ಮಧ್ಯಾಹ್ನದ ಬಿಸಿ ಊಟದಲ್ಲಿ ಶಾಲಾ ಮಕ್ಕಳಿಗೆ ಇನ್ನು ಮುಂದೆ ಬಿಸಿ ಬಿಸಿ ಮುದ್ದೆ, ಜೋಳದ ರೊಟ್ಟಿ!!!

ಶಾಲಾ ಮಕ್ಕಳ ಬಿಸಿಯೂಟದಲ್ಲಿ ಇನ್ನು ಮುಂದೆ ಮಧ್ಯಾಹ್ನ ‘ರಾಗಿ ಮುದ್ದೆ’ ಹಾಗೂ ‘ಜೋಳದ ರೊಟ್ಟಿ’ಯ ಊಟ ಸಿಗಲಿದೆ. ಸದ್ಯಕ್ಕೆ ಈಗ ಪಲಾವ್, ಗೋಧಿ ಪಾಯಿಸ, ಅನ್ನ, ಸಾಂಬಾರ್ ಮಕ್ಕಳಿಗೆ ನೀಡಲಾಗುತ್ತಿದ್ದು, ಇದರ ಜೊತೆಗೆ ದಕ್ಷಿಣ ಕರ್ನಾಟಕ ಭಾಗದ ಕಡೆಗೆ ರಾಗಿ ಮುದ್ದೆ ಮತ್ತು ಉತ್ತರ ಕರ್ನಾಟಕದ ಕಡೆ ಜೋಳದ ರೊಟ್ಟಿಯನ್ನು ನೀಡಲು ನಿರ್ಧರಿಸಿದೆ. ಇದಕ್ಕೆ ಬೇಕಾದ ಸಿದ್ಧತೆ ನಡೆಯುತ್ತಿದ್ದು, ಶಿಕ್ಷಣ ಇಲಾಖೆ ಕೇಂದ್ರ ಸರಕಾರದ ಅನುಮತಿ ಜತೆಗೆ ಅನುದಾನದ ನಿರೀಕ್ಷೆಯಲ್ಲಿ ಇದೆ.

ಮಕ್ಕಳಿಗೆ ಪೌಷ್ಟಿಕಾಂಶದ ಊಟ ನೀಡುವ ಉದ್ದೇಶದಿಂದ ಶಾಲಾ ಮತ್ತು ಸಾಕ್ಷರತಾ ಇಲಾಖೆಯು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿದೆ.


Ad Widget

Ad Widget

Ad Widget

Ad Widget

Ad Widget

Ad Widget

ರಾಗಿ ಮುದ್ದೆ ಮತ್ತು ಜೋಳದ ರೊಟ್ಟಿ ಎಲ್ಲಾ ಕಡೆ ತಿನ್ನುವುದಿಲ್ಲ. ಕರ್ನಾಟಕದ ದಕ್ಷಿಣ ಭಾಗದ ಕಡೆ, ಬೆಂಗಳೂರು, ರಾಮನಗರ, ಮೈಸೂರು, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಾಗಿ ಮುದ್ದೆ ತಿನ್ನುವುದು ಹೆಚ್ಚು ರೂಢಿಯಲ್ಲಿದೆ. ಹಾಗೆನೇ ಮಲೆನಾಡು, ಕರಾವಳಿ ಪ್ರದೇಶದಲ್ಲಿ ಮುದ್ದೆ ಇವು ತಿನ್ನುವ ರೂಢಿ ಇಲ್ಲ. ಉತ್ತರ ಕರ್ನಾಟಕದ ಹಲವು ಕಡೆ ರೊಟ್ಟಿ ತಿನ್ನುವುದಿಲ್ಲ. ಈ ಕಾರಣದಿಂದ ಮುದ್ದೆ ಮತ್ತು ರೊಟ್ಟಿಗಾಗಿ ಜಿಲ್ಲಾವಾರು ವಿಭಾಗ ಮಾಡುವುದು ಕಷ್ಟವಾದ್ದರಿಂದ, ಜಿಲ್ಲೆ ಬದಲಾಗಿ ತಾಲೂಕುವಾರು ವಿಂಗಡಣೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಮುದ್ದೆ ಮಾಡುವುದು ಒಂದು ಸವಾಲಿನ ಕೆಲಸ. ಹಾಗಾಗಿ ಸದ್ಯಕ್ಕೆ ಮಕ್ಕಳಿಗೆ 50 ಗ್ರಾಂ ಮುದ್ದೆಯನ್ನು, ವಿದ್ಯಾರ್ಥಿಗಳ ಊಟದ ಸಾಮರ್ಥ್ಯದ ಆಧಾರದ ಮೇಲೆ ಮಾಡಲು ಇಲಾಖೆ ಚಿಂತನೆ ಮಾಡಿದೆ. ಹಾಗೆನೇ ಮುದ್ದೆಯ ಪರ್ಯಾಯವಾಗಿ ” ರಾಗಿ ಅಂಬಲಿ” ಯನ್ನು ನೀಡುವ ಯೋಚನೆ ಇಲಾಖೆ ಮಾಡಿದೆ.

ಕೇಂದ್ರ ಸರಕಾರದ ಅನುದಾನ ಸಿಕ್ಕಲ್ಲಿ ಯೋಜನೆ ಅನುಷ್ಠಾನಕ್ಕೆ ಅನುಕೂಲವಾಗಲಿದೆ ಎಂಬುದು ಶಿಕ್ಷಣ ಇಲಾಖೆಯ ಆಲೋಚನೆಯಾಗಿದೆ.

error: Content is protected !!
Scroll to Top
%d bloggers like this: