ಉಡುಪಿ : ಯುವತಿಯೊಂದಿಗೆ ದೇವಸ್ಥಾನಕ್ಕೆ ನುಗ್ಗಿ ಕಳ್ಳತನಕ್ಕೆ ಸ್ಕೆಚ್ ಹಾಕಿದ ಯುವಕ!

Share the Article

ಉಡುಪಿ: ಯುವಕನೋರ್ವ ಹುಡುಗಿಯ ಜೊತೆ ಸೇರಿ ಶ್ರೀ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನಕ್ಕೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನಡೆದಿದೆ.

ದೇವಸ್ಥಾನದಲ್ಲಿ ಯಾರು ಇಲ್ಲದ ವೇಳೆ ಬಾಗಿಲು ಒಡೆದು, ಯುವಕ ಹಾಗೂ ಯುವತಿ ಒಳ ನುಗ್ಗಿದ್ದಾರೆ. ಈ ವೇಳೆ ಯುವಕ ಕಳ್ಳತನಕ್ಕೆ ಯತ್ನಿಸಿದರೆ, ಯುವತಿ ಬೇರೆ ಯಾರಾದರೂ ಬರುತ್ತಾರಾ ಎಂದು ಹೊರಗೆ ಹೋಗಿ ನೋಡಿಕೊಂಡು ಬರುತ್ತಿದ್ದಳು.

ಬಾಗಿಲು ಒಡೆದು ಒಳ ನುಗ್ಗಿದ ಯುವಕ ವರಾಹ ವಿಷ್ಣು ನಾರಸಿಂಹ ದೇವರ ಮೂರ್ತಿ ಮುಟ್ಟಿ ಅಪವಿತ್ರಗೊಳಿಸಿದ್ದಾನೆ. ಆದರೆ, ಕಳ್ಳತನಗೈಯ್ಯಲು ಏನೂ ಸಿಗದೇ ಇದ್ದುದರಿಂದ ಬರಿಗೈಯಲ್ಲಿ ವಾಪಸ್ ಆಗಿದ್ದಾನೆ.

ಈ ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳನ ಮುಖ ಚಹರೆ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ತಾಲೂಕಿನ ಗಂಗೊಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply