‘ಅಕ್ರಮ-ಸಕ್ರಮ’ : ಕಂದಾಯ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಭರ್ಜರಿ ಗುಡ್ ನ್ಯೂಸ್

ಕಂದಾಯ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಬಡವರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದೆ. ಯಸ್, ಶೀಘ್ರದಲ್ಲಿಯೇ ಕಂದಾಯ ಜಾಗದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಸಕ್ರಮಗೊಳಿಸುವ ಕಾರ್ಯಕ್ರಮ ಮಾಡಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 12 ಲಕ್ಷ ಮಂದಿ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದು, ಇದನ್ನು ಸಕ್ರಮ ಮಾಡುವ ಕುರಿತಂತೆ ನ್ಯಾಯಾಲಯದಲ್ಲಿದ್ದ ತಡೆಯಾಜ್ಞೆ ತೆರವಾಗುವ ಸಾಧ್ಯತೆ ಇದೆ. ತೆರವಾಗುತ್ತಿದ್ದಂತೆ ರಾಜ್ಯ ಸರ್ಕಾರವು ಸಕ್ರಮಗೊಳಿಸುವ ಕೆಲಸ ಪ್ರಾರಂಭಿಸಲಿದೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಅಕ್ರಮ ಸಕ್ರಮ ಯೋಜನೆ ಸುಮಾರು ಒಂದೂವರೆ ದಶಕದ ಕಾನೂನೂ ಹೋರಾಟದ ಅಡ್ಡಿಯಿಂದ ಹೊರಬರುತ್ತಿದ್ದು, ಬಿಬಿಎಂಪಿ ವ್ಯಾಪ್ತಿಯ ಸುಮಾರು 5 ಲಕ್ಷ ಮನೆಗಳು ಒಳಗೊಂಡು ಅಂದಾಜು 12 ಲಕ್ಷ ಆಸ್ತಿಗಳ ಸಕ್ರಮ ಪ್ರಕ್ರಿಯೆಗೆ ಶೀಘ್ರ ಚಾಲನೆ ನೀಡಲು ಸರಕಾರ ಮುಂದಾಗಿದೆ. ಆದರೆ, ಈ ಪ್ರಕ್ರಿಯೆಯಿಂದ 2,400 ಚದರಡಿಗಿಂತ (40/60) ಹೆಚ್ಚು ವಿಸ್ತೀರ್ಣದ ಆಸ್ತಿಗಳು ಹಾಗೂ ವಾಣಿಜ್ಯ ಕಟ್ಟಡಗಳನ್ನು ಸಂಪೂರ್ಣ ಹೊರಗಿಡಲಾಗುತ್ತಿದೆ. ಈ ಯೋಜನೆ ಜಾರಿಯಿಂದಾಗಿ ರಾಜ್ಯ ಬೊಕ್ಕಸಕ್ಕೆ ದಂಡ ಶುಲ್ಕದ ರೂಪದಲ್ಲಿ 20,000 ಕೋಟಿ ರೂಪಾಯಿ ಆದಾಯ ಸಂಗ್ರಹವಾಗುವ ಸಾಧ್ಯತೆ ಇದೆ.

ನಮ್ಮ ಬೆಂಗಳೂರು ಪ್ರತಿಷ್ಠಾನವು ತನ್ನ ಅರ್ಜಿಯನ್ನು ಕೋರ್ಟ್‌ನಿಂದ ಹಿಂಪಡೆಯುತ್ತಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರ ಕನಸಿನ ಮನೆಗೆ ಅಡ್ಡಿಯಾಗದಂತೆ ರಾಜ್ಯ ಸರಕಾರ ಮಾಡಿದ ಮನವಿಗೆ ನಮ್ಮ ಬೆಂಗಳೂರು ಪ್ರತಿಷ್ಠಾನ ಸ್ಪಂದಿಸಿದೆ.
ಹಾಗಾಗಿ ಸುಪ್ರೀಂ ಕೋರ್ಟ್ ನೀಡಿದ ತಡೆಯಾಜ್ಞೆ ತೆರವಾಗಲಿದೆ. ಸುಮಾರು 15 ವರ್ಷಗಳಿಂದ ಬಡವರು ಮತ್ತು ಮಧ್ಯಮ ವರ್ಗದ ಜನರು ನಿರೀಕ್ಷೆ ಮಾಡುತ್ತಿರುವ ಈ ಯೋಜನೆಯನ್ನು ಸಮೀಪಿಸುತ್ತಿರುವ ಚುನಾವಣೆಗಳನ್ನು ಗುರಿಯಾಗಿಟ್ಟುಕೊಂಡು ಆದಷ್ಟು ಶೀಘ್ರ ಅನುಷ್ಠಾನಗೊಳಿಸಲು ಸರಕಾರ ಬಯಸಿದೆ. ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ತೆರವಾದ ಕೂಡಲೇ ದಂಡ ಶುಲ್ಕದ ಪ್ರಮಾಣ ನಿಗದಿಪಡಿಸಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸರಕಾರ ನಿರ್ಧಾರ ಮಾಡಿದೆ.

ಷರತ್ತು ಏನು ? 2,400 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ಮನೆ, ಆಸ್ತಿಗಳನ್ನು ಸಕ್ರಮ ಮಾಡಬಾರದು ಮತ್ತು ವಾಣಿಜ್ಯ ಕಟ್ಟಡಗಳನ್ನು ಯೋಜನೆ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬ ಪ್ರತಿಷ್ಠಾನದ ಎರಡು ಷರತ್ತುಗಳಿಗೆ ಸರಕಾರ ಒಪ್ಪಿಕೊಂಡಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರು ಸುಮಾರು 15 ವರ್ಷಗಳಿಂದ ನಿರೀಕ್ಷಿಸುತ್ತಿರುವ ಈ ಯೋಜನೆಯನ್ನು ಸಮೀಪಿಸುತ್ತಿರುವ ಚುನಾವಣೆಗಳನ್ನು ಗುರಿಯಾಗಿಟ್ಟುಕೊಂಡು ಆದಷ್ಟು ಶೀಘ್ರ ಅನುಷ್ಠಾನಗೊಳಿಸಲು ಸರಕಾರ ಬಯಸಿದೆ. ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ತೆರವಾದ ಕೂಡಲೇ ದಂಡ ಶುಲ್ಕದ ಪ್ರಮಾಣ ನಿಗದಿಪಡಿಸಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸರಕಾರ ನಿರ್ಧರಿಸಿದೆ.

Leave A Reply

Your email address will not be published.