ಹೋಟೆಲ್ ಗಳ ಬಾತ್ ರೂಂನಲ್ಲಿ ಎರಡು ಗಾಜಿನ ಲೋಟ ಇಡುವುದೇಕೆ?

ಐಷರಾಮಿ ಹೋಟೆಲ್ ಎಂದರೆ ಒಂದು ರೀತಿಯ ಸ್ವರ್ಗವಿದ್ದಂತೆ. ಕ್ಲೀನಿಂಗ್, ಮೈಂಟೆನೆನ್ಸ್ ವಿಷಯದಲ್ಲಿ ಈ ಹೈ ಫೈ ಹೋಟೆಲ್ ಗಳು ಯಾವುದೇ ಕಾಂಪ್ರಮೈಸ್ ಮಾಡುವುದಿಲ್ಲ. ಅಂದ ಹಾಗೆ ನಿಮಗೆ ಗೊತ್ತೇ?ಈ ಐಷರಾಮಿ ಹೋಟೆಲ್ ಕೊಠಡಿಗಳಲ್ಲಿನ ಸ್ನಾನಗೃಹದಲ್ಲಿ ಎರಡು ಕುಡಿಯುವ ಲೋಟಗಳನ್ನು ಇಡುವುದನ್ನು ನೀವು ನೋಡಿರಬಹುದು. ಆದರೆ ಏಕೆ ಇಡುತ್ತಾರೆ ಎಂಬುದು ಗೊತ್ತೇ ನಿಮಗೆ? ಬನ್ನಿ ತಿಳಿಯೋಣ.

ಒಂದು ಕೋಣೆಯಲ್ಲಿ ಅಥವಾ ಕೊಠಡಿಯಲ್ಲಿ, ರೂಂ ನಲ್ಲಿ ನೀರಿನ ಗ್ಲಾಸ್ ಇಡುವುದು ಸಹಜ. ಆದರೆ, ಬಾತ್ ರೂಂನಲ್ಲಿ ನೀರಿನ ಗ್ಲಾಸ್ ಇಡುವುದು ಏಕೆ, ಅಲ್ಲಿ ನೀರನ್ನು ಯಾರಾದ್ರೂ ಕುಡೀತಾರಾ ಎಂದು ಆಲೋಚನೆ ನಿಮಗೆ ತಕ್ಷಣ ಆಗಬಹುದು. ಆದರೆ ನಿಜ ಸಂಗತಿ ಬೇರೆನೇ ಇದೆ.


Ad Widget

Ad Widget

Ad Widget

Ad Widget

Ad Widget

Ad Widget

ಸ್ನಾನ ಮಾಡುವಾಗ ಬೆಲೆ ಬಾಳುವ ವಸ್ತುಗಳಿದ್ದರೆ ಆ ಗ್ಲಾಸ್ ನಲ್ಲಿ ಇಟ್ಟುಕೊಳ್ಳಲಿ, ಆ ವಸ್ತುಗಳು ಒದ್ದೆಯಾಗದಿರಲಿ, ಹಾಗೂ ಪಾರದರ್ಶಕದಲ್ಲಿದ್ದರೆ ಅಲ್ಲಿಟ್ಟಿರುವ ವಸ್ತುಗಳು ಕಾಣುತ್ತವೆ, ಧರಿಸಲು ಮರೆಯುವುದಿಲ್ಲ ಎನ್ನುವ ಕಾರಣಕ್ಕೆ ಗಾಜಿನ ಲೋಟವನ್ನು ಅಲ್ಲಿರಿಸಲಾಗುತ್ತದೆ. ಇನ್ನೊಂದು ಗ್ಲಾಸ್ ಟೂತ್‌ಬ್ರಷ್, ಟೂತ್‌ಪೇಸ್ಟ್, ಶೇವಿಂಗ್‌ಗಾಗಿ ರೇಜರ್ ಮುಂತಾದ ನೈರ್ಮಲ್ಯವನ್ನು ಇರಿಸಿಕೊಳ್ಳಲು ಅಗತ್ಯವಿರುವ ನಿಮ್ಮ ವಸ್ತುಗಳನ್ನು ನೀವು ಇರಿಸಬಹುದು.

ಅಂದ ಹಾಗೇ ಈ ಹೋಟೆಲ್ ಕೊಠಡಿಗಳಲ್ಲಿ ಯಾವಾಗಲೂ ಬಿಳಿ ಬೆಡ್‌ಶೀಟ್‌ಗಳನ್ನು ಏಕೆ ಹಾಕುವುದು ? ಏಕೆಂದರೆ ಅಲ್ಲಿನ ಹಾಸಿಗೆಗಳಿಗೆ ಸಂಬಂಧಿಸಿದ ರಹಸ್ಯಗಳನ್ನು ತಿಳಿಯಲು. ಅಂದರೆ ಬೇರೆ ಬಣ್ಣದ ಬೆಡ್‌ಶೀಟ್‌ಗಳನ್ನು ಹಾಸಿದರೆ ಅದರ ಸ್ವಚ್ಛತೆ ಬಗ್ಗೆ ನಮಗೆ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಅದೇ ಬಿಳಿ ಬಟ್ಟೆಯಾದರೆ ಕೊಳೆಯು ಸುಲಭವಾಗಿ ಕಾಣುತ್ತದೆ, ಹಾಗೂ ಬೆಡ್‌ಬ‌ಗ್ ಗಳು ಆಗದಂತೆ ತಡೆಯಬಹುದು.

error: Content is protected !!
Scroll to Top
%d bloggers like this: