ಭಕ್ತರಿಗಾಗಿ ಮಾಡುತ್ತಿದ್ದ ಗಂಜಿ ಪಾತ್ರೆಯಲ್ಲಿ ವ್ಯಕ್ತಿ ಬಿದ್ದು ಸಾವು | CCTV ಯಲ್ಲಿ ಸೆರೆಯಾಯ್ತು ಭಯಾನಕ ವೀಡಿಯೋ

ಸಾವು ಯಾವ ರೀತಿಯಲ್ಲಿ ಬಂದು ನಮ್ಮನ್ನು ಒಕ್ಕರಿಸುತ್ತೋ ಅದು ಯಾರಿಗೂ ಗೊತ್ತಾಗುವುದಿಲ್ಲ. ಹಾಗೆನೇ ದೇವಸ್ಥಾನದ ಭಕ್ತರಿಗೆ, ಅಡುಗೆ ಸಹಾಯಕ್ಕೆ ಬಂದ ವ್ಯಕ್ತಿಯೋರ್ವ ಅದೇ ಅಡುಗೆ ಮಾಡುವಾಗ ಪ್ರಾಣ ಬಿಟ್ಟದ್ದು ನಿಜಕ್ಕೂ ಆಘಾತಕಾರಿ.

 

ಮೃತ ವ್ಯಕ್ತಿಯನ್ನು ಮುತ್ತುಕುಮಾರ್ ಎಂದು ಗುರುತಿಸಲಾಗಿದೆ.

ಮಧುರೈನ ಪಜಂಗನಾಥಂ ಬಳಿ ಮುತ್ತು ಮಾರಿಯಮ್ಮಮ್ ದೇವಸ್ಥಾನದ ಭಕ್ತರಿಗಾಗಿ ಶುಕ್ರವಾರ ದೊಡ್ಡದಾದ ಪಾತ್ರದಲ್ಲಿ ಅನ್ನ ಬೇಯಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಬಿಸಿ ಗಂಜಿಗೆ ಬಿದ್ದ ಮುತ್ತುಕುಮಾರ್ ಅಡುಗೆ ಕೆಲಸಕ್ಕೆ ಸಹಾಯ ಮಾಡುತ್ತಿದ್ದು, ಈ ವೇಳೆ ತಲೆ ತಿರುಗಿ ಬಿಸಿ ಗಂಜಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಕೂಡಲೇ ಅಲ್ಲಿದ್ದ ಅನೇಕರು ಮುತ್ತುಕುಮಾರ್ ಅವರನ್ನು ಬಿಸಿ ಗಂಜಿ ಇದ್ದ ಪಾತ್ರದಿಂದ ಹೊರ ತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಕೊನೆಗೆ ಅವರು ಇಡೀ ಪಾತ್ರವನ್ನೇ ಕೆಳಗೆ ಮಗುಚಿದ್ದಾರೆ. ನಂತರ ಮುತ್ತು ಕುಮಾರ್ ಅರನ್ನು ರಾಜಾಜಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ತಮಿಳುನಾಡಿನ ಮಧುರೈನಲ್ಲಿ ಈ ಘಟನೆ ನಡೆದಿದ್ದು, ಈ ಘಟನೆಯ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜುಲೈ 29 ರಂದು ಈ ಘಟನೆ ನಡೆದಿದ್ದು, 65% ಶೇಕಡಾ ಸುಟ್ಟಗಾಯಗಳಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನ ಪ್ಪಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಎಲ್ಲಾ ದೃಶ್ಯಗಳು ಸೆರೆ ಆಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.