ಫೋನ್ ಪೇ, ಗೂಗಲ್ ಪೇ ಬಳಕೆ ಮಾಡೋಕು ಮುನ್ನ ಹುಷಾರ್!!!
ದೇಶವು ಡಿಜಿಟಲೀಕರಣ ದತ್ತ ದಾಪು ಕಾಲಿಡುತ್ತಿದ್ದು, ಎಲ್ಲವೂ ಟೆಕ್ನಾಲಾಜಿಮಯವಾಗಿದೆ. ಹೀಗಾಗಿ, ಎಲ್ಲಾ ಬ್ಯಾಂಕಿಂಗ್ ಕೆಲಸವೂ ಕೂತಲ್ಲಿಂದಲೇ ನಡೆಯುತ್ತದೆ. ಪೇಮೆಂಟ್ ಗಾಗಿ ಗೂಗಲ್ ಪೇ, ಫೋನ್ ಪೇ ಬಳಸುತ್ತಾರೆ. ಆದ್ರೆ, ಗ್ರಾಹಕರಿಗೆ ಇದು ಉಪಯೋಗವಾದರೆ, ಇನ್ನೂ ಕೆಲವು ಕಿರಾತಕರು ಇದನ್ನೇ ಬಂಡವಾಳವಾಗಿಟ್ಟುಕೊಂಡು ವಂಚಿಸುತ್ತಿದ್ದಾರೆ.
ಹೌದು. ಅಂಗಡಿಗಳಲ್ಲಿ ಫೋನ್ ಪೇ, ಗೂಗಲ್ ಪೇ ಯನ್ನು ಇತ್ತೀಚೆಗೆ ಹೆಚ್ಚಾಗಿ ಯೂಸ್ ಮಾಡುತ್ತಾರೆ. ಇಂತಹ ಆಪ್ ಮೂಲಕ ಹಣ ಸಂದಾಯ ಮಾಡೋರು ಹೇಗೆಲ್ಲ ಮೋಸ ಮಾಡ್ತಾರೆ ಅನ್ನೋದಕ್ಕೆ ಇಲ್ಲೊಂದು ಸ್ಪಷ್ಟ ನಿದರ್ಶನ ಸಿಕ್ಕಿದೆ.
ಬಂಗಾರದ ಅಂಗಡಿಗೆ ತೆರಳಿ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರದ ಅಭರಣ ಖರೀದಿಸಿ, ಬಳಿಕ ಅಂಗಡಿ ಮಾಲೀಕರಿಗೆ ಟೋಪಿ ಹಾಕಿದ ಘಟನೆ ನಡೆದಿದೆ. ಇದೀಗ ಈ ಕಿರಾತಕರ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ.
ವಸ್ತುಗಳನ್ನು ಖರೀದಿಸಿ ಪೇಮೆಂಟ್ ಏನೋ ಮಾಡುತ್ತಾರೆ. ಅದರಂತೆ ಹಣ ಹೋದ ನೋಟಿಫಿಕೇಟಿನ್ ಬರುತ್ತದೆ. ಆದರೆ, ಹಣ ಮಾತ್ರ ಅಂಗಡಿ ಮಾಲೀಕನ ಖಾತೆ ಸೇರಿರುವುದಿಲ್ಲ. ಇದೇ ರೀತಿ ಚಿನ್ನದ ಅಂಗಡಿ ವ್ಯಾಪಾರಿಗೂ ಆಗಿದೆ. ಈ ಕಿರಾತಕರು ಪೇಮೆಂಟ್ ಆಗಿದೆ ಎಂದು ತೋರಿಸಿ ಸ್ಥಳದಿಂದ ಹೋಗಿದ್ದಾರೆ. ಆದ್ರೆ ಮೋಸ ಆಗಿರೋ ಬಗ್ಗೆ ವ್ಯಾಪಾರಿಗೆ ಮತ್ತೆ ತಿಳಿದಿದೆ. ಬಳಿಕ ಎಚ್ಚೆತ್ತುಕೊಂಡು ಪೊಲೀಸ್ ಕಂಪ್ಲೇಂಟ್ ನೀಡಿದ್ದಾರೆ.
ಇಂತಹ ಒಂದೇ ರೀತಿಯ ಪ್ರಕರಣಗಳು ಬೆಳಗಾವಿ ಜಿಲ್ಲೆಯ ಗೋಕಾಕ್, ಹುಕ್ಕೇರಿ ಮತ್ತು ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವರದಿಯಾಗಿದ್ದವು. ಇದನ್ನು ಬೆನ್ನಟ್ಟಿದ ಪೊಲೀಸರು ಈಗ ಗ್ಯಾಂಗ್ ಅನ್ನು ಪತ್ತೆ ಮಾಡಿದ್ದಾರೆ. ಅಂಗಡಿ ಮಾಲೀಕರಿಗೆ ಬಲೆ ಹಾಕಲು ಹೋದವರು ಈಗ ಪೊಲೀಸ್ ಅತಿಥಿಯಾಗಿದ್ದಾರೆ.