ಕಾವು : ಬುಶ್ರಾ ವಿದ್ಯಾಸಂಸ್ಥೆಯಲ್ಲಿ ವನ ಮಹೋತ್ಸವ ,ಗ್ರೀನ್ ಡೇ ಆಚರಣೆ ಹಾಗೂ ಸೈನ್ಸ್ ಮತ್ತು ಇಕೋ ಕ್ಲಬ್ ನ ಉದ್ಘಾಟನೆ
ಕಾವು : ಬುಶ್ರಾ ವಿದ್ಯಾಸಂಸ್ಥೆ ಕಾವು ಇಲ್ಲಿ ವನಮಹೋತ್ಸವ ,ಗ್ರೀನ್ ಡೇ ಆಚರಣೆ ಹಾಗೂ ಸೈನ್ಸ್ ಮತ್ತು ಇಕೋ ಕ್ಲಬ್ ನ ಉದ್ಘಾಟನೆ ನಡೆಯಿತು. ಬುಶ್ರಾ ವಿದ್ಯಾಸಂಸ್ಥೆ ಸ್ಥಾಪಕಧ್ಯಕ್ಷರಾದ ಅಬ್ದುಲ್ ಅಝೀಝ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ಅರಣ್ಯ ಇಲಾಖೆಯ ಅರಣ್ಯ ರಕ್ಷಕರಾದ ಸತೀಶ್ ಡಿಸೋಝಾ ರವರು ಅರಣ್ಯ ವನ್ನು ನಾವೆಲ್ಲರೂ ಉಳಿಸಿ ಬೆಳೆಸುವಲ್ಲಿ ಹಾಗೂ ಸಂರಕ್ಷಿಸುವಲ್ಲಿ ನಮ್ಮೆಲ್ಲರ ಪಾತ್ರ ಅತಿ ಪ್ರಾಮುಖ್ಯವಾಗಿದೆ ,ನಾವೆಲ್ಲರೂ ಅದರ ಕಡೆ ಆಕರ್ಷಿತರಾಗಬೇಕಿದೆ ಎಂದರು. ಪುತ್ತೂರು ಕ್ಯಾಂಪ್ಕೋ ಲಿಮಿಟೆಡ್ ಇಂಜಿನಿಯರ್ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ಕಾರ್ತಿಕ್ ಭಟ್ ಸೈನ್ಸ್ ಮತ್ತು ಇಕೋ ಕ್ಲಬ್ ಅನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಆ ಬಳಿಕ ಶಾಲಾ ಪರಿಸರದಲ್ಲಿ ಅತಿಥಿಗಳ ಸಮ್ಮುಖದಲ್ಲಿ ಹಣ್ಣುಗಳ ಗಿಡಗಳನ್ನು ನೆಡಲಾಯಿತು.ವಿಶೇಷವಾಗಿ ಆ ದಿನ ಪುಟಾಣಿ ಮಕ್ಕಳು, ಅಧ್ಯಾಪಕ ವೃಂದ ,ಭೋದಕೇತರ ವೃಂದ ಹಸಿರು ಬಣ್ಣದ ಉಡುಪು ಧರಿಸಿ ರಂಜಿಸಿದರು.
ಬಹುಮಾನ ವಿತರಣೆ : ಪರಿಸರ ದಿನದ ಅಂಗವಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿದ್ದು ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯೋಪಾಧ್ಯಯರಾದ ಅಮರನಾಥ್ ಬಿ ಪಿ , ಶಾಲಾ ಆಡಳಿತಾಧಿಕಾರಿ ನೂರುದ್ದೀನ್ , ಬದ್ರುದ್ದೀನ್ , ಕಾರ್ಯಕ್ರಮ ಸಂಯೋಜಕಿ ಝುಬೈದಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಲ್ ಕೆ ಜಿ , ಯು ಕೆ ಜಿ ಪುಣಾಣಿ ಮಕ್ಕಳು ಪ್ರಾರ್ಥಿಸಿದರು.ಶಾಲಾ ಮುಖ್ಯ ಗುರು ಅಮರನಾಥ್ ಬಿ ಪಿ ಸ್ವಾಗತಿಸಿ , ಶಿಕ್ಷಕಿ ರಾಧಿಕ ವಂದಿಸಿದರು. ಶಿಕ್ಷಕಿ ಹೇಮಲತಾ ಕಜೆಗದ್ದೆ ಕಾರ್ಯಕ್ರಮ ನಿರೂಪಿಸಿದರು.