ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ | ಅರ್ಜಿ ಸಲ್ಲಿಸಲು ಕೊನೆ ದಿನ – ಆ.29

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹಿಂದುಳಿದ ವರ್ಗಗಳ ಯುವ ಜನರಿಗೆ ಕೌಶಲ್ಯ ಅಭಿವೃದ್ಧಿಪಡಿಸಿ ಉದ್ಯೋಗಮುಖಿಯನ್ನಾಗಿಸಲು ಸರ್ಕಾರದ ಸಂಸ್ಥೆಗಳಾದ ITIs , GTTC , KGTTI ರಲ್ಲಿ ಅಲ್ಪಾವಧಿ ಕೋರ್ಸುಗಳ ಮೂಲಕ ಕೌಶಲ್ಯ ತರಬೇತಿ ನೀಡಲು ಕೌಶಲ್ಯ ಕರ್ನಾಟಕ ತಂತ್ರಾಂಶದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ , ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ , ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ , ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ , ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ ಒಳಪಡುವ ( ಒಕ್ಕಲಿಗ , ಲಿಂಗಾಯತ , ಕಾಡುಗೊಲ್ಲ , ಹಟ್ಟಿಗೊಲ್ಲ ಮತ್ತು ಮರಾಠ ನಿಗಮಗಳಡಿಯಲ್ಲಿ ಬರುವ ಸಮುದಾಯಗಳನ್ನು ಹೊರತುಪಡಿಸಿ ) ವರ್ಗದ ಯುವ ಜನರಿಗೆ ಅರ್ಜಿ ಆಹ್ವಾನಿಸಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಅರ್ಹತೆಗಳು:
*10 ನೇತರಗತಿ / ದ್ವಿತೀಯಪಿ.ಯು.ಸಿ . / ಡಿಪ್ಲೋಮ / ಪದವಿ / ಇಂಜಿನಿಯರಿಂಗ್ ವ್ಯಾಸಂಗವನ್ನು ಪೂರ್ಣಗೊಳಿಸಿರಬೇಕು
*ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾತಿ ಪಟ್ಟಿಯಲ್ಲಿ ನಮೂದಿಸಿದ ಮೇಲ್ಕಂಡ ನಿಗಮಗಳ ವ್ಯಾಪ್ತಿಗೆ ಒಳಪಡುವ ಜಾತಿಗಳಿಗೆ ಸೇರಿದವರಾಗಿರಬೇಕು
*ಅರ್ಜಿದಾರರ ವಯಸ್ಸು 18 ರಿಂದ 25 ವರ್ಷಗಳ ಒಳಗಿರಬೇಕು
*ಪ್ರವರ್ಗ -1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಕುಟುಂಬದ ವಾರ್ಷಿಕ ವರಮಾನ / ಆದಾಯ ಮಿತಿ ಇರುವುದಿಲ್ಲ. ಪ್ರವರ್ಗ -2 ಎ , 3 ಎ ಮತ್ತು 3 ಬಿಗೆ ಸೇರಿದ ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ / ಆದಾಯ ರೂ.8.00 ಲಕ್ಷಗಳಿಗಿಂತ ಕಡಿಮೆ ಇರಬೇಕು .

https://www.dbcdc.karnataka.gov.in ( ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮ )

https://kaad.karnataka.gov.in ( ಅಲೆಮಾರಿ ಅಭಿವೃದ್ಧಿ ನಿಗಮ )

https://kssd.karnataka.gov.in ( ಸವಿತಾ ಸಮಾಜ ಅಭಿವೃದ್ಧಿ ನಿಗಮ

https://kmmd.karnataka.gov.in ( ಮಡಿವಾಳ ಅಭಿವೃದ್ಧಿ ನಿಗಮ )

https://uppardevelopment.karnataka.gov.in ( ಉಪ್ಪಾರ ಅಭಿವೃದ್ಧಿ ನಿಗಮ )

https://kvcdcl.karnataka.gov.in ( ವಿಶ್ವಕರ್ಮ ಅಭಿವೃದ್ಧಿ ನಿಗಮ )

https://ambigaradevelopment.karnataka.gov.in ( ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ )

ಸಹಾಯವಾಣಿ ಸಂಖ್ಯೆ
080-22374832 , 9606066389 ಮತ್ತು 8824300400 ಅಥವಾ ಆಯಾ ಜಿಲ್ಲಾ ಕಛೇರಿಯ ದೂರವಾಣಿ ಸಂಖ್ಯೆಗಳನ್ನು ವೆಬ್‌ಸೈಟ್‌ನಲ್ಲಿ ನೀಡಲಾಗಿರುತ್ತದೆ .

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಆನ್‌ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ದಿನಾಂಕ : 14-07-2022 ರಿಂದ ದಿನಾಂಕ : 29-08-2022ರೊಳಗೆ ಸಲ್ಲಿಸಲು ಅವಕಾಶವಿರುತ್ತದೆ.

ಸೂಚನೆ
ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಪಾವತಿಸುವಂತಿಲ್ಲ . ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾ ವ್ಯವಸ್ಥಾಪಕರ ಕಛೇರಿ , ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಕಛೇರಿಯ ಅವಧಿಯಲ್ಲಿ ಉಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇರುತ್ತದೆ .

ಅರ್ಜಿದಾರರು https://www.kaushalkar.com/ ಜಾಲತಾಣದೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಮೇಲ್ಕಂಡ ವೆಬ್‌ಸೈಟ್‌ಗಳನ್ನು ಸಂಪರ್ಕಿಸುವುದು .

error: Content is protected !!
Scroll to Top
%d bloggers like this: