ನೀರಿನಲ್ಲಿ ಈಜುವ ಆಸೆಯಿಂದ ಪ್ರಾಣವನ್ನೇ ಕಳೆದುಕೊಂಡ ಮೂವರು ಬಾಲಕರು!

Share the Article

ಚಿಕ್ಕಬಳ್ಳಾಪುರ: ನೀರಿನಲ್ಲಿ ಈಜುವ ಆಸೆಯಿಂದ ಅವಳಿ ಮಕ್ಕಳಿಬ್ಬರು ಸೇರಿ ಮೂವರು ದಾರುಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೋಡೇಗಂಡ್ಲು ಗ್ರಾಮದಲ್ಲಿ ನಡೆದಿದೆ.

ಮೃತರು ವೆಂಕಟೇಶ್- ಗಾಯತ್ರಿ ದಂಪತಿಯ ಅವಳಿ ಮಕ್ಕಳಾದ ರಾಮ(10) – ಲಕ್ಷ್ಮಣ(10) ಹಾಗೂ ಮುನಿರಾಜು-ಗೌತಮಿ ದಂಪತಿಯ ಮಗ ಪ್ರಜ್ವಲ್ (9) ಮೃತಪಟ್ಟವರು.

ಗ್ರಾಮದ ಕೆರೆ ಧಾರಾಕಾರ ಮಳೆಯಿಂದ 30 ವರ್ಷಗಳ ನಂತರ ತುಂಬಿ ಹರಿದಿತ್ತು. ಹೀಗಾಗಿ, ಸಂಜೆ ಶಾಲೆ ಮುಗಿದ ಮೇಲೆ ಬಂದ ಬಾಲಕರು ಕೆರೆ ನೋಡಲು ಹೋಗಿ ಈಜುವ ಆಸೆಯಾಗಿ ಪ್ರಾಣ ಕಳೆದುಕೊಂಡಿದ್ದಾರೆ.

ಮೂವರು ಬಾಲಕರ ಸಾವಿನಿಂದ ಇಡೀ ಗ್ರಾಮದಲ್ಲಿ ನೋವಿನ ಅಳಲು ತುಂಬಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.