ರಸ್ತೆ ಮೇಲೆ ಸ್ಟಂಟ್ ಮಾಡುತ್ತಿರುವ ಪುಟ್ಟ ಬಾಲಕ | ಈತನ ಪ್ರತಿಭೆಯನ್ನು ಕೊಂಡಾಡಿ ವೀಡಿಯೊ ಶೇರ್ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ
ಇಂದಿನ ಯುವಪೀಳಿಗೆಯ ಮಕ್ಕಳಲ್ಲಿ ಅದೆಷ್ಟೋ ಪ್ರತಿಭೆಗಳು ಕಾಣಸಿಗುತ್ತದೆ. ಆದರೆ, ಅವಕಾಶವೆಂಬ ವೇದಿಕೆ ಕಾಣದೆ ಅಲ್ಲೇ ಚಿವುಟಿ ಹೋಗುತ್ತಿದೆ. ಇಂತಹ ಪ್ರತಿಭೆಗಳನ್ನು ಉತ್ತಮ ಮಟ್ಟಕ್ಕೆ ತರಲು ಪ್ರಯತ್ನಿಸುವವರಲ್ಲಿ ಉದ್ಯಮಿ ಆನಂದ್ ಮಹೀಂದ್ರಾ ಕೂಡ ಒಬ್ಬರು.
ಪ್ರತೀ ಬಾರಿ ವಿಶೇಷತೆಯಿಂದ ಕೂಡಿದ ವಿಷಯಗಳ ಕುರಿತು ಟ್ವೀಟ್ ಮಾಡುವ ಇವರು, ಈ ಬಾರಿ ಬಾಲಕನ ಸ್ಟಂಟ್ ವೀಡಿಯೊವನ್ನು ಶೇರ್ ಮಾಡಿದ್ದಾರೆ. ತಿರುನೆಲ್ವೇಲಿ ಸಮೀಪದ ಹಳ್ಳಿಯಲ್ಲಿ ಈ ಹುಡುಗನನ್ನು ನೋಡಿದವರು ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ, ಚಿಕ್ಕ ಹುಡುಗ ರಸ್ತೆಯೊಂದರಲ್ಲಿ ತನ್ನ ಪ್ರತಿಭೆಯನ್ನು ತೋರಿಸುತ್ತಿರುವುದನ್ನು ಕಾಣಬಹುದು. ವೈರಲ್ ಆದ ಕ್ಲಿಪ್‌ನಲ್ಲಿ ಹುಡುಗ ಅನೇಕ ಹಿಮ್ಮುಖ ಪಲ್ಟಿಗಳನ್ನು ಮಾಡುತ್ತಾನೆ ಮತ್ತು ಕೊನೆಯಲ್ಲಿ ಅವನು ಟ್ವಿಸ್ಟ್ ಕ್ಲಿಪ್ ಮಾಡುತ್ತಾನೆ. ಮುಖ್ಯವಾಗಿ ಸರಾಗವಾಗಿ ಲ್ಯಾಂಡ್ ಮಾಡುತ್ತಾನೆ. ಇದೆಲ್ಲ ಮಾಡಿದ್ದು ಜನನಿಬಿಡ ರಸ್ತೆ ಮೇಲೆ ಎಂಬುದು ಕುತೂಹಲಕಾರಿ ಸಂಗತಿ.
ಆನಂದ್ ಮಹೀಂದ್ರಾ ಆ ಹುಡುಗನ ಪ್ರತಿಭೆಯಿಂದ ಸಾಕಷ್ಟು ಆಶ್ಚರ್ಯಚಕಿತರಾಗಿದ್ದು, ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಕಾಮನ್ ವೆಲ್ತ್ 2022 ನಲ್ಲಿ ಭಾರತಕ್ಕೆ ಸಾಕಷ್ಟು ಚಿನ್ನದ ಪದಕ ಬಂದಿದ್ದು, ಮುಂದಿನ ಪೀಳಿಗೆಯ ಪ್ರತಿಭೆಗಳು ರೂಪುಗೊಳ್ಳುತ್ತಿವೆ. ಈ ಪ್ರತಿಭೆಯನ್ನು ನಾವು ಹಾದಿಯಲ್ಲಿ ತರಬೇಕು” ಎಂದು ಶೀರ್ಷಿಕೆ ನೀಡಿದ್ದಾರೆ.
ಮೈಕ್ರೋ ಬ್ಲಾಗಿಂಗ್ ಸೈಟ್‌ನಲ್ಲಿ ಆ ಹುಡುಗನನ್ನು ಬೆಂಬಲಿಸುವ ಅನೇಕ ವಿಮರ್ಶೆ ಪೋಸ್ಟ್ ಬಂದಿದ್ದು, ಕೆಲವರು ಹುಡುಗನಿಗೆ ಸಹಾಯ ಮಾಡುವಂತೆ ಮಹಿಂದ್ರಾಗೆ ಕೇಳಿಕೊಂಡಿದ್ದಾರೆ. ಒಟ್ಟಾರೆ, ಪುಟ್ಟ ಬಾಲಕನ ಸಾಹಸಕ್ಕೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.