ಈಶ್ವರಮಂಗಲ : ಹಿಂ.ಜಾ.ವೇ.ಯಿಂದ ಪ್ರವೀಣ್ ನೆಟ್ಟಾರು ಅವರಿಗೆ ಶ್ರದ್ಧಾಂಜಲಿ

ಪುತ್ತೂರು : ಹಿಂದು ಜಾಗರಣ ವೇದಿಕೆ ಈಶ್ವರಮಂಗಲದ ವತಿಯಿಂದ ನಮ್ಮೆಲ್ಲರನ್ನು ಅಗಲಿದ ಸಹೋದರ ಪ್ರವೀಣ್ ನೆಟ್ಟಾರು ರ ವರ ಶ್ರದ್ಧಾಂಜಲಿ ಸಭೆಯು ಪಂಚಲಿಂಗೇಶ್ವರ ಸಭಾ ಭವನ ಈಶ್ವರಮಂಗಲದಲ್ಲಿ ನಡೆಯಿತು ಸೇರಿರುವ ಎಲ್ಲರೂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಯನ್ನು ಮಾಡಿ ನಮನವನ್ನು ಸಲ್ಲಿಸಿ ಕಾರ್ಯಕ್ರಮ ಆರಂಭಿಸಲಾಯಿತು. ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಯುವ ವಾಹಿನಿ ಸಹಪ್ರಮುಖ್ ಚಿನ್ಮಯ್ ಈಶ್ವರಮಂಗಲ , ಹಿರಿಯರಾದ ಪೂರ್ಣತ್ಮ ರಾಮ್ ಈಶ್ವರಮಂಗಲ ,ರಾಜೇಂದ್ರ ಪ್ರಸಾದ್ ರೈ ಮೇನಾಲ,ದೀಪಕ್ ಮುಂಡ್ಯ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ನಿವೃತ್ತ ಅಧ್ಯಾಪಕರಾದ ರಾಮಣ್ಣ ರೈ , ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ರಾಜೇಶ್ ಪಂಚೋಡಿ,ತಾಲೂಕ್ ಸಂಪರ್ಕ ಪ್ರಮುಖ ಪ್ರಜ್ವಲ್ , ಸತೀಶ್ ಸುರುಲಿಮೂಳೆ,ಚಂದ್ರಹಾಸ , ಗೌರೀಶ್, ಹರೀಶ್ ಬಾಬು,ಚಂದ್ರ ಟೈಲರ್ ಸೇರಿದಂತೆ ಅನೇಕ ಸಂಘಟನೆ ಮತ್ತು ಪರಿವಾರದ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು ಕಾರ್ಯಕ್ರಮದ ಕೊನೆಯಲ್ಲಿ ಸಂಘ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Leave A Reply

Your email address will not be published.