ಸಂಭೋಗ ಮಾಡುವಾಗ ಸಂಗಾತಿಗೆ ಅರಿವಿಲ್ಲದೆ “ಕಾಂಡೋಂ” ತೆಗೆದರೆ ಅಪರಾಧ | ಸುಪ್ರೀಂಕೋರ್ಟ್

Share the Article

ಗರ್ಭನಿರೋಧಕ ಮತ್ತು ಸುರಕ್ಷೆ ನೀಡುವ ಕಾಂಡೋಮ್ ಅನ್ನು ಸಂಗಾತಿಯ ಅನುಮತಿ ಇಲ್ಲದೇ ತೆಗೆದರೆ, ಅಂಥ ವ್ಯಕ್ತಿ ಕಾನೂನಿನ ಅನ್ವಯ ಗಂಭೀರ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ. ತನ್ನ ಅರಿವಿಗೆ ಬಾರದೇ ಪ್ರಿಯಕರ ಕಾಂಡೋಮ್ ತೆಗೆದು ಲೈಂಗಿಕ ಕ್ರಿಯೆ ನಡೆಸಿದ್ದರ ವಿರುದ್ಧ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಕೆನಡಾ ಸುಪ್ರೀಂ ಕೋರ್ಟ್ ತೀರ್ಪು ನೀಡಲಾಗಿದೆ.

ಸಂಭೋಗ ಮಾಡುವ ಸಮಯದಲ್ಲಿ ತನ್ನ ಎದುರು ಕಾಂಡೋಮ್ ಧರಿಸಿ, ಲೈಂಗಿಕ ಕ್ರಿಯೆ ನಡೆಸುವಾಗ ಗೊತ್ತಿಲ್ಲದಂತೆಯೇ ಅದನ್ನು ತನ್ನ ಪ್ರಿಯಕರ ತೆಗೆದಿದ್ದಾನೆ ಎಂದು ಮಹಿಳೆಯೊಬ್ಬಳು ದೂರಿದ್ದಳು‌. ಅಷ್ಟು ಮಾತ್ರವಲ್ಲದೇ ಈ ಕಾರಣದಿಂದ ತನಗೆ ಎಚ್‌ಐವಿ ಸೋಂಕು ಬಂದಿರುವುದಾಗಿ ಮಹಿಳೆ ವಾದಿಸಿದ್ದರು.

2017ರಲ್ಲಿ ಆನ್‌ಲೈನ್‌ನಲ್ಲಿ ನಮ್ಮಿಬ್ಬರ ಪರಿಚಯವಾಗಿ, ನಂತರ ದೈಹಿಕ ಸಂಪರ್ಕದವರೆಗೆ ಆತ್ಮೀಯತೆ ಬೆಳೆದಿತ್ತು. ಆಗ ಕಾಂಡೋಮ್ ಬಳಸಿ ಸಂಭೋಗ ಕ್ರಿಯೆ ನಡೆಸುವುದಾಗಿ ಆತ ಹೇಳಿದ್ದ. ಆದರೆ ಆತ ಕಾಂಡೋಂ ತೆಗೆದಿರುವುದು ನನ್ನ ಅರಿವಿಗೆ ಬಂದಿರಲಿಲ್ಲ. ಎಚ್‌ಐವಿ ಸೋಂಕು ತಗುಲಿದಾಗಲೇ ನನಗೆ ಇದು ತಿಳಿಯಿತು ಎಂದು ಮಹಿಳೆ ದೂರಿದ್ದಾರೆ.

ಕಾಂಡೋಮ್ ಇಲ್ಲದೆಯೂ ಲೈಂಗಿಕತೆಗೆ ಆಕೆ ಅನುಮತಿಸಿದ್ದಳು ಎಂದು ಆರೋಪಿ ವಾದಿಸಿದ್ದರಿಂದ ಕೆಳಹಂತದ ಕೋರ್ಟ್ ಮಹಿಳೆಯ ಅರ್ಜಿಯನ್ನು ವಜಾ ಮಾಡಿತ್ತು. ಇದನ್ನು ಆಕೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಳು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕೋರ್ಟ್, ಸಂಗಾತಿಯ ಅನುಮತಿಯಿಲ್ಲದೇ ಸಂಭೋಗದ ವೇಳೆ ಕಾಂಡೋಮ್ ತೆಗೆಯುವುದೂ ಅಪರಾಧ ಎಂದು ಹೇಳಿದೆ.

ಒಬ್ಬರ ಅನುಮತಿ ಇಲ್ಲದೆಯೇ ಕಾಂಡೋಮ್ ತೆಗೆದು ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಅಪರಾಧ. ಹೀಗೆ ಮಾಡಿದವರು ಅಪರಾಧಿಯಾಗುತ್ತಾರೆ. ಬ್ರಿಟನ್ ಮತ್ತು ಸ್ವಿಜರ್ಲೆಂಡ್ ನಲ್ಲಿಯೂ ಇದಾಗಲೇ ಇಂಥದ್ದೇ ತೀರ್ಪುಗಳನ್ನು ಕೋರ್ಟ್ ಗಳು ನೀಡಿವೆ ಎಂದು ನ್ಯಾಯಮೂರ್ತಿಗಳು ಹೇಳಿದರು. ಈ ಹಿನ್ನೆಲೆಯಲ್ಲಿ ಈಗ ಈ ವ್ಯಕ್ತಿ ಕಾನೂನಿನ ಅನ್ವಯ ಕಠಿಣ ಶಿಕ್ಷೆಗೆ ಅರ್ಹ ಎಂದಿದೆ ಕೋರ್ಟ್ ಹೇಳಿದೆ.

Leave A Reply

Your email address will not be published.