ಮೂಡುಬಿದ್ರೆ: ಹಗಲು ಹೊತ್ತಲ್ಲೇ ಅಕ್ರಮ ಗೋ ಸಾಗಾಟ!! ಹಿಂದೂ ಯುವಕರಿಬ್ಬರ ಬಂಧನ
ಮೂಡುಬಿದ್ರೆ:ಅಕ್ರಮವಾಗಿ ಮೂರು ಗೋವುಗಳನ್ನು ಸಾಗಿಸುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ ಘಟನೆಯೊಂದು ಮೂಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ವಿದ್ಯಾಗಿರಿಯಲ್ಲಿ ನಡೆದಿದೆ.
ಬಂಧಿತರನ್ನು ಮೂಡುಬಿದ್ರೆ ಲಾಡಿ ನಿವಾಸಿಗಳಾದ ಸಂದೇಶ್ ಶೆಟ್ಟಿ ಹಾಗೂ ಪ್ರಣೀತ್ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಅಕ್ರಮವಾಗಿ ಗೋ ಸಾಗಾಟ ನಡೆಸಿ, ಕಸಾಯಿಖಾನೆ ನಡೆಸುವವರಿಗೆ ಮಾರಲು ಯತ್ನಿಸಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.
ಘಟನೆ ವಿವರ:ಮೂಡುಬಿದ್ರೆಯ ವಿದ್ಯಾಗಿರಿಯಲ್ಲಿ ಹಗಲು ಹೊತ್ತಿನಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಟೆಂಪೋವೊಂದು ಬಂದಿದ್ದು, ಟೆಂಪೋದಲ್ಲಿ ಮೂರು ಹಸುಗಳನ್ನು ಕಟ್ಟಿ ಸಾಗಿಸಲಾಗುತ್ತಿತ್ತು.ಕೂಡಲೇ ಅನುಮತಿ ಪತ್ರ ಕೇಳಿದ್ದು, ಅವರಿಬ್ಬರಲ್ಲಿ ಯಾವುದೇ ಅನುಮತಿ ಪಾತ್ರವಿಲ್ಲದೇ ಇದ್ದುದರಿಂದ ಅಕ್ರಮ ಸಾಗಾಟ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು.
ನಗರದ ನಿವಾಸಿಯೊಬ್ಬರಿಂದ ಖರೀದಿಸಿದ ಗೋವು ಇದಾಗಿದ್ದು, ಮಾರಲು ಕೊಂಡುಹೋಗುತ್ತಿರುವುದಾಗಿ ಆರೋಪಿಗಳು ಪೊಲೀಸರ ಮುಂದೆ ಒಪ್ಪಿಕೊಂಡಿದ್ದು, ಅಕ್ರಮ ಗೋ ಸಾಗಾಟ, ಅಕ್ರಮ ಕಸಾಯಿಖಾನೆ ಬಗ್ಗೆ ಹಿಂದೂ ಸಂಘಟನೆಗಳ ಪ್ರಬಲ ವಿರೋಧದ ನಡುವೆಯೇ ಹಗಲು ಹೊತ್ತಿನಲ್ಲಿ ಹಿಂದೂ ಯುವಕರೇ ಗೋ ಸಾಗಾಟ ನಡೆಸಿದ್ದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ.