ಆಸ್ತಿ ಮಾಡಿದ ಮೋಡಿ | ಆಸ್ತಿಗಾಗಿ ಮಾವನಿಗೆ ಚಪ್ಪಲಿಯಿಂದ ಬಾರಿಸಿದ ಸೊಸೆ

Share the Article

ಅದೆಷ್ಟೇ ಶಾಶ್ವತವಾದ ಸಂಬಂಧವಾದರೂ, ಆಸ್ತಿ ಅಂತಸ್ತು ಬಂದಾಗ ದ್ವೇಷ ಹುಟ್ಟಿಕೊಳ್ಳೋದು ಸಹಜ. ಆದ್ರೆ, ಇಲ್ಲೊಂದು ಕಡೆ ಆಸ್ತಿಗಾಗಿ ತಂದೆ ಹಾಗೂ ಸಹೋದರನೊಂದಿಗೆ ಸೇರಿಕೊಂಡು ಸೊಸೆಯೇ ಮಾವನ ಮೇಲೆ ಚಪ್ಪಲಿಯಿಂದ ಬಾರಿಸಿದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಗಾಝಿಪುರದಲ್ಲಿ ಈ ಘಟನೆ ನಡೆದಿದ್ದು, ತನ್ನ ಮಾವನನ್ನೇ ಚಪ್ಪಲಿಯಿಂದ ಥಳಿಸಿದ ವಿಡಿಯೋ ವೈರಲ್‌ ಆಗಿದೆ. ಅಷ್ಟೇ ಅಲ್ಲದೆ, ಮಾವನನ್ನು ದರದರನೆ ಹೈವೇಗೆ ಎಳೆದು ತಂದಿದ್ದಾಳೆ. ಸೊಸೆಯ ಪೈಶಾಚಿಕ ವರ್ತನೆಯಿಂದ ಮಾವ ಹೈರಾಣಾಗಿದ್ದು, ಪೊಲೀಸ್‌ ಚೌಕಿಯೊಂದರ ಸಮೀಪದಲ್ಲೇ ಈ ಕೃತ್ಯ ನಡೆದಿರೋದು ವಿಡಿಯೋದಲ್ಲಿ ಸೆರೆಯಾಗಿದೆ.

ಅಸಹಾಯಕ ವೃದ್ಧ ಸಹಾಯ ಮಾಡುವಂತೆ ಮೂವರಲ್ಲೂ ಅಂಗಲಾಚುತ್ತಿದ್ದ. ಆದ್ರೆ ಕೊಂಚವೂ ಕರುಣೆ ತೋರದ ಸೊಸೆ ಮತ್ತವಳ ಸಹೋದರ ಹಾಗೂ ತಂದೆ ಒಂದೇ ಸಮನೆ ಆತನನ್ನು ಥಳಿಸಿದ್ದಾರೆ. ವಿಡಿಯೋ ವೈರಲ್‌ ಆಗ್ತಿದ್ದಂತೆ ಪೊಲೀಸರು ಮಹಿಳೆ ಮತ್ತವಳ ತಂದೆಯನ್ನು ಬಂಧಿಸಿದ್ದಾರೆ. ಆಕೆಯ ಸಹೋದರನಿಗಾಗಿ ಹುಡುಕಾಟ ನಡೆಸ್ತಿದ್ದಾರೆ.

ಗಾಯಗೊಂಡಿರೋ ವೃದ್ಧನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹಲ್ಲೆಗೊಳಗಾಗಿರೋ ಸುಖದೇವ್‌ ಸಿಂಗ್‌ನ ಮಗ ಇತ್ತೀಚೆಗಷ್ಟೆ ತೀರಿಕೊಂಡಿದ್ದ. ಸೊಸೆ ಪುಷ್ಪಾ, ಅವಳ ಸಹೋದರ ಕಲಮೇಶ್‌ ಹಾಗೂ ತಂದೆ ರಾಮ್‌ ವಿಲಾಸ್‌ ಆಸ್ತಿಯನ್ನು ಪುಷ್ಪಾ ಹೆಸರಿಗೆ ಮಾಡುವಂತೆ ಒತ್ತಾಯಿಸುತ್ತಿದ್ದರು. ಆದ್ರೆ ಆಕೆಯ ಮಾವ ಸುಖದೇವ್‌ ಒಪ್ಪದೇ ಇದ್ದಾಗ ಮೂವರೂ ಸೇರಿಕೊಂಡು ಆತನನ್ನು ಥಳಿಸಿದ್ದಾರೆ. ಒಂದು ಆಸ್ತಿ ಎಂಬ ಆಸೆ ಮನುಷ್ಯತ್ವವೇ ಇಲ್ಲದ ಮೃಗದ ತರ ಮಾಡಿ ಹಾಕಿದೆ..

Leave A Reply