವಿಧಿಗಳನ್ನು ಪೂರ್ಣಗೊಳಿಸುತ್ತದೆ. ಸ್ಥಳೀಯ ನಂಬಿಕೆಗಳ ಪ್ರಕಾರ, ಈ ಪದ್ಧತಿಯು ಕರ್ನಾಟ್ ರಾಜವಂಶದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದಿದೆಯಂತೆ.

Ad Widget

Ad Widget

Ad Widget

ಆದರೆ, ವರದಕ್ಷಿಣೆ ರಹಿತವಾಗಿ ಪ್ರಾರಂಭವಾದ ಈ ಪದ್ದತಿಯಲ್ಲಿ ಇಂದು ವರದಕ್ಷಿಣೆ ಕೊಡುವುದು ಮತ್ತು ಪಡೆದುಕೊಳ್ಳುವುದು ಹೆಚ್ಚಾಗಿದೆ ಎಂದು ವರದಿಗಳ ಮೂಲಕ ತಿಳಿದು ಬರುತ್ತದೆ. ವರ ಮಾಡುತ್ತಿರುವ ಉದ್ಯೋಗದ ಮೇಲೆ ವರದಕ್ಷಿಣೆ ನಿರ್ಧಾರವಾಗುತ್ತದೆ ಸಾಮಾನ್ಯವಾಗಿ 50,000 ದಿಂದ ಒಂದು ಲಕ್ಷದವರೆಗೆ ವರದಕ್ಷಿಣೆ ನಡೆಯುತ್ತದೆ. ವರನ ಮಾರುಕಟ್ಟೆ ಎಂಬ ಈ ವಿಚಿತ್ರ ಪದ್ಧತಿ 700 ವರ್ಷಗಳ ಇತಿಹಾಸ ಇದೆ. ಇದು ಇಂದಿಗೂ ಪ್ರಚಲಿತವಾಗಿದೆ ಎಂಬುದೇ ದೊಡ್ಡ ಆಶ್ಚರ್ಯ.

error: Content is protected !!
Scroll to Top
%d bloggers like this: