ಅಲ್ ಕೈದ ಮುಖ್ಯಸ್ಥ ಅಲ್ -ಜವಾಹಿರಿ ಹತ್ಯೆ!! ಅಮೇರಿಕಾದ ಡ್ರೋನ್ ದಾಳಿಗೆ ಮಾಸ್ಟರ್ ಮೈಂಡ್ ಔಟ್
ಅಲ್ ಕೈದಾ ಉಗ್ರ ಸಂಘಟನೆಯ ಮುಖ್ಯಸ್ಥ ಒಸಮಾ ಬಿನ್ ಲಾಡೆನ್ ಹತ್ಯೆಯ ಬಳಿಕ ಇದೀಗ ಅಮೇರಿಕಾ ಮತ್ತೊರ್ವ ಅಲ್ ಕೈದಾ ಮುಖ್ಯಸ್ಥನನ್ನು ಹೊಡೆದುರುಳಿಸಿದೆ.
ಅಲ್ ಕೈದಾ ಮುಖ್ಯಸ್ಥ ಅಲ್ ಅಲ್ ಜವಾಹಿರಿ ಯನ್ನು ಡ್ರೋನ್ ದಾಳಿ ನಡೆಸುವ ಮೂಲಕ ಅಫ್ಘಾನಿಸ್ಥಾನದ ರಾಜಧಾನಿ ಕಾಬೂಲ್ ನಲ್ಲಿ ಹತ್ಯೆ ನಡೆಸಲಾಗಿದೆ ಎಂದು ಅಮೇರಿಕ ಅಧ್ಯಕ್ಷ ಜೊ ಬೈಡನ್ ಘೋಷಣೆ ಮಾಡಿದ್ದಾರೆ.ಅಮೇರಿಕಾ ತನ್ನ ನಾಗರಿಕರನ್ನು ರಕ್ಷಿಸಲು ಹೋರಾಟಕ್ಕೆ ಮುಂದಾಗುತ್ತದೆ, ನೀವು ಎಲ್ಲಿ ಅಡಗಿದ್ದರೂ, ಮರೆಮಾಚಲು ಪ್ರಯತ್ನಿಸಿದರೂ ನಮ್ಮವರು ಹುಡುಕಿ ಹುಟ್ಟಡಗಿಸಿ ಬಿಡುತ್ತಾರೆ ಎಂದು ಬೈಡನ್ ಹೇಳಿದ್ದಾರೆ.
ಜವಾಹಿರ್ ಹಲವಾರು ದಾಳಿಯನ್ನು ಮುನ್ನಡೆಸಿದ್ದು,1998ರಲ್ಲಿ ಕಿನ್ಯ, ತಾಂಜಾನಿಯಗಳಲ್ಲಿ ನಡೆಸಿದ ಬಾಂಬ್ ದಾಳಿಯಲ್ಲಿ ಸುಮಾರು 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು,5000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅದಲ್ಲದೇ 2000 ನೇ ಇಸವಿಯ ಅಕ್ಟೊಬರ್ ತಿಂಗಳಲ್ಲಿ US ಕೋಲ್ ನೌಕಾ ಹಡಗಿನ ದಾಳಿ ನಡೆಸಿ ಅಮೇರಿಕಾದ ನಾವಿಕರ ಸಹಿತ ಸುಮಾರು 30ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು ಎನ್ನಲಾಗಿದೆ.
ಸದ್ಯ 21 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳಲು ಮುಂದಾದ ಅಮೇರಿಕಾ ಲಾಡನ್ ಹತ್ಯೆಯ ವರುಷಗಳ ನಂತರ ಅದೇ ಸಂಘಟನೆಯ ಇನ್ನೋರ್ವ ಮುಖ್ಯಸ್ಥನನ್ನು ಉರುಳಿಸಿ ಹಗೆ ತೀರಿಸಿಕೊಂಡಿದೆ.ಅಲ್ ಜವಾಹಿರ್ ಹತ್ಯೆಯಿಂದಾಗಿ ನಮ್ಮವರ ಸಾವಿಗೆ ನ್ಯಾಯಾ ಸಿಕ್ಕಂತಾಗಿದೆ ಎಂದು ಬೈಡನ್ ತಿಳಿಸಿದ್ದಾರೆ.